ರಕ್ತದ ಕೊನೆ ಹನಿ ಇರುವವರೆಗೂ ಆ ಜಾಗದ ವಿಚಾರವಾಗಿ ಹೋರಾಟ ಮಾಡುತ್ತೇನೆ | ಕೆ ಎಸ್‌ ಈಶ್ವರಪ್ಪ

ಹಂಚಿಕೊಳ್ಳಿ
WhatsApp Facebook X Telegram
ರಕ್ತದ ಕೊನೆ ಹನಿ ಇರುವವರೆಗೂ ಆ ಜಾಗದ ವಿಚಾರವಾಗಿ ಹೋರಾಟ ಮಾಡುತ್ತೇನೆ | ಕೆ ಎಸ್‌ ಈಶ್ವರಪ್ಪ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 5, 2025

ಶಿವಮೊಗ್ಗ | ರಕ್ತದ ಕೊನೆ ಹನಿ ಇರುವವರೆಗೂ ಆಟದ ಮೈದಾನ ( ಈದ್ಗಾ ಮೈದಾನ) ದ ವಿಚಾರವಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ತಿಳಿಸಿದರು. 

ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾವಿದಲ್ಲಿರುವ ಈದ್ಗಾ ಮೈದಾನದಲ್ಲಿ ಬ್ಯಾರಿಗೇಡ್‌ ಹಾಕಿರುವುದನ್ನು ವಿರೋದಿಸಿ ಇಂದು ರಾಷ್ಟ್ರ ಭಕ್ತ ಬಳಗದ ವತಿಯಿಂದ ಕೆ ಎಸ್‌ ಈಶ್ವರಪ್ಪನವರ ನೇತೃತ್ವದಲ್ಲಿ ನಮ್ಮ ಆಟದ ಮೈದಾನ ನಮ್ಮ ಹಕ್ಕು ಎಂಬ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಈ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದರು. ಈ  ಸಂದರ್ಭದಲ್ಲಿ  ಕೆ ಎಸ್‌ ಈಶ್ವರಪ್ಪ ಮಾತನಾಡಿ  ಯಾರೂ ಸಹ ಇನ್ಮುಂದೆ ಈದ್ಗಾ ಮೈದಾನ ಎಂದು ಕರೆಯಬೇಡಿ ಅದು ಆಟದ ಮೈದಾನ. ಅಧಿಕಾರಿಗಳಿಗೆ  ಈ ವಿಚಾರವಾಗಿ ಕಾಂಗ್ರೆಸ್‌ ನವರು ಬೆಂಬಲ ನೀಡುತ್ತಿದ್ದಾರೆ.  ನ್ಯಾಯದ ಪರ ಅಧಿಕಾರಿಗಳು ತೀರ್ಮಾನ ಕೈಗೊಳ್ಳೂಕೆ ಇದೊಂದು ಒಳ್ಳೆಯ ಅವಕಾಶ. ಇನ್ನೂ 3 4 ದಿನಗಳಲ್ಲಿ ಆ ಮೈದಾನದಲ್ಲಿ ಹಾಕಿರುವ ಬ್ಯಾರಿಗೇಡ್‌ನ್ನು ತೆಗೆದು ಸಾರ್ವಜನಿಕ ಬಳಕೆಗೆ ಅವಕಾಶ ಕಲ್ಪಿಸಿ ಕೊಡಿ. ಇಲ್ಲದಿದ್ದರೆ ಬ್ಯಾರಿಗೇಡ್‌ ಕಿತ್ತು ಹಾಕಿ ಅದರೂಳಗೆ ಪ್ರವೇಶಿಸುತ್ತೇವೆ ಎಂದರು. ಈ ವೇಳೆ ಪ್ರತಿಭಟನಾ ಕಾರರು ಈಗಲೇ ಬ್ಯಾರಿಗೇಡ್‌ಗಳನ್ನು ಕಿತ್ತು ಎಸೆಯೋಣ ಎಂದರು. ಆಗ ಈಶ್ವರಪ್ಪನವರು ಈ ವಿಚಾರದಲ್ಲಿ ಹೋರಾಟಗಾರರು ಜೈಲಿಗೆ ಹೋಗಲು ಸಿದ್ದರಿರಬವೇಕು. ನ್ಯಾಯ ಸಿಗಲಿಲ್ಲ ಎಂದರೆ ನಿಮಗಿಂತ ಮುಂಚೆ ನಾನು ಜೈಲಿಗೆ ಹೋಗಲು ಸಿದ್ದನಿದ್ದೇನೆ. ಶಿವಮೊಗ್ಗ ನಗರದ ಜನಕ್ಕೆ ಜಾಗ ಬರುವವವರೆಗೂ ಶಾಂತಿಯಿಂದ ಹೋರಾಟ ಮಾಡೋಣ ಎಂದು ಹೋರಾಟಗಾರರನ್ನು ಸಮಾಧಾನ ಪಡಿಸಿದರು.

ಎಸ್ಪಿ ಕೂಡಲೇ ರಾಜಿನಾಮೆ ಕೊಡಬೇಕು

ಆಟದ ಮೈದಾನದಲ್ಲಿ ಬೇಲಿ ನಿರ್ಮಿಸಲು ಕೆಲವು ಕಿಡಿಗೇಡಿಗಳು ರೈಲ್ವೇ ಕಂಬಿಗಳನ್ನು ಬಳಸಿದ್ದಾರೆ. ಆದರೆ ಜಿಲ್ಲಾ ರಕ್ಷಣಾಧಿಕಾರಿಗಳು ಇದುವರೆಗೂ ಅವರ ವಿರುದ್ದ ಕ್ರಮ ಕೈಗೊಳ್ಳಲಿಲ್ಲ. ಅದೇ ಬೇರೆಯವರು ಈ ಕೆಲಸವನ್ನು ಮಾಡಿದ್ದರೆ ಅವರನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದರು. ಆದ್ದರಿಂದ ಸರಿಯಾಗಿ ಕಾರ್ಯ ನಿರ್ವಹಿಸದ ಎಸ್‌ ಪಿ ಯವರು ಈ ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.   

SUMMARY | We will fight for the issue of playground (Idgah maidan) till the last drop of blood is there,” eshwarappa said.

KEYWORDS | eshwarappa, fight,  issue, Idgah maidan, shivamogga,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor