jayanagar police station/ ಕುಕ್ಕರ್​ನಲ್ಲಿ ಭಾಮೈದನ ಏಟು! ಲಟ್ಟಣಿಗೆಯಲ್ಲಿ ಅತ್ತೆಯ ಪೆಟ್ಟು! ಸಂಬಳದ ವಿಚಾರಕ್ಕೆ ಹೆಂಡ್ತಿ ಕಡೆಯವರ ರಾದ್ಧಾಂತ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Jan 1, 2024  |  ಸಂಸಾರದಲ್ಲಿ ತಾಪತ್ರಯ ಒಂದಲ್ಲ ಒಂದು ಇದ್ದೇ ಇರುತ್ತೆ. ಕೆಲವೊಂದು ಮನೆಗಳಲ್ಲಿ ಇದು ವಿಕೋಪಕ್ಕೆ ಹೋಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಂಬಳದ ವಿಚಾರಕ್ಕೆ ಹೆಂಡ್ತಿ, ಅತ್ತೆ ಮತ್ತು ಬಾಮೈದ ಹಾಗೂ ಆತನ ಸ್ನೇಹಿತರು ಕುಕ್ಕರ್ ಹಾಗೂ ಲಟ್ಟಣಿಗೆ ಮತ್ತು ಚೊಂಬಿನಲ್ಲಿ ಹೊಡೆದ ಬಗ್ಗೆ ವರದಿಯಾಗಿದೆ. 

ಜಯನಗರ ಪೊಲೀಸ್ ಸ್ಟೇಷನ್​/ jayanagar police station

ಶಿವಮೊಗ್ಗ ನಗರದ ನಿವಾಸಿಯೊಬ್ಬರು ಈ ಸಂಬಂದ ಜಯನಗರ ಪೊಲೀಸ್ ಸ್ಠೇಷನ್​ನಲ್ಲಿ ದೂರು ದಾಖಲಿಸಿದ್ದಾರೆ.  ಸಂಬಳದ ವಿಚಾರವಾಗಿ ಪತ್ನಿ, ಅತ್ತೆ ಮತ್ತು ಬಾಮೈದ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

READ : ದೇವಿ ವಿಗ್ರಹ, ಕಿರೀಟ, ಕಾಸಿನ ಸರ! ಬರೋಬ್ಬರಿ ಮೂರುವರೆ ಕೋಟಿ ಮಾಲ್​ ! ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ

ಸಂತ್ರಸ್ತರು ಪತ್ನಿಯು ಹೇಳಿದ ಕಾರಣಕ್ಕೆ ಬೇರೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರಂತೆ. ಈ ನಡುವೆ ಸಂಬಳದ ವಿಚಾರಕ್ಕೆ ಪತ್ನಿ ಆಗಾಗ ತಗಾದೆ ತೆಗೆಯುತ್ತಿದ್ದರು ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಮಾತುಕತೆಗೆ ಅಂತಾ ಪತ್ನಿ ತನ್ನ ಕುಟುಂಬದವರನ್ನ ಕರೆಸಿಕೊಂಡಿದ್ದಾಳೆ. ಮಾತುಕತೆ ವೇಳೇ ಅಲ್ಲಿದ್ದವರು ಸಂತ್ರಸ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor