ಶಿವಮೊಗ್ಗ-ತಾಳಗುಪ್ಪ-ಮೈಸೂರು, ಯಶವಂತಪುರ ಟ್ರೈನ್​ಗಳ ಸಮಯದಲ್ಲಿ ಬದಲಾವಣೆ! ಎಷ್ಟೊತ್ತಿಗೆ ಹೊರಡಲಿದೆ!? ಎಷ್ಟೊತ್ತಿಗೆ ಬರಲಿದೆ ವಿವರ ಇಲ್ಲಿದೆ ನೋಡಿ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jun 27, 2023 SHIVAMOGGA NEWS 

ಶಿವಮೊಗ್ಗದ ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಮಹತ್ವದ ಮಾಹಿತಿಯೊಂದನ್ನ ನೀಡಿದ್ದು, ಶಿವಮೊಗ್ಗಕ್ಕೆ ಸಂಬಂಧಿಸಿದ  ತನ್ನ ರೈಲುಗಳ ಸಂಚಾರದ ಸಮಯದಲ್ಲಿ ಬದಲಾವಣೆಯನ್ನು ಕೈಗೊಂಡಿದೆ.  ಮುಖ್ಯವಾಗಿ ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌, (talguppa-mysuru-express) 

ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌ ರೈಲು (yesvantpur-shivamogga-town-express-16581) ಮತ್ತು  ಮೈಸೂರು – ಶಿವಮೊಗ್ಗ ಅನ್‌ ರಿಸರ್ವಡ್‌ ಎಕ್ಸ್‌ಪ್ರೆಸ್‌  (mysuru-shivamogga-town-express-16225) ರೈಲಿನ ಟೈಮಿಂಗ್ಸ್​ನ್ನ ನೈರುತ್ಯ ರೈಲ್ವೆ ಇಲಾಖೆ ಬದಲಾಯಿಸಿದೆ. 

ಈ ಸಂಬಂಧ ನೈಋತ್ಯ ರೈಲ್ವೆ (South Western Railway) ಹೊರಡಿಸಿರುವ ಪ್ರಕಟಣೆಯಲ್ಲಿ ವಿವರ ನೀಡಲಾಗಿದ್ದು, ಈ ಬದಲಾವಣೆ  ಜೂನ್​ 28 ರಿಂದ ಜಾರಿಗೆ ಬರಲಿದೆ. 

ಶಿವಮೊಗ್ಗ-ತಾಳಗುಪ್ಪ-ಮೈಸೂರು, ಯಶವಂತಪುರ ಟ್ರೈನ್​ಗಳ ಸಮಯದಲ್ಲಿ ಬದಲಾವಣೆ! ಎಷ್ಟೊತ್ತಿಗೆ ಹೊರಡಲಿದೆ!? ಎಷ್ಟೊತ್ತಿಗೆ ಬರಲಿದೆ ವಿವರ ಇಲ್ಲಿದೆ ನೋಡಿ

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌, (talguppa-mysuru-express) 

ತಾಳಗುಪ್ಪ ಮೈಸೂರು ಎಕ್ಸ್‌ಪ್ರೆಸ್‌ ರೈಲು ತಾಳಗುಪ್ಪದಿಂದ ಎಂದಿನಂತೆ ರಾತ್ರಿ 9 ಗಂಟೆಗೆ ಹೊರಡಲಿದೆ.  ಇದುವರೆಗೂ ರಾತ್ರಿ 3.28ಕ್ಕೆ ತುಮಕೂರು ತಲುಪುತ್ತಿದ್ದ ರೈಲು 3.30ಕ್ಕೆ ಹೊರಡುತ್ತಿತ್ತು. ಬದಲಾದ ಸಮಯದಂತೆ ಜೂನ್ 28ರಿಂದ ರಾತ್ರಿ 2.18ಕ್ಕೆ ತುಮಕೂರು ತಲುಪಿ 2.20ಕ್ಕೆ ನಿರ್ಗಮಿಸಲಿದೆ. ಇನ್ನೂ  ಬೆಳಗ್ಗೆ 4.40ಕ್ಕೆ ಯಶವಂತಪುರ ನಿಲ್ದಾಣ ತಲುಪುತ್ತಿದ್ದ ಟ್ರೈನ್​  4.28ಕ್ಕೆ ತಲುಪಿ 4.30ಕ್ಕೆ ಹೊರಡಲಿದೆ. ಬೆಳಗ್ಗೆ 5 ಗಂಟೆಗೆ ಬೆಂಗಳೂರು ನಿಲ್ದಾಣ ತಲುಪುತ್ತಿದ್ದ ರೈಲು 4.50 ಕ್ಕೆ ತಲುಪಿ 5.05ಕ್ಕೆ ನಿರ್ಗಮಿಸಲಿದೆ.

ಶಿವಮೊಗ್ಗ-ತಾಳಗುಪ್ಪ-ಮೈಸೂರು, ಯಶವಂತಪುರ ಟ್ರೈನ್​ಗಳ ಸಮಯದಲ್ಲಿ ಬದಲಾವಣೆ! ಎಷ್ಟೊತ್ತಿಗೆ ಹೊರಡಲಿದೆ!? ಎಷ್ಟೊತ್ತಿಗೆ ಬರಲಿದೆ ವಿವರ ಇಲ್ಲಿದೆ ನೋಡಿ

ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌ ರೈಲು (yesvantpur-shivamogga-town-express) 

ಇನ್ನೂ ಮುಖ್ಯವಾಗಿ ಶಿವಮೊಗ್ಗ ಯಶವಂತಪುರ ಎಕ್ಸ್‌ಪ್ರೆಸ್‌  ಟ್ರೈನ್​  (ರೈಲು ಸಂಖ್ಯೆ 16580) ಶಿವಮೊಗ್ಗದಿಂದ  ಮಧ್ಯಾಹ್ನ 3.30ಕ್ಕೆ ಹೊರಡುತ್ತಿತ್ತು.  ಜೂನ್​ 28ರಿಂದ 5 ನಿಮಿಷ ತಡವಾಗಿ ಹೊರಡಲಿದೆ. ಅಂದರೆ 3.45ಕ್ಕೆ ಹೊರಡಲಿದೆ.

ಮಧ್ಯಾಹ್ನ 3.48ಕ್ಕೆ ಭದ್ರಾವತಿಗೆ ತಲುಪುತ್ತಿದ್ದ ರೈಲು ಜೂನ್ 28 ರಿಂದ  ಸಂಜೆ 4.3ಕ್ಕೆ ತಲುಪಿ 4.5ಕ್ಕೆ ಹೊರಡಲಿದೆ.

ತರಿಕೆರೆಗೆ 4.22 ಕ್ಕೆ ತಲುಪಿ 4.24ಕ್ಕೆ ನಿರ್ಗಮಿಸಲಿದೆ.  ಬೀರೂರಿಗೆ 4.52ಕ್ಕೆ ತಲುಪಿ 4.54ಕ್ಕೆ ಹೊರಡಲಿದೆ.  ಕಡೂರಿಗೆ ಸಂಜೆ 5.3ಕ್ಕೆ ತಲುಪಿ 5.05ಕ್ಕೆ ನಿರ್ಗಮಿಸಲಿದೆ. ಅರಸೀಕೆರೆಗೆ  5.35ಕ್ಕೆ ತಲುಪಿ 5.40ಕ್ಕೆ ನಿರ್ಗಮಿಸಲಿದೆ. 

ತಿಪಟೂರಿಗೆ ರೈಲು 6 ಗಂಟೆಗೆ ತಲುಪಿ 6.02ಕ್ಕೆ ಹೊರಡಲಿದೆ.  ತುಮಕೂರಿಗೆ ರೈಲು 6.40ಕ್ಕೆ ತಲುಪಿ 6.42ಕ್ಕೆ ನಿರ್ಗಮಿಸಲಿದೆ.  

ಶಿವಮೊಗ್ಗ-ತಾಳಗುಪ್ಪ-ಮೈಸೂರು, ಯಶವಂತಪುರ ಟ್ರೈನ್​ಗಳ ಸಮಯದಲ್ಲಿ ಬದಲಾವಣೆ! ಎಷ್ಟೊತ್ತಿಗೆ ಹೊರಡಲಿದೆ!? ಎಷ್ಟೊತ್ತಿಗೆ ಬರಲಿದೆ ವಿವರ ಇಲ್ಲಿದೆ ನೋಡಿ

ಮೈಸೂರು – ಶಿವಮೊಗ್ಗ ಅನ್‌ ರಿಸರ್ವಡ್‌ ಎಕ್ಸ್‌ಪ್ರೆಸ್‌  

ಮೈಸೂರು ಶಿವಮೊಗ್ಗ ಅನ್‌ ರಿಸರ್ವಡ್‌ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ16225) ಸಂಜೆ 4.25ಕ್ಕೆ ಶಿವಮೊಗ್ಗ ನಿಲ್ದಾಣದ ತಲುಪುತ್ತಿತ್ತು. ಬದಲಾದ ಸಮಯದಂತೆ ಜೂನ್ 28 ರಿಂದ ಈ ರೈಲು ಸಂಜೆ 4.40ಕ್ಕೆ ತಲುಪಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಶಿವಮೊಗ್ಗ-ತಾಳಗುಪ್ಪ-ಮೈಸೂರು, ಯಶವಂತಪುರ ಟ್ರೈನ್​ಗಳ ಸಮಯದಲ್ಲಿ ಬದಲಾವಣೆ! ಎಷ್ಟೊತ್ತಿಗೆ ಹೊರಡಲಿದೆ!? ಎಷ್ಟೊತ್ತಿಗೆ ಬರಲಿದೆ ವಿವರ ಇಲ್ಲಿದೆ ನೋಡಿ

 


ಅವಳಿ ಜವಳಿ ಕಾಲೇಜಿಗೆ ಹೊರಟಾಗ ಒಬ್ಬಳ ಕಿಡ್ನ್ಯಾಪ್​ ಆರೋಪ ! ತಂದೆಯಿಂದಲೇ ದಾಖಲಾಯ್ತು ದೂರು!

ಯುವತಿಯೊಬ್ಬಳನ್ನ ಬಲವಂತವಾಗಿ ಬೈಕ್​ ನಲ್ಲಿ ಕೂರಿಸಿಕೊಂಡು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಆರೋಪಿಸಿ ತಂದೆಯೊಬ್ಬರು ದೂರು ನೀಡಿದ್ದಾರೆ. ತಮ್ಮ ಅವಳಿ ಮಕ್ಕಳ ಪೈಕಿ ಓರ್ವಳನ್ನ ಯುವಕನೊಬ್ಬ ಕಿಡ್ನ್ಯಾಪ್ ಮಾಡಿರುವುದಾಗಿ ದೂರು ನೀಡಿದ್ಧಾರೆ. ಈ ಬಗ್ಗೆ ತಮ್ಮ ಇನ್ನೊಬ್ಬ ಮಗಳು ಮಾಹಿತಿ ನೀಡಿದ್ದರ ಆಧರಿಸಿ ದೂರು ನೀಡುತ್ತಿರುವುದಾಗಿ ಎಫ್​ಐಆರ್​ ಉಲ್ಲೇಖಿಸಲಾಗಿದೆ. 

ನಡೆದಿದ್ದೇನು

ಸಾಗರ ರಸ್ತೆಯಲ್ಲಿರುವ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ಕಳೆದ 23 ನೇ ತಾರೀಖು ಎಂದಿನಂತೆ ಕಾಲೇಜಿಗೆ ಹೊರಟಿದ್ದಾರೆ. ಈ ಮಧ್ಯೆ ಮಲವಗೊಪ್ಪದ ಯುವಕನೊಬ್ಬ ಬೈಕ್​ನಲ್ಲಿ ಬಂದು ಒರ್ವಳನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂಬುದು ಆರೋಪ. ಈ ಸಂಬಂಧ ಜೊತೆಯಲ್ಲಿದ್ದ ಸಹೋದರಿ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆನಂತರ ಯುವಕನ ಮನೆಗೂ ಸಹ ಹೋಗಿ ತಂದೆ ತಮ್ಮ ಮಗಳ ಬಗ್ಗೆ ವಿಚಾರಿಸಿದ್ದಾರೆ. ಅವರು ಸಮರ್ಪಕವಾಗಿ ಉತ್ತರ ಕೊಡದ ಕಾರಣ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. 


ಅನಾರೋಗ್ಯ ಕಾರಣಕ್ಕೆ ಬಿ.ಕೆ ಸಂಗಮೇಶ್ವರ್ ಲಂಡನ್​ಗೆ ಹೋಗಿದ್ರಾ? ಏನಿದು ಪ್ರಶ್ನೆ? ಶಾಸಕರು ಕೊಟ್ಟ ಉತ್ತರವೇನು ಗೊತ್ತಾ?

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್​   ಆರೋಗ್ಯ ಸರಿ ಇಲ್ಲ ಎಂದು ಅಪಪ್ರಚಾರ ಮಾಡಲಾಗ್ತಿದ್ದು, ಅವರು, ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದಾರೆ, ಸಿಂಗಾಪುರಕ್ಕೆ ತೆರಳಿದ್ದಾರೆ ವದಂತಿ ಹಬ್ಬಿಸಲಾಗುತ್ತಿದೆಯಂತೆ. ಹೀಗೆಂದು ಸ್ವತಃ ಶಾಸಕ ಸಂಗಮೇಶ್ವರ್ ಹೇಳಿದ್ದು, ಆರೋಗ್ಯದ ವಿಚಾರದಲ್ಲಿಯು  ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. 

ಫಾರೆಸ್ಟ್​ ಜಾಗ ಒತ್ತುವರಿಗಾಗಿ, ಅರಣ್ಯ ಅಧಿಕಾರಿಗೆ ಹನಿಟ್ರ್ಯಾಪ್​! ತೀರ್ಥಹಳ್ಳಿಯಲ್ಲಿ ನಡೆದಿದ್ದೇನು ಗೊತ್ತಾ? ಹಳೆ ಲೇಡಿ ಹೊಸ ಗ್ಯಾಂಗ್!

ಅಲ್ಲದೆ , ನನ್ನ ಆರೋಗ್ಯ ಚೆನ್ನಾಗಿದೆ ಎಂದ ಅವರು,  ಕ್ಷೇತ್ರದ ಜನರು ಬೆಂಗಳೂರಿಗೆ ಬಂದು, ತಮ್ಮ ಬಳಿ ಮಾತನಾಡಿ , ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದರು ಎಂದಿದ್ಧಾರೆ. ಈ ಮೂಲಕ ಇಷ್ಟು ದಿನ ಬೆಂಗಳೂರಿನಲ್ಲಿ ಉಳಿದುಕೊಂಡ ಬಗ್ಗೆ ಸಂಗಮೇಶ್​​ ಸಮರ್ಥನೆ ನೀಡಿದರು. 

ಟಿಪ್ಪು ನಗರದಲ್ಲಿ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್​ ನಲ್ಲಿ ಆಗಿದ್ದೇನು? ಎಸ್​ಪಿ ಮಿಥುನ್​ ಕುಮಾರ್​ ಸ್ಪಷ್ಟನೆ ಏನು ಗೊತ್ತಾ?

 

ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರಕ್ಕೆ 2  ಸಾವಿರ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದ ಸಂಗಮೇಶ್ವರ್​ ವಿಐಎಸ್​ಎಲ್​ ಹಾಗೂ ಎಂಪಿಎಂ ಕಾರ್ಖಾನೆ ಸಲುವಾಗಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ಧಾರೆ.  

ಟಿಪ್ಪು ನಗರ , ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದ ಘಟನೆ ಬಗ್ಗೆ ಬಜರಂಗದಳದ ರಾಜೇಶ್​ ಗೌಡ ಹೇಳುವುದೇ ಬೇರೆ? ಏನಿದು ಆರೋಪ


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor