ತುಂಗಾ ಚಾನಲ್‌ನಲ್ಲಿ ಈಜಲು ಹೋಗಿದ್ದ ಬಾಲಕ ಸಾವು

This Article Written by / 13 / ಡಿಸೆಂಬರ್ 27, 2024

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024 ‌‌ 

ಶಿವಮೊಗ್ಗದ ಮಂಡ್ಲಿ ಬಳಿಯ ತುಂಗಾ ಚಾನೆಲ್‌ನಲ್ಲಿ ಬಾಲಕನೋರ್ವನ ಶವ ಪತ್ತೆಯಾಗಿದೆ. ಆತನನ್ನು ಮಂಡ್ಲಿಯ 13 ವರ್ಷದ ಮೋಹಿತ್‌ ಎಂದು ಗುರುತಿಸಲಾಗಿದೆ. ಸ್ಥಳೀಯ ಮಾಹಿತಿ ಪ್ರಕಾರ, ಈಜಲು ಹೋಗಿ ಆತ ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ ನಿನ್ನೆ ದಿನ ಈತ ತನ್ನ ಸ್ನೇಹಿತರ ಜೊತೆ ಈಜಲು ತೆರಳಿದ್ದ. ಆ ಬಳಿಕ ಈತ ನಾಪತ್ತೆಯಾಗಿದ್ದ. ಈತನ ಸ್ನೇಹಿತರು ಭಯದಿಂದ ಯಾರಿಗೂ ಮಾಹಿತಿ ನೀಡಿರಲಿಲ್ಲ. ಬಳಿಕ ಮನೆಯವರು ಹುಡುಕಾಟ ನಡೆಸಿ ಸ್ನೇಹಿತರನ್ನು ವಿಚಾರಿಸಿದಾಗ, ಚಾನಲ್‌ಗೆ  ಇಳಿದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆ ಬಳಿಕ ಪೊಲೀಸರು ಹಾಗೂ ಅಗ್ನಿಶಾಮ ಸಿಬ್ಬಂದಿ ಸ್ಥಳಕ್ಕೆ ಬಂದು ಹುಡುಕಾಟ ಆರಂಭಿಸಿದ್ದರು. ಇವತ್ತು ಆತನ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ. ಈ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

KEY WORDS |Student dies after going swimming in Tunga Channel

ಮುಂದಿನ ಸುದ್ದಿ ಒದಿ

Leave a Comment