ವಾಕ್‌ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಡಾಕ್ಟರ್‌ ಶವ ರೈಲ್ವೆ ಟ್ರ್ಯಾಕ್‌ ಮೇಲೆ ಪತ್ತೆ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 6, 2024 ‌ 

ಸಂಜೆ ವಾಕ್‌ ಮಾಡಿ ಬರುತ್ತೀನಿ ಎಂದು ಹೇಳಿ ಹೋದ 27 ವರ್ಷದ ಡಾಕ್ಟರ್‌ ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿನ ಬಗ್ಗೆ ಸಂಶಯವಿದ್ದು, ಪ್ರಕರಣ ನಿಗೂಢವಾಗಿದೆ. 

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಸಮುದಾಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ ಉತ್ತಮ್‌ ಎಂಬವರ ಶವ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಕಟ್ಟೆಹೊಳೆ ಬಳಿಯಲ್ಲಿ ಸಿಗುವ ರೈಲ್ವೆ ಟ್ರ್ಯಾಕ್‌ ಮೇಲೆ ಪತ್ತೆಯಾಗಿದೆ. ಟ್ರೈನ್‌ಗೆ ಸಿಲುಕಿ ಅವರು ಸಾವನ್ನಪ್ಪಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ಭದ್ರಾವತಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಪ್ರಕರಣದಲ್ಲಿ ಡಾ ಉತ್ತಮ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆಯಾದರೂ, ಸಾವು ಹಲವು ಸಂಶಯಗಳಿಗೆ ಎಡೆಮಾಡಿದೆ.  

SUMMARY | ‌ body of a doctor at Ajjampura Community Health Centre in Chikkamagaluru district, was found on the railway track near Kattehole village in Tarikere taluk 

KEY WORDS | body of a doctor at on the railway track , Kattehole village in Tarikere taluk , Ajjampura Community Health Centre, Chikkamagaluru district

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor