ಶರಾವತಿ ಹಿನ್ನೀರಿನಲ್ಲಿ ಊಟಕ್ಕೆ ತೆರಳಿದ್ದ ಮೂವರು ಯುವಕರು ನೀರು ಪಾಲು

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 13, 2024 

ಸಾಗರ | ಹೊಳೆಬದಿಯಲ್ಲಿ ಊಟಕ್ಕೆ ಅಂತಾ ತೆರಳಿದವರು ನೀರು ಪಾಲಾದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿ ಸಮೀಪ ಕಳಸವಳ್ಳಿಯಲ್ಲಿ ಸಂಭವಿಸಿದೆ. 

ಈ ಭಾಗದಲ್ಲಿ ಹೊಳೆ ಬದಿಯಲ್ಲಿ ಊಟಕ್ಕೆ ಅಂತಾ ಹಿನ್ನೀರಿನ ಬಳಿಗೆ ಹೋಗುತ್ತಾರೆ. ಅದೇ ರೀತಿಯಲ್ಲಿ ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರ ಮೂಲದ ಐವರು ಯುವಕರು ಕಳಸವಳ್ಳಿ ಬದಿಯ ಹಿನ್ನೀರಿಗೆ ತೆರಳಿದ್ದಾರೆ. ಅಲ್ಲಿಯೇ ದಡದಲ್ಲಿದ್ದ ಉಕ್ಕುಡವನ್ನು ಬಳಸಿ ಹಿನ್ನೀರಿನ ಇನ್ನೊಂದು ಬದಿಗೆ ಹೋಗಿದ್ದಾರೆ. 

ಹಾಗೂ ಹೀಗೂ ಇನ್ನೊಂದು ಬದಿಗೆ ಹೋಗಿದ್ದ ಯುವಕರು ಅಲ್ಲಿಯೇ ಊಟ ಮಾಡಿದ್ದಾರೆ. ಅಲ್ಲಿಂದ ವಾಪಸ್‌ ಬರುವಾಗ ಉಕ್ಕುಡದ ಒಳಗೆ ನೀರು ನುಗ್ಗಲು ಆರಂಭವಾಗಿದೆ. ಪರಿಣಾಮ ಉಕ್ಕುಡದಲ್ಲಿದ್ದವರು ಮುಳುಗುವಂತಾಗಿದೆ. ಆಗ ಐವರ ಪೈಕಿ ಇಬ್ಬರು ಈಜಿಕೊಂಡು ದಡಕ್ಕೆ ಬಂದಿದ್ದಾರೆ. ಉಳಿದ ಮೂವರು ನೀರಿನಲ್ಲಿ ಮುಳುಗಿದ್ದಾರೆ. 

ನೀರಿನಲ್ಲಿ ಮುಳುಗಿದವರನ್ನ ಚೇತನ್‌ ರಾಜು ಸಂದೀಪ್‌ ಎಂದು ಗುರುತಿಸಲಾಗಿದೆ. ಇವರ ಪೈಕಿ ಓರ್ವ ಗೇಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನಿಬ್ಬರು ಹೋಟೆಲ್‌ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸಂಜೆ ಐದು ಗಂಟೆಗೆ ನಡೆದ ಘಟನೆಯ ಬಗ್ಗೆ ಕೇಳಿ ಶರಾವತಿ ಹಿನ್ನೀರು ಭಾಗದಲ್ಲಿ ದುಃಖ ಮಡುಗಟ್ಟಿದೆ. ಸದ್ಯ  ಮುಳುಗಿದವರಿಗಾಗಿ ಹುಡಕಾಟ ಆರಂಭವಾಗಿದ್ದು, ಕತ್ತಲು ಕಾರ್ಯಾಚರಣೆಗೆ ಅಡ್ಡಿಯಾಗಿದೆ. 

SUMMARY | Three persons drowned in the backwaters near Kalasavalli near Thumari in Sagar taluk 

KEYWORDS |   Three persons drowned in the backwaters , Kalasavalli ,Thumari in Sagar taluk 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor