ಶಿವಮೊಗ್ಗ : ನಾನು ರೌಡಿನೇ, ಹೆಸರು ಕೇಳಿದ್ರೆ ನಡುಗೋಗ್ತೀರ! ಶಿವಮೊಗ್ಗ ರಸ್ತೆಯಲ್ಲಿ ಫುಲ್ ಟೈಟ್ ಆಗಿ ವೃದ್ಧನ ಬಾಡಿ ಶೋ-ಆಫ್! ವಿಡಿಯೋ ನೋಡಿ 

ಹಂಚಿಕೊಳ್ಳಿ
WhatsApp Facebook X Telegram
ಫುಲ್_ ಟೈಟ್_ ಆಗಿ ರಸ್ತೆಯಲ್ಲಿ ವೃದ್ಧನ ಹಾವಳಿ
ಫುಲ್_ ಟೈಟ್_ ಆಗಿ ರಸ್ತೆಯಲ್ಲಿ ವೃದ್ಧನ ಹಾವಳಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಎಣ್ಣೆ ಅಂದ್ರೆ ಹಾಗೆನೆ ಅದನ್ನ ಹೊಡ್ದ್​ಮೇಲೆ ಕೆಲವ್ರು ತಮ್​​ ಪಾಡಿಗ್​ ತಾವ್​ ಇದ್ರೆ, ಇನ್​ ಕೆಲವ್ರು ಏನೇನೋ ಮಾತಾಡಿ ಸಣ್ಣ ಪುಟ್ಟ ಕಿರಿಕ್​ ಮಾಡ್ಕೊಳ್ತಾರೆ. ಆದ್ರೆ ಇನ್​ ಕೆಲವ್​​ ಮಾಸ್ಟರ್​ ಪೀಸ್​​ಗಳು ರಸ್ತೆ ಬದೀಲಿ ಕೊಡೋ ಹಾವ್ಳಿ ಮಾತ್ರ ಬೇರೆ ತರಾನೆ ಇರುತ್ತೆ. ಅವ್ವು ಕೆಲವ್ರಿಗೆ ಭಯ ತರ್ಸಿದ್ರೆ, ಕೆಲವರಿಗೆ ನಗು, ಇನ್​ ಕೆಲವ್ರಿಗೆ ಕೋಪಾನು ತರ್ಸುತ್ತೆ, ಇದೀಗ ಶಿವಮೊಗ್ಗದ ರಸ್ತೆಯಲ್ಲಿ ಓರ್ವ ವೃದ್ದ ಮಾಡಿರೋ ಹಾವ್ಳಿ ಎಲ್ಲರಿಗೂ ನಗು ತರ್ಸಿದ್ದು, ಅಬ್ಬಾ ಯಾರೀ ವೃದ್ಧ ಅನ್ನಿಸುವಂತೆ ಮಾಡಿದೆ.

ಹೌದು ಶಿವಮೊಗ್ಗದ ಗಾರ್ಡ್​​ ಏರಿಯಾದಲ್ಲಿ ಫುಲ್​ ಟೈಟ್​ ಆದ ವೃದ್ದರೊಬ್ರು ರಸ್ತೆ ಮಧ್ಯ ಹಾವ್ಳಿ ಇಡೋಕೆ ಶುರು ಮಾಡಿದ್ದಾರೆ. ಎಣ್ಣೆ ಏಟಲ್ಲಿ ಶರ್ಟ್​ ಬಿಚ್ಚಿದ ವೃದ್ದ, ಅಲ್ಲಿದ್ದವರಿಗೆ ತನ್ನ ಹಳೆ ಹಿಸ್ಟರಿ ಹೆಳೋಕೆ ಶುರು ಮಾಡಿದ್ದಾನೆ, ಏ ನಾನ್​ ಒಂದ್​ ಕಾಲದಲ್ಲಿ ರೌಡಿ ಗೊತ್ತಾ, ನನ್ನ ಹೆಸರು ಕೇಳಿದ್ರೆ ನಡ್ಗೋಗ್ತೀರ, ನಮ್ಮೂರಲ್ಲಿ ನಾನೊಬ್ನೇ ಪೈಲ್ವಾನ್​ ಎಂದು ಕೂಡಾಗಲು ಶುರು ಮಾಡಿದ್ದಾರೆ, ಅಲ್ಲಿದ್ದವರಿಗೆ ಗುರೈಸುವುದು ಭಯಬಿಳುವಂತೆ ಮಾಡಿದ್ದಾರೆ, ಅಷ್ಟೇ ಅಲ್ಲದೆ ಶರ್ಟ್​ ಅನ್ನು ಬಿಚ್ಚಿ ನನ್​​ ಬಾಡಿ ನೋಡಿ ಹೇಗಿದೆ ಅಂತ ದೇಹ ಪ್ರದರ್ಶನವನ್ನ ಮಾಡಿದ್ದಾರೆ.

ಭಾರತ್ ಜೋಡೋ ಯಾತ್ರೆ 2.0

ಇದನ್ನೆಲ್ಲಾ ಗಮನಿಸಿದ ಅಲ್ಲದ್ದ ವ್ಯಕ್ತಿಯೊಬ್ಬರು ಆತನ ಹಾವಭಾವವನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ, ಅಷ್ಟೇ ಅಲ್ಲದೆ ಇವ್ರು ಹಳೇ ಕಾಲದ್​ ರೌಡಿ ಅಂತೆ ಎಣ್ಣೆ ಹೊಡ್ದಾಗ ಇವ್ರಿಗೆ ಹಳೆ ಕಾಲದ್​ ಎಲ್ಲ ನೆನ್ಪಾಗುತ್ತಂತೆ, ಆಮೇಲೆ ಈ ರೀತಿ ಬಾಡಿ ಶೋ ಆಫ್​​ ಎಲ್ಲಾ ಮಾಡ್ತಾರಂತೆ, ಹಾಗಂತ ಅವ್ರೆ ನನ್ನತ್ರ ಹೇಳಿದ್ರು, ಈಗ ನನನ್ನೂ ಟಾರ್ಗೆಟ್​ ಮಾಡ್ತಿದ್ದಾರೆ, ಈಗಾಗಲೇ 2 ಸತಿ ಲುಕ್​ ಕೊಟ್​​ ಹೋದ್ರು ಅಂತ ವಿಡಿಯೋ ಮಾಡ್ತಾ ಹೇಳಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ ಇವರು ಶಿವಮೊಗ್ಗದ ವೈನ್ಸ್​ ಸ್ಟೋರ್​​ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಮದ್ಯಪಾನ ಮಾಡ್ತಾಗ ಈರೀತಿ ಯಾವಾಗಲು ಮಾಡುತ್ತಾರೆ, ನಾನೇ ಪೈಲ್ವಾನ್​ ಹಾಗೆ ಹೀಗೆ ಓಡಾಡ್ತಾರೆ ಎಂದಿದ್ದಾರೆ. ಒಟ್ಟಾರೆಯಾಗಿ ವೃದ್ದನ ಬಾಡಿ ಬಿಲ್ಡಿಂಗ್​ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor