ಸಿಗಂದೂರಿಗೆ ಹೋಗಿ ಬರುತ್ತಿದ್ದ ಕಾರು ಡಿವೈಡರ್​​ಗೆ ಡಿಕ್ಕಿ/ ಭೀಕರ ಅಪಘಾತ

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ ಜಿಲ್ಲೆ ಹೊಸನಗರ ಪೇಟೆಯಲ್ಲಿ ನಿನ್ನೆ ರಾತ್ರಿ ಅಪಘಾತವೊಂದು ಸಂಭವಿಸಿದೆ. ಬಸ್​ನಿಂದ ಇಳಿದ ವ್ಯಕ್ತಿ ಅಡ್ಡ ಬಂದ ಹಿನ್ನೆಲೆಯಲ್ಲಿ ಕಾರೊಂದು ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ.  ಸಿಗಂದೂರಿನಿಂದ ಭೀಮಸಮುದ್ರಕ್ಕೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.  ಹೊಸನಗರ ಪಟ್ಟಣದ ಮಾವಿನಕೊಪ್ಪದಲ್ಲಿ ಕೃಷಿ ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿ ಖಾಸಗಿ ಬಸ್‌ನಿಂದ ಇಳಿಯುತ್ತಿದ್ರು.

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ

ಈ ವೇಳೇ ಅದೇ ಮಾರ್ಗದಲ್ಲಿ, ಕಾರು  ಬರುತ್ತಿತ್ತು. ಬಸ್​ನಿಂದ  ಇಳಿದ ವ್ಯಕ್ತಿ ಕಾರನ್ನು ಗಮನಿಸದೇ ಅಡ್ಡ ಬಂದಿದ್ದಾರೆ, ಈ ವೇಳೆ ಅವರಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಕಾರಿನ ಚಾಲಕ ಮುಂದಾಗಿದ್ಧಾರೆ. ಅಷ್ಟರಲ್ಲಿ ನಿಯಂತ್ರಣ ತಪ್ಪಿ ಕಾರು ಆಕ್ಸಿಡೆಂಟ್ ಆಗಿದೆ. ಬಸ್​ನಿಂದ ಇಳಿದು ಅಡ್ಡ ಬಂದ ವ್ಯಕ್ತಿಗೆ ಡಿಕ್ಕಿ ಹೊಡೆದ ಕಾರು,  ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. 

ದಿನದ ರಾಜಕಾರಣದ ಸುದ್ದಿ : ಮೋದಿ & ಬೊಮ್ಮಾಯಿ ವಿರುದ್ಧ ದೇವರಿಗೆ ಉಯಿಲು ಕೊಡಲಿ ಹರತಾಳು ಹಾಲಪ್ಪ

ಚಿತ್ರದುರ್ಗ ಜಿಲ್ಲೆ ಭೀಮಸಮುದ್ರ ಮೂಲಕ ಕೆಎ-16-ಸಿ-9400 ಸ್ವಿಫ್ಟ್ ಕಾರು ಸಿಗಂದೂರು ದೇವಿ ದರ್ಶನ ಮಾಡಿ ವಾಪಸಾಗುತ್ತಿತ್ತು. ಘಟನೆಯಲ್ಲಿ ತಾಲೂಕಿನ ಕಸಬಾ ಹೋಬಳಿ ಮಳವಳ್ಳಿ ವಾಸಿ ಶೇಖರ ರವರು ಹಾಗೂ ಕಾರು ಚಾಲಕ ಚಂದ್ರಪ್ಪ ಅವರ ತಲೆಗೆ ಪೆಟ್ಟಾಗಿದೆ.  ಇಬ್ಬರಿಗೂ  ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆನಂತರ ಶೇಖರ್​ರವರನ್ನು ಚಿಕಿತ್ಸೆಗಾಗಿ ಮಣಿಪಾಲಕ್ಕೆ ರವಾನಿಸಲಾಗಿದೆ.

ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್​ ನ್ಯೂಸ್ / ದಾವಣಗೆರೆ, ಆನವೇರಿ, ಮಲೆಬೆನ್ನೂರು, ಹರಿಹರ ಕೃಷಿಕರಿಗೆ ಅನುಕೂಲ

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor