Thirthahalli ತೀರ್ಥಹಳ್ಳಿ: ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿದ್ದ ತೀರ್ಥಹಳ್ಳಿ ತಾಲೂಕಿನ ದೇವಂಗಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುರುಡೇಶ್ವರದ ಹೋಂ ಸ್ಟೇಯಲ್ಲಿ ಶಿವಮೊಗ್ಗದ ಯುವಕ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ?
ಹೌದು, 1936 ರಲ್ಲಿ ಪ್ರಾರಂಭವಾದ ದೇವಂಗಿ ಶಾಲೆಗೆ 1950 ರಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. 1 ರಿಂದ 7 ನೇ ತರಗತಿವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಯಲು ಆಸರೆಯಾಗಿದ್ದ ಈ ಶಾಲೆಗೆ ಇದೀಗ ವಜ್ರಮಹೋತ್ಸವವೇ ಕಳೆದು ಹೋಗಿದೆ. ಇದರ ನಡುವೆ ಅದರ ಆಯುಷ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆಗಿನ ಕಾಲದಲ್ಲಿ ಮರದ ಪಕಾಸಿ ಹಾಗೂ ಮಣ್ಣಿನ ಗೋಡೆಗಳಿಂದ ನಿರ್ಮಾಣ ಮಾಡಲಾಗಿದ್ದ ಶಾಲೆಯ ಮೇಲ್ಚಾವಣಿ ಮಳೆಗಾಲದ ವೇಳೆ ಕುಸಿದು ಬಿದ್ದಿದೆ. ಈ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಟಾರ್ಪಲ್ ಕೊಡುತ್ತೇವೆ, ನಮ್ಮ ಇಲಾಖೆಯಲ್ಲಿ ಹಣವಿಲ್ಲ ಎಂಬ ಬೇಜವಾಬ್ದಾರಿಯ ಉತ್ತರ ಬರುತ್ತಿದೆ ಎಂದು ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ಕುರಿತಾಗಿ ಹಳೆಯ ವಿದ್ಯಾರ್ಥಿಯೊಬ್ಬರು ಮಾತನಾಡಿ, ನಾವು ಓದಿ ಬೆಳೆದಂತಹ ಶಾಲೆ ಇದಾಗಿದೆ. ಆದರೆ ಇದೀಗ ಅದರ ಮೇಲ್ಚಾವಣಿ ಕುಸಿದು ಬಿದ್ದಿದೆ. ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಟಾರ್ಪಲ್ ಕೊಡುತ್ತೇವೆ ಹಾಕಿ, ನಮ್ಮ ಶಿಕ್ಷಣ ಇಲಾಖೆಯಲ್ಲಿ ಹಣವಿಲ್ಲ ಎಂಬ ಉತ್ತರವನ್ನು ನೀಡುತ್ತಿದ್ದಾರೆ. ನಾವು ಟಾರ್ಪಲ್ ಏನೋ ಹಾಕುತ್ತೇವೆ; ಆದರೆ ಕಟ್ಟಡ ಕುಸಿದು ಬಿದ್ದು ವಿದ್ಯಾರ್ಥಿಗಳ ಜೀವಕ್ಕೆ ಏನಾದರೂ ಹಾನಿಯಾದರೆ ಅದರ ಹೊಣೆ ನೀವು ಹೊರುತ್ತೀರಾ? ಎಂದು ಪ್ರಶ್ನಿಸಿದ ಅವರು, ಒಪ್ಪುವುದಾದರೆ ಒಂದು ಪತ್ರದಲ್ಲಿ ಸೀಲ್ ಮತ್ತು ಸಹಿ ಹಾಕಿಕೊಡಿ ಎಂದು ಆಗ್ರಹಿಸಿದರು.
ಅಷ್ಟೇ ಅಲ್ಲದೆ, ಸರ್ಕಾರಿ ಶಾಲೆ ಬೆಳೆಯಬೇಕು ಎನ್ನುವ ನೀವೇ ಈ ರೀತಿ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಿದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯದೆ ಇನ್ನೇನಾಗುತ್ತದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
