4290 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಶುಂಠಿಯನ್ನು ಮಾರಾಟ ಮಾಡಬೇಡಿ | ಗಿರೀಶ್

ಹಂಚಿಕೊಳ್ಳಿ
WhatsApp Facebook X Telegram
4290 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಶುಂಠಿಯನ್ನು ಮಾರಾಟ ಮಾಡಬೇಡಿ | ಗಿರೀಶ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 3, 2025

ಶಿವಮೊಗ್ಗ | ಇನ್ನೇನು ಕೆಲವೇ ದಿನಗಳಲ್ಲಿ ಶುಂಠಿಯ ಬೆಲೆ ಹೆಚ್ಚಾಗಲಿದ್ದು ರಾಜ್ಯದ ರೈತರು  4290 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಶುಂಠಿಯನ್ನು ಮಾರಾಟ ಮಾಡಬೇಡಿ ಎಂದು ಕರ್ನಾಟಕ ರಾಜ್ಯ ಶುಂಠಿ ಬೆಳೆಗಾರರ ಸಂಘದ ಗಿರೀಶ್‌ ರೈತರಲ್ಲಿ ಮನವಿ ಮಾಡಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಂಠಿ ಬೆಳೆಯ ಬೆಲೆ ಹೆಚ್ಚಿಸುವ ಕುರಿತಾಗಿ ಇದೇ ಜನವರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದೆವು. ಆ ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದರು. ನಂತರ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 4290 ರಂತೆ  2574 ಕೆಜಿ ಬ್ಯಾಗ್‌ ಖರೀದಿಗೆ ಒಪ್ಪಿಗೆ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಪ್ರಸ್ತಾವನೆ ಜಾರಿಯಾಗಬಹುದು. ಹಾಗಾಗಿ ರೈತರು ಶುಂಠಿಯನ್ನು ಮಾರಾಟ ಮಾಡುವುದಾದರೆ 4290 ರೂಪಾಯಿಗೆ ಮಾರಾಟ ಮಾಡಿ. ಏಕೆಂದರೆ ಎಪಿ ಎಂ ಸಿ ಶುಂಠಿ ಖರೀದಿ ಕೇಂದ್ರವನ್ನು ತೆರೆದು ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡುತ್ತದೆ. ಎಲ್ಲಾ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ‌

SUMMARY | Girish of Karnataka State Ginger Growers Association appealed to the farmers of the state not to sell ginger at less than Rs 4,290.

KEYWORDS | Ginger Growers,  farmers,  Karnataka, price hike,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor