ಬೈಕ್ ಅಪಘಾತದಲ್ಲಿ ಅಗ್ನಿವೀರ ಯೋಧ ಪ್ರಜ್ವಲ್ ಸಾವು

ಹಂಚಿಕೊಳ್ಳಿ
WhatsApp Facebook X Telegram
Agniveer soldier
Agniveer soldier

Agniveer soldier : ಸಾಗರ : ತಾಲ್ಲೂಕಿನ ಉಳ್ಳೂರು ಪಂಚಾಯಿತಿ ವ್ಯಾಪ್ತಿಯ ಜಿಗಳೇಮನೆ ಮೂಲದ 21 ವರ್ಷದ ಅಗ್ನಿವೀರ ಯೋಧ ಪ್ರಜ್ವಲ್, ಚಾಮರಾಜನಗರ ತಾಲ್ಲೂಕಿನ ಕಮರವಾರಿ ಬಳಿ ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಯೋಧ ಸ್ಥಳದಲ್ಲೇ ಕೊನೆಯುಸಿರೆಳೆದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಗರ ತಾಲ್ಲೂಕಿನ ಜಿಗಳೇಮನೆಯವರಾದ ಪ್ರಜ್ವಲ್ ಅವರ ತಂದೆ ರಾಮಚಂದ್ರ ಚಾಮರಾಜನಗರದ ಸೇವಾ ಭಾರತಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ರಾಮಚಂದ್ರ ಮತ್ತು ರಾಜೇಶ್ವರಿ ದಂಪತಿಯ ಪುತ್ರನಾದ ಪ್ರಜ್ವಲ್, ಕಳೆದ 2 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಅಗ್ನಿವೀರ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ರಜೆಯ ಮೇಲೆ ಚಾಮರಾಜನಗರಕ್ಕೆ ಬಂದಿದ್ದರು.

Agniveer soldier ಗಣ್ಯರ ಸಂತಾಪ

ಗುರುವಾರ ಮೈಸೂರಿಗೆ ತೆರಳಿ, ಟಿ. ನರಸೀಪುರ ಮಾರ್ಗವಾಗಿ ಚಾಮರಾಜನಗರಕ್ಕೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಸಂತೇಮಾರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯೋಧನ ಅಕಾಲಿಕ ನಿಧನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ತಾಲ್ಲೂಕು ಆಡಳಿತವು ಯೋಧನ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ಸಿದ್ಧತೆ ನಡೆಸುತ್ತಿದೆ.

Agniveer soldier
ಬೈಕ್​ ಅಪಘಾತದಲ್ಲಿ ಮೃತಪಟ್ಟ ಯೋಧ ಪ್ರಜ್ವಲ್​
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor