ಸೂಪರ್‌ ಸ್ಟಾರ್ ಅಲ್ಲೂ ಅರ್ಜುನ್‌ ವಿರುದ್ಧ FIR

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 6, 2024

ಪುಷ್ಟ 2 ಚಿತ್ರ ಈಗಾಗಲೇ ವಿಶ್ವದಾದ್ಯಂತ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಚಿತ್ರ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಅಲ್ಲೂ ಅರ್ಜುನ್‌ಗೆ ಬಿಗ್‌ ಶಾಕ್‌ವೊಂದು ಎದುರಾಗಿದೆ ಅದೇನೆಂದರೆ ಅಲ್ಲೂ ಅರ್ಜುನ್‌ ವಿರುದ್ಧ FIR ದಾಖಲಾಗಿದೆ.

ಕಳೆದ ಬುಧವಾರ ಸಂಜೆ ಹೈದರಬಾದ್‌ ನ ಸಂಧ್ಯಾ ಥಿಯೇಟರ್‌ ನಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು, FIR ನಲ್ಲಿ ಅಲ್ಲೂ ಅರ್ಜುನ್‌ ಹಾಗೂ ಥಿಯೇಟರ್‌ ಮಾಲಿಕರನ್ನ ಆರೋಪಿಯಾಗಿಸಿದ್ದಾರೆ. ಮೃತ ಮಹಿಳೆಯ ಕುಟುಂಬಸ್ಥರು ದೂರಿನನ್ವಯ ಈ ಎಫ್‌ಐಆರ್‌ ದಾಖಲಾಗಿದೆ. 

ಏನಿದು ಪ್ರಕರಣ

ಹೈದರಾಬಾದ್ ನ ಚಿಕ್ಕಡ್‌ಪಲ್ಲಿಯ ಸಂಧ್ಯಾ ಥಿಯೇಟರ್‌ನಲ್ಲಿ ಬುಧವಾರ ರಾತ್ರಿ  ಪುಷ್ಫ ಚಿತ್ರದ ಪ್ರೀಮಿಯರ್‌ ಶೋ ನಡೆಯುತ್ತಿತ್ತು. ಈ ಶೋಗೆ ಸ್ವತಃ ಅಲ್ಲೂ ಅರ್ಜುನ್‌ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅಲ್ಲು ಅರ್ಜುನ್‌ರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಪರಿಣಾಮ 39 ವರ್ಷದ ರೇವತಿ ಎಂಬ ಮಹಿಳೆ  ಜನರ ನಡುವೆ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಈಕೆಯ 12 ವರ್ಷದ ಮಗ ಸಹ ಗಂಭೀರ ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಅಲ್ಲು ಅರ್ಜುನ್‌ ವಿರುದ್ಧ ಎಫ್‌ ಐ ಆರ್‌ ದಾಖಲಿಸಲು ಕಾರಣವೇನು

ಹೈದರಾಬಾದ್ ನ ಚಿಕ್ಕಡಪಲ್ಲಿಯ ಸಂಧ್ಯಾ ಥಿಯೇಟರ್ ಗೆ ಅಲ್ಲು ಅರ್ಜುನ್‌ ಆಗಮಿಸುವ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲ. ಅಷ್ಟೇ ಅಲ್ಲದೆ ಥಿಯೇಟರ್ ಮಾಲೀಕರು ಸಹ ಇದರ ಬಗ್ಗೆ ತಿಳಿಸಿರಲಿಲ್ಲ. ಮಾಹಿತಿ ಇದ್ದಿದ್ದರೆ ಪೊಲೀಸರು ಹೆಚ್ಚಿನ ಭದ್ರತೆಯನ್ನು ಒದಗಿಸುತ್ತಿದ್ದರು. ಮಾಹಿತಿ ನೀಡದೆ ಅಲ್ಲು ಅರ್ಜುನ್ ಖಾಸಗಿ ಭದ್ರತೆಯೊಂದಿಗೆ ಥಿಯೇಟರ್ ಪ್ರವೇಶಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಅಲ್ಲೂಅರ್ಜುನ್, ಅಲ್ಲೂ ಅರ್ಜುನ್ ರವರ ಭದ್ರತಾ ಸಿಬ್ಬಂದಿ ಹಾಗೂ ಥಿಯೇಟರ್ ಮಾಲೀಕರ ಮೇಲೆ ಕುಟುಂಬಸ್ಥರು ನೀಡಿದ ದೂರಿನ ಹಿನ್ನಲೆ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

SUMMARY |  Allu Arjun is in for a big shock that an FIR has been registered against Allu Arjun at the police station.

KEYWORDS |  Allu Arjun,  police station, FIR,  hydrebadh,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor