KARNATAKA NEWS/ ONLINE / Malenadu today/ Sep 7, 2023 SHIVAMOGGA NEWS
ಶಿವಮೊಗ್ಗ / ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪ ಕರೆಂಟ್ ವಯರ್ ತುಂಡಾಗಿ ಹಳಿ ಮೇಲೆ ಬಿದ್ದ ಕಾರಣ, ಇಂಟರ್ ಸಿಟಿ ರೈಲು ಇವತ್ತು 2 ಗಂಟೆ ತಡವಾಗಿ ಶಿವಮೊಗ್ಗ ತಲುಪಿದೆ.
ಘಟನೆ ವಿವರ
ಆನಂದಪುರದ ಸಮೀಪ ಇವತ್ತು ವಿದ್ಯುತ್ ವಯರ್ ಕಟ್ ಆಗಿ ಹಳಿ ಮೇಲೆ ಬಿದ್ದಿತ್ತು. ಅತ್ತ ಬೆಳಗ್ಗೆ 5-15 ಕ್ಕೆ ತಾಳಗುಪ್ಪದಿಂದ ಹೊರಟಿದ್ದ ಬೆಂಗಳೂರು ಇಂಟರ್‌ಸಿಟಿ (ರೈಲು ಸಂಖ್ಯೆ 20652) ಬೆಳಗ್ಗೆ 6.05ರ ಹೊತ್ತಿಗೆ ಆನಂದಪುರ ಬಂದು ತಲುಪಿದೆ. ಅಲ್ಲದೆ ವಿದ್ಯುತ್ ವಯರ್ ಮೇಲೆ ಟ್ರೈನ್ ಹರಿದು ನಿಂತಿದೆ.
2 ಗಂಟೆ ರಿಪೇರಿ ಕಾರ್ಯ
ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ರೈಲ್ವೆ ಇಲಾಖೆ ಸಿಬ್ಬಂದಿ ರಿಪೇರಿ ಕಾರ್ಯ ನಡೆಸಿದ್ರು. ರೈಲ್ವೆ ಇಲಾಖೆ ಈ ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದ, ಅದರ ವಿದ್ಯುತ್ ತಂತಿಬಿದ್ದು ರೈಲು ಸಂಚಾರಕ್ಕೆ ಅಡ್ಡಿಯಾಗಿತ್ತು. ವಿದ್ಯುತ್ ತಂತಿ ತೆರವು ಗೊಳಿಸಿದ ಬಳಿಕ ಟ್ರೈನ್ ಅಲ್ಲಿಂದ ಮುಂದಕ್ಕೆ ಸಾಗಿತು.
ಬಳಿಕ ಶಿವಮೊಗ್ಗಕ್ಕೆ ಬೆಳಗ್ಗೆ ಏಳು ಗಂಟೆಗೆ ಬರಬೇಕಿದ್ದ ರೈಲು 110 ಗಂಟೆ ಸುಮಾರಿಗೆ ಶಿವಮೊಗ್ಗ ತಲುಪಿದೆ. ಅಲ್ಲಿಂದ ಬೆಂಗಳೂರು ತಲುಪಿದೆ.
ಇನ್ನಷ್ಟು ಸುದ್ದಿಗಳು
ಬಾರ್ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್ ರೋಡ್ನಲ್ಲಿ ನಿನ್ನೆ ನಡೆದಿದ್ದೇನು?
ಸಚಿವರ ಶಾಕ್/ 48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT ನಲ್ಲಿದ್ದ ಈ ವ್ಯವಸ್ಥೆ!




