ಶಿವಮೊಗ್ಗದಲ್ಲಿ ವಿಜಯ್ ಮರ್ಚೆಂಟ್ ಟ್ರೋಫಿ: 36 ತಂಡಗಳ ನಡುವೆ ಕ್ರಿಕೆಟ್ ಸಮರಕ್ಕೆ ವೇದಿಕೆ ಸಿದ್ಧ

ಹಂಚಿಕೊಳ್ಳಿ
WhatsApp Facebook X Telegram
BCCI Vijay Merchant Trophy (U16) in Shivamogga
BCCI Vijay Merchant Trophy (U16) in Shivamogga

ಶಿವಮೊಗ್ಗ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯೋಜಿಸಿರುವ ಪ್ರತಿಷ್ಠಿತ ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ದೇಶೀಯ ಕ್ರಿಕೆಟ್ ಪಂದ್ಯಾವಳಿಯು ಡಿಸೆಂಬರ್ 7 ರಂದು ಶಿವಮೊಗ್ಗದಲ್ಲಿ ಆರಂಭಗೊಂಡಿದ್ದು, ಡಿಸೆಂಬರ್ 31 ರವರೆಗೆ ನಡೆಯಲಿದೆ. ಶಿವಮೊಗ್ಗದಲ್ಲಿ ಮೂರನೇ ಬಾರಿಗೆ ಈ ಪ್ರಮುಖ ಪಂದ್ಯಾವಳಿ ಆಯೋಜನೆಯಾಗುತ್ತಿದ್ದು, ದೇಶದ ವಿವಿಧ ರಾಜ್ಯಗಳ ಒಟ್ಟು 36 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ.

ಶಿವಮೊಗ್ಗ: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ  ಕೈದಿ ಸಾವು

BCCI Vijay Merchant ಈ ಪಂದ್ಯಾವಳಿಯು ಶಿವಮೊಗ್ಗದ ನವುಲೆ ರಸ್ತೆಯಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣ ಮತ್ತು ಜೆ.ಎನ್.ಎನ್.ಸಿ.ಇ. ಕಾಲೇಜಿನ ಟರ್ಫ್‌ ಅಂಕಣಗಳಲ್ಲಿ ನಡೆಯಲಿದೆ. 36 ತಂಡಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ಆರು ತಂಡಗಳಿವೆ. ‘ಎ’ ಗುಂಪಿನ ಎಲ್ಲ ಪಂದ್ಯಗಳಿಗೆ ಶಿವಮೊಗ್ಗವೇ ಆತಿಥ್ಯ ವಹಿಸಲಿದೆ.ಶಿವಮೊಗ್ಗದಲ್ಲಿ ನಡೆಯಲಿರುವ ‘ಎ’ ಗುಂಪಿನಲ್ಲಿ ಚಂಡೀಗಡ, ಗುಜರಾತ್, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ ಹಾಗೂ ವಿದರ್ಭ ರಾಜ್ಯಗಳ ತಂಡಗಳು ಸೆಣಸಾಡಲಿವೆ. ಕರ್ನಾಟಕ ರಾಜ್ಯ ತಂಡವು ‘ಡಿ’ ಗುಂಪಿನಲ್ಲಿ ಛತ್ತೀಸ್‌ಗಢದಲ್ಲಿ ಆಡಲಿದ್ದು, ಈ ಗುಂಪಿನಲ್ಲಿ ಮಧ್ಯಪ್ರದೇಶ, ಉತ್ತರಾಖಂಡ, ಆಂಧ್ರ, ಗೋವಾ ಹಾಗೂ ಬರೋಡ ತಂಡಗಳು ಭಾಗವಹಿಸುತ್ತಿವೆ.

BCCI Vijay Merchant Trophy (U16) in Shivamogga
BCCI Vijay Merchant Trophy (U16) in Shivamogga

ಡಿಸೆಂಬರ್ 7, 2025 ರಂದು ಪ್ರಾರಂಭವಾಗಿ ಡಿಸೆಂಬರ್ 31, 2025 ರವರೆಗೆ ನಡೆಯುವ ಈ ಟೂರ್ನಿಯಲ್ಲಿ, ಪ್ರತಿದಿನ ಮೂರು ಪಂದ್ಯಗಳಂತೆ ಒಟ್ಟು 15 ಪಂದ್ಯಗಳು ಶಿವಮೊಗ್ಗದಲ್ಲಿ ನಡೆಯಲಿವೆ. ಪ್ರತಿ ಪಂದ್ಯವು ಮೂರು ದಿನಗಳ ಅವಧಿಯದ್ದಾಗಿದ್ದು, ಪಂದ್ಯಗಳ ನಡುವೆ ಎರಡು ಅಥವಾ ಮೂರು ದಿನಗಳ ವಿರಾಮ ಇರುತ್ತದೆ. ಈ ಪಂದ್ಯಗಳನ್ನು ಕೆಂಪು ಬಣ್ಣದ ಚೆಂಡಿನಲ್ಲಿ ಮತ್ತು ಆಟಗಾರರು ಬಿಳಿ ಬಣ್ಣದ ಪೋಷಾಕುಗಳಲ್ಲಿ ಆಡಲಿದ್ದಾರೆ. ಬಿಸಿಸಿಐ ನಿಯಮಾವಳಿಯಂತೆ ಎಲ್ಲಾ ಪಂದ್ಯಗಳು ಪ್ರತಿದಿನ ಬೆಳಗ್ಗೆ 09:30ಕ್ಕೆ ಪ್ರಾರಂಭಗೊಳ್ಳಲಿವೆ. ಬಿಸಿಸಿಐನ ತೀರ್ಪುಗಾರರು ಮತ್ತು ಪಂದ್ಯ ವೀಕ್ಷಕರ ನೇತೃತ್ವದಲ್ಲಿ ಈ ಪಂದ್ಯಗಳು ನಡೆಯಲಿದ್ದು, ರಾಷ್ಟ್ರೀಯ 16 ವರ್ಷದೊಳಗಿನವರ ತಂಡದ ಆಯ್ಕೆದಾರರು ಸಹ ಪ್ರತಿಭೆಗಳನ್ನು ಗುರುತಿಸಲು ಆಗಮಿಸಲಿದ್ದಾರೆ. ಶಿವಮೊಗ್ಗ ವಲಯವು ಪಂದ್ಯಾವಳಿಗಳಿಗೆ ಅಗತ್ಯವಾದ ಸರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

BCCI Vijay Merchant Trophy (U16) in Shivamogga

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor