ನಾಳೆಯಿಂದ ಮೂರು ದಿನ ಬಿಸಿಗಾಳಿ..ಬಿಸಿಗಾಳಿ | ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಹಂಚಿಕೊಳ್ಳಿ
WhatsApp Facebook X Telegram
ನಾಳೆಯಿಂದ ಮೂರು ದಿನ ಬಿಸಿಗಾಳಿ..ಬಿಸಿಗಾಳಿ | ಹವಾಮಾನ ಇಲಾಖೆಯಿಂದ ಎಚ್ಚರಿಕೆ

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 17, 2025 ‌‌ ‌‌

ನಾಳೆಯಿಂದ ಮೂರು ದಿನಗಳ ರಾಜ್ಯದ ಹಲವೆಡೆ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಮನ್ಸೂಚನೆಯ ಪ್ರಕಾರ, ಮಾರ್ಚ್‌ 18 ರಿಂದ 20 ರವರೆಗೆ ರಾಜ್ಯದ ಹಲವೆಡೆ ಬಿಸಿಗಾಳಿ ಹೆಚ್ಚಲಿದೆ ಎಂದು ತಿಳಿಸಲಾಗಿದೆ. 

ಈ ಕುರಿತು ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯೆಲ್ಲೊ ಅಲರ್ಟ್ ನೀಡಲಾಗಿದೆ.  ಮೇಲಾಗಿ ಬಿಸಿಲೇರಿದ ಹೊತ್ತಿನಲ್ಲಿ ಓಡಾಡುವಾಗ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ. 

ಉತ್ತರದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್‌ ವರೆಗೂ ಹೆಚ್ಚಾಗಲಿದದ್ದು,  ಒಳನಾಡಿನಲ್ಲಿ ಗರಿಷ್ಟ ಉಷ್ಣಾಂಶ 4 ಡಿಗ್ರಿಯವರೆಗೂ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ  ದಕ್ಷಿಣ ಒಳನಾಡಿನಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. 

ಈ ನಡುವೆ  ದಕ್ಷಿಣ ಕನ್ನಡ, ಮೈಸೂರು, ಹಾಸನ ಮತ್ತು ಕೊಡಗು ಜಿಲ್ಲೆಯ ಒಂದರೆಡು ಕಡೆಗಳಲ್ಲಿ ಮಳೆಯಾಗುವ ಸೂಚನೆಯನ್ನು ಸಹ ಹವಾಮಾನ ಇಲಾಖೆ ನೀಡಿದೆ. ಇನ್ನೂ ಶಿವಮೊಗ್ಗದಲ್ಲಿ ಈ ದಿನ ಬಿಸಿಲು ಹೆಚ್ಚಲಿರಲಿದ್ದು, ಬಿಸಿಲ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರ ಲಿಂಕ್‌ ಇಲ್ಲಿದೆ ಗಮನಿಸಬಹುದು : ಮೇ ತನಕ ಶಿವಮೊಗ್ಗದಲ್ಲಿ ಬಿಸಿಗಾಳಿ ಅಬ್ಬರ | ಎಚ್ಚರಿಕೆಯ ಸಲಹೆ ಜೊತೆ ಡಿಸಿ ಮಹತ್ವದ ಸೂಚನೆ | ಮಿಸ್‌ ಮಾಡದೇ ಓದಿ

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor