SHIVAMOGGA | MALENADUTODAY NEWS | ಮಲೆನಾಡು ಟುಡೆ Jan 24, 2025
ಶಿವಮೊಗ್ಗವೂ ಸೇರಿದಂತೆ ಮಲೆನಾಡು ಭಾಗದ ಮಹತ್ವದ ರೈಲ್ವೆ ಯೋಜನೆಗಳ ಪೈಕಿ ಒಂದಾದ ತಾಳಗುಪ್ಪ ಶಿರಸಿ ಹುಬ್ಬಳ್ಳಿ ರೈಲ್ವೆ ಯೋಜನೆ ಸಂಬಂಧ ಮಹತ್ವದ ಅಪ್ಡೇಟ್ ಒಂದು ಸಿಕ್ಕಿದೆ.
ಈ ಸಂಬಂಧ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಪೋಸ್ಟ್ವೊಂದು ಬರೆದಿದ್ದು, ಅದರಲ್ಲಿ Talaguppa Sirsi Hubballi Railway Project ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿಯವರ ಫೋಸ್ಟ್
ತಾಳಗುಪ್ಪ ಶಿರಸಿ ಹುಬ್ಬಳ್ಳಿ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ನಡೆಸಿ ವಿಸ್ತೃತ ವರದಿಯನ್ನು ನೀಡಲು ನೈರುತ್ಯ ರೈಲ್ವೆ ಇಲಾಖೆ ಹೈದ್ರಾಬಾದ್ ಮೂಲದ (AARVEE ASSOCIATES ARCHITECTS ENGINEERS AND CONSULTANTS PRIVATE LIMITED ) ಕಂಪನಿಗೆ ದಿನಾಂಕ 16-01-2025 ರಂದು ಗುತ್ತಿಗೆ ನೀಡಲಾಗಿದೆ. ಈ ಸಂಬಂಧ ಸರ್ವೆಕಾರ್ಯ ನಡೆಸಿ ಒಂದು ವರ್ಷದ ಅವಧಿ ಒಳಗೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ವರದಿ ನೀಡಬೇಕೆಂದು ಸೂಚಿಸಿರುತ್ತಾರೆ.

ಈಗಾಗಲೇ ನನ್ನ ಪ್ರಯತ್ನದಿಂದ ಮಾರ್ಚ್ 15 2024ಕ್ಕೆ 3.95 ಕೋಟಿ ಮಂಜೂರಾಗಿದೆ ಅದರಂತೆ ದಿನಾಂಕ 8-12-2024 ರಂದು ಹುಬ್ಬಳ್ಳಿಯ ನೈರುತ್ಯ ವಲಯ ರೈಲ್ವೇ ಭವನದಲ್ಲಿ ನಡೆದ ಸಭೆಯಲ್ಲಿ ಮಾನ್ಯ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣರವರಲ್ಲಿ ಶೀಘ್ರವಾಗಿ ವಿಸ್ತೃತ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿಯವರು ಬರೆದುಕೊಂಡಿದ್ದಾರೆ.
ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಹೊಸ ರೈಲು ಮಾರ್ಗದ ಯೋಜನೆಯು ಮಲೆನಾಡು ಹಾಗೂ ಉತ್ತರ ಕರ್ನಾಟಕವನ್ನು ಜೋಡಿಸುವ ಮಹತ್ವದ ಯೋಜನೆಯಾಗಿದೆ. ಹುಬ್ಬಳ್ಳಿಯಿಂದ ತಾಳಗುಪ್ಪದವರೆಗೂ ರೈಲು ಮಾರ್ಗವಾದಲ್ಲಿ ಅಲ್ಲಿಂದ ಶಿವಮೊಗ್ಗದವರೆಗೂ ರೈಲು ಸಂಚಾರಕ್ಕೆ ಅವಕಾಶ ಸಿಗಲಿದೆ.
SUMMARY | Important statement by MP Vishweshwara Hegde Kageri regarding Talaguppa Sirsi Hubballi Railway Project
KEY WORDS | MP Vishweshwara Hegde Kageri, Important statement regarding Talaguppa Sirsi Hubballi Railway Project