BHADRAVATI

ತಂದೆ ವಿರುದ್ದವೇ ಪೊಲೀಸರಿಗೆ ಪೋನ್​ ಮಾಡಿದ ಮಗ, ಏನಿದು ವಿಚಾರ 

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Bhadravathi ಭದ್ರಾವತಿ: ತಂದೆಯ ಪ್ರತಿದಿನದ ಮದ್ಯಪಾನದ ಗಲಾಟೆಯಿಂದ ಬೇಸತ್ತ ಮಗನೊಬ್ಬ, ಕೊನೆಗೆ ತಂದೆಯ ವಿರುದ್ಧವೇ ನೇರವಾಗಿ ಪೊಲೀಸ್ ಇಲಾಖೆಯ ತುರ್ತು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿರುವ ಘಟನೆ ಭದ್ರಾವತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ನಿವಾಸಕ್ಕೆ ಯುವ ಕಾಂಗ್ರೆಸ್​ ಕಾರ್ಯರ್ತರು ಮುತ್ತಿಗೆ ಯತ್ನ, ಕಾರಣವೇನು

ಮದ್ಯದ ಅಮಲಿನಲ್ಲಿ ತಂದೆಯು ಮನೆಯ ಸದಸ್ಯರೊಂದಿಗೆ ಗಲಾಟೆ ಮಾಡುತ್ತಿದ್ದರು. ಇದರಿಂದ ಪರಿಸ್ಥಿತಿ ಕೈಮೀರಿದಾಗ, ದೂರುದಾರರಾದ ಮಗನು ತಕ್ಷಣವೇ ಸರ್ಕಾರದ ತುರ್ತು ಸ್ಪಂದನಾ ಸಹಾಯವಾಣಿ ಸಂಖ್ಯೆ 112 (ERSS) ಗೆ ಕರೆ ಮಾಡಿ ಮನೆಯಲ್ಲಿ ನಡೆಯುತ್ತಿದ್ದ ರಂಪಾಟದ ಬಗ್ಗೆ ಪೊಲೀಸರಿಗೆಮಾಹಿತಿ ನೀಡಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರಾವತಿ ಪೊಲೀಸ್ ಠಾಣೆಯ ತುರ್ತು ಸ್ಪಂದನಾ ವಾಹನ (ERV) ಸಿಬ್ಬಂದಿಗಳು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದ್ದಾರೆ. ಮನೆಯಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕ ಶಾಂತಿ ಹಾಗೂ ಕುಟುಂಬದ ನೆಮ್ಮದಿಗೆ ಭಂಗ ತರುತ್ತಿದ್ದ ತಂದೆಗೆ, ಇನ್ನೊಮ್ಮೆ ಇಂತಹ ವರ್ತನೆ ಮರುಕಳಿಸಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಡಕ್ ಎಚ್ಚರಿಕೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

Bhadravathi Son Calls 112 Police Against dad

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.