ಶಿವಮೊಗ್ಗ ತುಂಗಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ತುಂಗಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 3, 2025 ‌‌ 

ಶಿವಮೊಗ್ಗದ ತುಂಗಾ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಆತನ ಗುರುತು ಪತ್ತೆಯಾಗಿದೆ. ತೀರಾ ಕೊಳೆತು ಹೋಗಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಷ್ಟೆಯಲ್ಲದೆ ಪ್ರಕರಣ ಕುತೂಹಲ ಮತ್ತು ಅನುಮಾನ ಮೂಡಿಸುತ್ತಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸರು ಈ ಸಂಬಂಧ ಪ್ರಕಟಣೆಯನ್ನು ಸಹ ನೀಡಿದ್ದಾರೆ. 

 

ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಾನದಿಯ ಮಧ್ಯದಲ್ಲಿ ಮರಳು ಕಲ್ಲು ಮಣ್ಣಿನ ದಂಡೆಯ ಮೇಲೆ ರುಂಡ ಇಲ್ಲದ ಗಂಡಸ್ಸಿನ ಶವ ಕೊಳೆತು ಹೋಗಿರುವ ಸ್ಥಿತಿಯಲ್ಲಿ ದೊರಕಿದ್ದು, ಹೆಸರು, ವಿಳಾಸ ದೊರೆತಿಲ್ಲ.

ಮೃತ ದೇಹದ ಮೇಲೆ ಒಂದು ಮೆರೂನ್ ಕಲರಿನ ತುಂಬು ತೋಳಿನ ವುಡಿ ಇದ್ದು ಕಾಲರ್ ಹತ್ತಿರ ಟೀಮ್ ಸ್ಪಿರಿಟ್ ಹಾಗೂ ಹಡ್ಸನ್ ಎವರ್ ಮೆನ್ ಸ್ಟ್ರಾಂಗ್ ಎಂಬ ಸ್ಟಿಕರ್ ಇದ್ದು ಎಂ ಸೈಜಿನದಾಗಿರುತ್ತದೆ. ಅದರ ಒಳಭಾಗದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಅಡ್ಡ ಗೀರಿನ ಟೀಶರ್ಟ್ ಧರಿಸಿದ್ದು, ತಿಳಿ ನೀಲಿ ಬಣ್ಣದ ಜೀನ್ಸ್ ಇರುತ್ತದೆ. 

ಈ ವ್ಯಕ್ತಿಯ ವಾರಸ್ಸುದಾರರ ಇದ್ದಲ್ಲಿ ದೂ.ಸಂ.: 08182-261418/ 261410/ 261422/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

——————-

SUMMARY |A man’s body has been found in the Tunga River in Shivamogga.

KEY WORDS | man body  found in the Tunga River in Shivamogga, Tunga River in Shivamogga

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor