ರಾಷ್ಟ್ರೀಯ ಪಕ್ಷಗಳಿಗೆ ಚೆಕ್​ ಇಟ್ಟ ಕಾಕ್ರೋಚ್ ಜನತಾ ಪಾರ್ಟಿ! ರಾಜಕಾರಣದಲ್ಲಿ ಶುರುವಾಯ್ತು ಜಿರಳೆ, ಸೊಳ್ಳೆ, ಹೆಗ್ಗಣಗಳದ್ದೇ ದರ್ಬಾರು

ಹಂಚಿಕೊಳ್ಳಿ
WhatsApp Facebook X Telegram
Cockroach Janta Party Trend: Mosquito and Bandicoot Parties
Cockroach Janta Party Trend: Mosquito and Bandicoot Parties

ಮಲೆನಾಡು ಟುಡೆ ಸುದ್ದಿ / ಮಂಗಳೂರು / ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರು ಯುವಜನರನ್ನು ಜಿರಳೆಗೆ ಹೋಲಿಸಿದ್ದಾರೆ ಎನ್ನಲಾದ ಹೇಳಿಕೆಯಿಂದಾಗಿ ಇಡೀ ದೇಶದಲ್ಲಿಯೇ ಹೊಸದೊಂದು ಅಲೆ ಎಬ್ಬಿಸಿದೆ. ನೆರೆಹೊರೆಯ ದೇಶಗಳಲ್ಲಿ ಕಂಡ ಜೆಂಜಿ ಚಳುವಳಿಯಂತೆ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಜಿರಳೆ ಹೆಸರಿನಲ್ಲಿ ಹೊಸದೊಂದು ಅಭಿಯಾನ ಆರಂಭವಾಗಿದೆ. ಅಷ್ಟೆ ಅಲ್ಲದೆ ರಾಷ್ಟ್ರೀಯ ಪಕ್ಷಗಳಿಗೆ ಈ ಅಭಿಯಾನ ತಲೆಬಿಸಿ ತರಲಾರಂಭಿಸಿದೆ.

ರಾಷ್ಟ್ರೀಯ ಪಕ್ಷಗಳಿಗೆ ಚೆಕ್​ ಇಟ್ಟ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಎಂಬ ಹೆಸರಿನ ಪಾರ್ಟಿಯನ್ನ ಘೋಷಿಸಲಾಗಿದ್ದು, ಈ ಅಕೌಂಟ್​ ದೇಶಾದ್ಯಂತ ಭಾರಿ ಟ್ರೆಂಡ್ ಸೃಷ್ಟಿಸಿದೆ. ಅಲ್ಲದೆ ಈ ಜಿರಳೆ ಪಾರ್ಟಿಗೆ ಪ್ರತಿಯಾಗಿ ರಾಜ್ಯದ ಕರಾವಳಿ ಭಾಗದಲ್ಲಿ ‘ಉಮಿಲ್ (ಸೊಳ್ಳೆ) ಜನತಾ ಪಾರ್ಟಿ’ ಹಾಗೂ ‘ಪೆರ್ಗುಡೆ (ಹೆಗ್ಗಣ) ಜನತಾ ಪಾರ್ಟಿ ಎಂಬ ಹೊಸ ಸಾಮಾಜಿಕ ಜಾಲತಾಣದ ಪುಟಗಳು ಸೃಷ್ಟಿಯಾಗುತ್ತಿವೆ ಮತ್ತು ಹಿಟ್ ಆಗುತ್ತಿವೆ.

ಅಂದಹಾಘೆ ಅಭಿಜಿತ್ ದಿಪ್ಕೆ ಎಂಬಾತ ಇನ್‌ಸ್ಟಾಗ್ರಾಮ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಖಾತೆಯನ್ನು ತೆರೆದಿದ್ದ. ಸದ್ಯ ಈ ಪೇಜ್​ ಸಾಕಷ್ಟು ವೈರಲ್​ ಆಗುತ್ತಿದೆ. ಇನ್ನೂ ವಿಶೇಷ ಅಂದರೆ, ಇದೇ ಹೆಸರಿನ ಅಕೌಂಟ್​ ಆರಂಭವಾದ ಕೇವಲ ಒಂದೇ ವಾರದಲ್ಲಿ ಎಕ್ಸ್‌ ಖಾತೆಯಲ್ಲಿ ಸುಮಾರು 16,800 ಸದಸ್ಯತ್ವ ಪಡೆಯುವ ಮೂಲಕ ಸಂಚಲನ ಸೃಷ್ಟಿಸಿತ್ತು. ಆದರೆ ಈ ಬೆಳವಣಿಗೆ ಬೆನ್ನಲ್ಲೆ ಈ ಎಕ್ಸ್ ಅಕೌಂಟ್​ ಬ್ಯಾನ್ ಆಗಿತ್ತು. ಇನ್ನೂ ಇನ್​ಸ್ಟಾದಲ್ಲಿ 1.7 ಕೋಟಿಗೂ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಈ ಪೇಜ್​ ಅದಾಗಲೇ ಆನ್​ಲೈನ್​ ಅಭಿಯಾಯವನ್ನ ಆರಂಭಿಸಿದೆ. ವಿಶೇಷ ಅಂದರೆ, ಪತ್ರಿಕೆಯೊಂದರ ಪ್ರಕಾರ, ಇನ್​ಸ್ಟಾದಲ್ಲಿ ಬಿಜೆಪಿ ಫಾಲೋವರ್ ಗಳಿಗಿಂತಲೂ ಹೆಚ್ಚು ಫಾಲೋವರ್ಸ್​ ಸಿಜೆಪಿಗೆ ಇದೆ.

ಇನ್ನೂ ಸಿಜೆಪಿಯ ಸ್ಥಾಪಕ ಎನ್ನಲಾಗುತ್ತಿರುವ ಅಭಿಜಿತ್ ದಿಪ್ಕೆ ತಮ್ಮ ಅಭಿಯಾನ ಸರ್ಕಾರವನ್ನು ಆತಂಕದಲ್ಲಿಟ್ಟಿದೆ ಎಂದಿದ್ದಾನೆ. ಈತ ಪುಣೆ ಮೂಲದವನು. ಈ ಹಿಂದೆ ಆಮ್​ ಆದ್ಮಿ ಪಕ್ಷಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ವರ್ಕ್​ ಮಾಡಿದ್ದ ಎನ್ನಲಾಗಿದೆ. ಸದ್ಯ ಈತನ ಸೋಶಿಯಲ್ ಐಡಿಯಾ ವಿವಿಧ ಪಕ್ಷಗಳಿಗೆ ಸೆಡ್ಡು ಹೊಡೆಯುತ್ತಿದೆ. ಎಷ್ಟರಮಟ್ಟಿಗೆ ಈ ಟ್ರೆಂಡ್ ವರ್ಕ್ ಆಗುತ್ತಿದೆ ಎಂದರೆ ಗ್ಯಾರಂಟಿ ಯೋಜನೆಗಳ ಫಲಾನುಭವಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಯುವಕನೊಬ್ಬ I AM COCKROACH ಹೆಸರಿರುವ ಟೀಶರ್ಟ್​ ನೀಡಿದ್ದ. ಒಟ್ಟಾರೆ ಡಿಜಿಟಲ್ ಯುಗದ ಹೊಸ ಹೋರಾಟಗಳು ಪ್ರದರ್ಶನಕ್ಕೆ ಬರುತ್ತಿದ್ದು, ಹಳೆ ಅನುಭವದ ರಾಜಕಾರಣಕ್ಕೆ ದೊಡ್ಡ ಪೆಟ್ಟು ನೀಡುವುದೆ ನೋಡಬೇಕಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor