ಪಂಪ್‌ಸೆಟ್ ಲೈನ್ ಬಿದ್ದು ಎಮ್ಮೆ ಸಾವು: ಪೊಲೀಸ್ ಠಾಣೆಗೆ ದೂರು

ಹಂಚಿಕೊಳ್ಳಿ
WhatsApp Facebook X Telegram
Buffalo Electrocuted
Buffalo Electrocuted

Buffalo Electrocuted ಆನಂದಪುರ: ನೀರಾವರಿ ಪಂಪ್‌ಸೆಟ್‌ನ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಎಮ್ಮೆಯೊಂದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗ: ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ : ಮಧು ಬಂಗಾರಪ್ಪ ವಾಗ್ದಾಳಿ 

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರು 112ಗೆ ಕರೆ ಮಾಡಿ, ವಿದ್ಯುತ್ ವೈಯರ್ ತುಂಡಾಗಿ ಬಿದ್ದು ಎಮ್ಮೆ ಮೃತಪಟ್ಟಿರುವ ಕುರಿತು ಮಾಹಿತಿ ನೀಡಿದ್ದರು. ಮಾಹಿತಿ ತಲುಪಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಇಆರ್‌ವಿ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.

ಬಳಿಕ ಇಆರ್‌ವಿ ಸಿಬ್ಬಂದಿಗಳು ಈ ಕುರಿತು ಆನಂದಪುರ ಪೊಲೀಸ್ ಠಾಣೆಗೆ ಹಾಗೂ ಸ್ಥಳೀಯ ಮೆಸ್ಕಾಂ ಅಧಿಕಾರಿಗಳಿಗೆ ನೀಡಿದ್ದಾರೆ. ಹಾಗೆಯೇ ಮುಂದಿನ ಕ್ರಮಕ್ಕಾಗಿ ಆನಂದಪುರ ಪೊಲೀಸ್​ ಠಾಣೆಗೆ ದೂರನ್ನು ನೀಡುವಂತೆ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor