ಸೌತೆಕಾಯಿ ವಿಚಾರಕ್ಕೆ ತಂಗಿಯನ್ನೇ ಕೊಂಡ ಅಣ್ಣ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 3, 2025

ಚಾಮರಾಜನಗರ | ಮಗುವಿಗೆ ಸೌತೇಕಾಯಿ ತಿನ್ನಿಸಬೇಡ ಎಂದ ತಂಗಿಯನ್ನು ಅಣ್ಣ ಕುತ್ತಿಗೆ ಕೊಯ್ದು ಬೀಕರವಾಗಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲ ಎಂಬಲ್ಲಿ ನಡೆದಿದೆ.

ಐಮನ್ ಬಾನು ಕೊಲೆಯಾದ ತಂಗಿಯಾಗಿದ್ದು, ಫರ್ಮಾನ್ ಪಾಷಾ ಕೊಲೆಗೈದ ಆರೋಪಿಯಾಗಿದ್ದಾನೆ. ನಿನ್ನೆ ರಾತ್ರಿ ತನ್ನ ಅಣ್ಣನ ಮಗನಿಗೆ ಫರ್ಮಾನ್ ಪಾಷಾ ಸೌತೇಕಾಯಿ ತಿನ್ನಿಸುತ್ತಿದ್ದ. ಈ ವೇಳೆ ತಂಗಿ ಮಗುವಿಗೆ ಹುಷಾರಿಲ್ಲ ಸೌತೆಕಾಯಿಯನ್ನು ತಿನ್ನಿಸಬೇಡ ಎಂದಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಅಣ್ಣ ಫರ್ಮಾನ್ ತಂಗಿಯ ಜೊತೆ ಜಗಳವಾಡಿದ್ದಾನೆ. ಈ ಜಗಳ ತಾರಕಕ್ಕೇರಿ ಆತ ಆಕೆಯ ಕುತ್ತಿಗೆ ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಇದನ್ನು ಬಿಡಿಸಲು ಬಂದ ಅತ್ತಿಗೆ ಹಾಗೂ ತಂದೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಈ ಹಿನ್ನಲೆ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SUMMARY | In a shocking incident, a woman was allegedly strangled to death by her elder brother at Idgah Mohalla in Kollegal town of Chamarajanagar district.

KEYWORDS |  death, Kollegal town, murder, crime news,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor