ಕಾರು ಯಾರಿಗಾದರೂ ಕೊಡುವಾಗ ಜಾಗ್ರತೆ! ಏಕೆ ಗೊತ್ತಾ? ಕೊಟ್ಟು ಸಿಕ್ಕಾಂಡವರ ಪರಿಸ್ಥಿತಿ ಓದಿ

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ :  ತುರ್ತು ಕೆಲಸಕ್ಕೆ ಅಗತ್ಯವಿದೆ ಎಂದು ಕೃಷಿಕರೊಬ್ಬರಿಂದ ಕಾರು ಪಡೆದು ನಾಲ್ಕು ತಿಂಗಳಾದರೂ ಹಿಂತಿರುಗಿಸದೆ ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಈ ಸಂಬಂಧ ಸ್ನೇಹಿತನ ಮಗನ ವಿರುದ್ಧ, ನೊಂದವರು ಪೊಲೀಸರಿಗೆ ದೂರು ನೀಡಿದ್ದಾರೆ. ಬಸವನಗೌಡ ಎಂಬುವವರು ತಮ್ಮ ಸ್ನೇಹಿತನ ಮಗ ರೋಹಿತ್‌ ಎಂಬುವವರಿಗೆ ವ್ಯಾಗನಾರ್ ಕಾರು ಕೊಟ್ಟಿದ್ದರಂತೆ. ಒಂದು ವಾರದ ಮಟ್ಟಿಗೆ ವ್ಯಾಗನಾರ್ ಕಾರು ಕೊಡುವಂತೆ ಬಸವನಗೌಡ ಅವರಿಗೆ ಮನವಿ ರೋಹಿತ್ ಮನವಿ ಮಾಡಿದ್ದನಂತೆ. ಸ್ನೇಹಿತನ ಮಗನಾದ್ದರಿಂದ ಕಾರು ನೀಡಿದ್ದರು ಬಸವನಗೌಡ​ 

ಇದನ್ನು ಸಹ ಓದಿ: ಎಷ್ಟೇ ಆದ್ರೂ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..! ನಾವೇ ಮೊದಲು ಎಂದು ಸುದ್ದಿಯಲ್ಲಿ ಜಿದ್ದಿಗೆ ಬಿದ್ದವರಂತೆ ದ್ವೇಷಿಗಳಾದವರು…ನಟ ದರ್ಶನ್ ವಿಚಾರದಲ್ಲಿ ಒಗ್ಗಟ್ಟಿನ ಜಪ ಮಾಡಿದ್ದರ ಹಿಂದಿನ ಗುಟ್ಟೇನು?

ಆದರೆ ವಾರ ಕಳೆದರೂ ಕೊಟ್ಟ ಕಾರ್ ವಾಪಸ್ ನೀಡಿಲ್ಲ. ಈ ಬಗ್ಗೆ ಕೇಳಿದರೆ ಕೊಡ್ತಿನಿ ಕೊಡ್ತಿನಿ ಎಂದು ರೋಹಿತ್​ ಕಾಲ ಕಳೆದಿದ್ದಾನೆ ಎಂಬುದು ಬಸವನಗೌಡ​ರವರ ದೂರು. ಬರೋಬ್ಬರಿ ನಾಲ್ಕು ತಿಂಗಳಾದರೂ ಕಾರು ವಾಪಸ್​ ಕೊಡದ ಹಿನ್ನಲೆಯಲ್ಲಿ ಬಸವನಗೌಡರವರು ರೋಹಿತ್​ ಇದ್ದ ಜಾಗಕ್ಕೆ ಹೋಗಿದ್ದಾನೆ. 

ಇದನ್ನ ಸಹ ಓದಿ : ರಿಪ್ಪನ್ ಪೇಟೆ ಹೆದ್ದಾರಿ ಪುರದಲ್ಲಿ ಕಾರು ಪಲ್ಟಿ ನಂತರ ನಡೆದಿದ್ದೇನು?

ಈ ವೇಳೆ ಅಲ್ಲಿ ಬಸವನಗೌಡರಿಗೆ ಅಚ್ಚರಿ ಕಾದಿತ್ತು, ಹೊಳಲ್ಕೆರೆಯಲ್ಲಿರುವ ರೋಹಿತ್‌ ಬೇಕರಿ ಬಳಿ ತೆರಳಿ, ವಿಚಾರಿಸಿದರೆ, ರೋಹಿತ್​ ಬೇಕರಿ ಮತ್ತು ಮನೆ ಯನ್ನು ಬಾಡಿಗೆಗೆ ಕೊಟ್ಟು ಮೈಸೂರಿಗೆ ಹೋಗಿರುವುದು ಗೊತ್ತಾಗಿದೆ.  ಹೀಗಾಗಿ ಅನುಮಾನ ಗೊಂಡು ಬಸವನಗೌಡರವರು  ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor