ಗುಡ್‌ ನ್ಯೂಸ್‌ | ದೆಹಲಿ ಮಾರ್ಕೆಟ್‌ನಲ್ಲಿ ಚಿನ್ನದ ದರ ಇಳಿಕೆ | ಎಷ್ಟಿದೆ ಚಿನ್ನ, ಬೆಳ್ಳಿ ದರ

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌

ಚಿನ್ನದ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ವೀಕೆಂಡ್‌ನಲ್ಲಿ ಸಣ್ಣದೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರ ಇಳಿಕೆಯಾಗಿದೆ. ಆದರೆ ಬೆಳ್ಳಿ ದರ ಏರಿಕೆ ಆಗಿದೆ. 

99.9% ಗೋಲ್ಡ್‌ 10 ಗ್ರಾಂಗೆ 200 ರೂಪಾಯಿ ಕಡಿಮೆಯಾಗಿದೆ. ನಿನ್ನೆ ಅಂದರೆ ಶುಕ್ರವಾರ10 ಗ್ರಾಂಗೆ ₹88,900 ರೂಪಾಯಿ ನಷ್ಟಿತ್ತು. ಇನ್ನೂ 99.5% ಪರಿಶುದ್ದತೆಯ ಗೋಲ್ಡ್‌ 10 ಗ್ರಾಂಗೆ ₹88,500 ರೂಪಾಯಿನಷ್ಟಿದೆ. 

ಇನ್ನೂ ಬೆಳ್ಳಿಯ ಬೆಲೆಯನ್ನು ಗಮನಿಸುವುದಾದರೆ, ಕೆ.ಜಿಗೆ ₹500 ಹೆಚ್ಚಳವಾಗಿದೆ, ಪ್ರಸ್ತುತ ಕೆಜಿ ಬೆಳ್ಳಿಯ ದರ ₹99,500 ನಷ್ಟಿದೆ. ಮಾರುಕಟ್ಟೆಯ ತಜ್ಞರ ಪ್ರಕಾರ, ಚಿನ್ನದ ಬೇಡಿಕೆ ಕಡಿಮೆಯಾದ್ದರಿಂದ ಚಿನ್ನದ ದರ ಇಳಿಕೆಯಾಗಿದೆ ಎನ್ನಲಾಗುತ್ತಿದೆ. 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು