astrological stars predict /ಮಲೆನಾಡು ಟುಡೆ ಸುದ್ದಿ / ಪರಾಭವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯು ಸಂಜೆ 5.46 ರವರೆಗೆ ಇರಲಿದ್ದು, ತದನಂತರ ಅಷ್ಟಮಿ ತಿಥಿ ಆರಂಭವಾಗಲಿದೆ. ಮೃಗಶಿರ ನಕ್ಷತ್ರ ರಾತ್ರಿ 8.35 ರವರೆಗೆ ಇರಲಿದ್ದು, ಆ ಬಳಿಕ ಆರಿದ್ರ ನಕ್ಷತ್ರ ಶುರುವಾಗಲಿದೆ. ಅಮೃತ ಘಳಿಗೆ ಮಧ್ಯಾಹ್ನ 12.23 ರಿಂದ 1.52 ರವರೆಗೆ ಪ್ರಾಪ್ತವಾಗಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು
ದಿನಭವಿಷ್ಯ
ಮೇಷ / ಆಪ್ತರಿಂದ ಸೂಕ್ತ ನೆರವು, ಅನಿರೀಕ್ಷಿತ ಧನಲಾಭ.ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದ್ದು, ಬೆಲೆಬಾಳುವ ವಸ್ತು ಖರೀದಿಸುವ ಸಾಧ್ಯತೆಗಳಿವೆ. ದೇವಸ್ಥಾನಗಳಿಗೆ ಭೇಟಿ, ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಅತ್ಯುತ್ಸಾಹ ಕಂಡುಬರಲಿದೆ.
ವೃಷಭ / ಕುಟುಂಬದ ಸದಸ್ಯರೊಂದಿಗೆ ಕಾರಣವಿಲ್ಲದೆ ವಿವಾದ ಎದುರಿಸಬೇಕಾಗಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು ಎದುರಾಗಲಿದ್ದು, ದೂರದ ಊರುಗಳಿಗೆ ಪ್ರಯಾಣ ಅವಶ್ಯಕತೆ ಬೀಳಬಹುದು. ವ್ಯಾಪಾರದಲ್ಲಿ ಅಡಚಣೆ ಹಾಗೂ ಉದ್ಯೋಗಿಗಳಿಗೆ ಹಿನ್ನಡೆ
ಮಿಥುನ / ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು, ಹೆಚ್ಚುವರಿ ಆದಾಯ ಹರಿದುಬರಲಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ತೃಪ್ತಿದಾಯಕ ವಾತಾವರಣ ಇರಲಿದೆ.
ಮಾರುಕಟ್ಟೆಯಲ್ಲಿ ಮತ್ತೆ ಹಿಡಿಯುತ್ತಿದೆ ಅಡಿಕೆ ರೇಟು! ಶಿವಮೊಗ್ಗ ಸೇರಿ ಎಲ್ಲೆಲ್ಲಿ ಎಷ್ಟಿದೆ ತಿಳಿಯಿರಿ ದರ!
ಕರ್ಕಾಟಕ / ಕುಟುಂಬದವರಿಂದಲೇ ವಿರೋಧ ಎದುರಿಸಬೇಕಾಗುತ್ತದೆ. ಆದಾಯ ಸಾಮಾನ್ಯವಾಗಿರಲಿದೆ, ದೂರ ಪ್ರಯಾಣ. ವ್ಯಾಪಾರದಲ್ಲಿ ಮಂದಗತಿ ಉದ್ಯೋಗದ ಸ್ಥಳದಲ್ಲಿ ಕೆಲವೊಂದು ಸಮಸ್ಯೆ ತಲೆದೋರಲಿವೆ.
ಸಿಂಹ / ವ್ಯಾಪಾರ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲಿದ್ದಾರೆ. ಆಸ್ತಿಗೆ ಸಂಬಂಧಿಸಿದ ವಿವಾದ ಇತ್ಯರ್ಥವಾಗಲಿದ್ದು, ಶುಭ ಸುದ್ದಿ ಆಲಿಸುವಿರಿ. ಹೊಸ ವಾಹನ ಖರೀದಿಸುವ ಯೋಗವಿದೆ. ಉದ್ಯೋಗಿಗಳಿಗೆ ಉತ್ತಮ ಮನ್ನಣೆ ಸಿಗಲಿದೆ.
ಕನ್ಯಾ / ಹೊಸ ಕೆಲಸಕ್ಕೆ ಚಾಲನೆ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದ್ದು, ಶುಭ ವಾರ್ತೆ ಕಿವಿಗೆ ಬೀಳಲಿವೆ. ಆರ್ಥಿಕ ಲಾಭ, ಉದ್ಯೋಗಿಗಳಿಗೆ ಯಶಸ್ಸು.
ತುಲಾ / ವಿಘ್ನಗಳು ಎದುರಾಗಲಿವೆ. ಮನೆಯ ಒಳಗೆ ಹಾಗೂ ಹೊರಗೆ ಸಮಸ್ಯೆ ಎದುರಿಸಬೇಕಾಗಬಹುದು. ಅನಿರೀಕ್ಷಿತ ಪ್ರಯಾಣ, ಸಾಲ ಮಾಡುವ ಅನಿವಾರ್ಯತೆ. ವ್ಯಾಪಾರಸ್ಥರಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಗಳಿವೆ.
ವೃಶ್ಚಿಕ / ಇಲ್ಲಸಲ್ಲದ ಟೀಕೆಗಳಿಗೆ ಗುರಿಯಾಗಬೇಕಾಗುತ್ತದೆ. ದೂರ ಪ್ರಯಾಣ, ಆಸ್ತಿ ವಿವಾದ ಎದುರಾಗಲಿವೆ. ದೇವಸ್ಥಾನಗಳಿಗೆ ಭೇಟಿ, ಯೋಗವಿದ್ದರೂ, ಬಂಧುಗಳೊಂದಿಗೆ ಮಿತ್ರತ್ವಕ್ಕೆ ಸಮಯ ಬೇಕಾಗಬಹುದು. ವ್ಯಾಪಾರಸ್ಥರಿಗೆ ಸಾಮಾನ್ಯದಿನ ಹಾಗೂ ಉದ್ಯೋಗಿಗಳಿಗೆ ಕೆಲಸದ ಒತ್ತಡ.

ಧನುಸ್ಸು / ಸಮಾಜದಲ್ಲಿ ಗೌರವ ಹಾಗೂ ಮನ್ನಣೆ ಸಿಗಲಿದೆ. ಆರ್ಥಿಕವಾಗಿ ಲಾಭ, ಆಸ್ತಿ ವಿವಾದ ಸುಖಾಂತ್ಯ ಕಾಣಲಿವೆ. ಮನೆ ಹಾಗೂ ವಾಹನ ಖರೀದಿ ಯೋಗವಿದೆ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ, ಉದ್ಯೋಗಿಗಳಿಗೆ ವಿಶೇಷ ದಿನ.
ಮಕರ / ಹೊಸ ಪರಿಚಯ ಹಾಗೂ ಬಾಲ್ಯದ ಸ್ನೇಹಿತರ ಭೇಟಿ. ಆಸ್ತಿಯಿಂದ ಲಾಭ ಸಿಗಲಿದೆ. ಕೈಗೊಂಡ ಕಾರ್ಯಗಳಲ್ಲಿ ಸಿದ್ಧಿ, ಮನೆ ನಿರ್ಮಾಣ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಯಾವುದೇ ಅಡೆತಡೆ ಇಲ್ಲ.
ಕುಂಭ / ಹೊಸದಾಗಿ ಸಾಲ ಮಾಡಲಿದ್ದಾರೆ. ನಿರೀಕ್ಷಿಸದ ಪ್ರಯಾಣ ಎದುರಾಗಲಿದ್ದು, ವ್ಯಾಪಾರ ನಿಧಾನಗತಿಯಲ್ಲಿ ಸಾಗಲಿದೆ. ಖರ್ಚು ಹೆಚ್ಚಾಗಲಿದ್ದು, ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ ಹೆಗಲೇರಲಿವೆ. ಅನಾರೋಗ್ಯ ಸಮಸ್ಯೆ ಕಾಡಬಹುದು.
ಮೀನ / ಉದ್ಯೋಗದ ಜವಾಬ್ದಾರಿ ವಿಸ್ತಾರವಾಗಲಿವೆ. ವ್ಯಾಪಾರಸ್ಥರಿಗೆ ಸಂಕಷ್ಟ ಎದುರಾಗಲಿದ್ದು, ದಿನನಿತ್ಯದ ಕಾರ್ಯಗಳಲ್ಲಿ ಅಡೆತಡೆ, ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ಆಲೋಚನೆಗಳಲ್ಲಿ ಅಸ್ಥಿರತೆ ಕಾಡಲಿದೆ.
ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದ ಶಿವಮೊಗ್ಗ ಹೊಸಮನೆ ನಿವಾಸಿ! 5 ಕೇಸ್ನಲ್ಲಿ ಎನ್ಕ್ವೈರಿ!

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
What do the astrological stars predict for your specific zodiac sign on March 25, 2026
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.