is pink whatsapp safe? ಪಿಂಕ್ WhatsApp ಲಿಂಕ್​ ಕ್ಲಿಕ್ ಮಾಡಿದ್ರೆ ಏನಾಗುತ್ತೆ ಗೊತ್ತಾ? ಗ್ರೂಪ್​ಗಳಲ್ಲಿ ಬರುತ್ತಿರುವ ಮೆಸೇಜ್​ ಕ್ಲಿಕ್ ಮಾಡುವ ಮೊದಲು ಈ ಸ್ಟೋರಿ ಓದಿ

This Article Written by / Malenadu Today / ಜೂನ್ 14, 2023

KARNATAKA NEWS/ ONLINE / Malenadu today/ Jun 15, 2023 SHIVAMOGGA NEWS

ನಿಮ್ಮ ಮೊಬೈಲ್​ ನ ವಾಟ್ಸ್ಯಾಪ್​ಗೆ Do you know about new whatsapp? Must check this once https://2×0.site?=pink ಹೀಗೊಂದು ಸಂದೇಶ ಬರುತ್ತಿದ್ಯಾ! ಹಾಗಿದ್ರೆ ಆ ಲಿಂಕ್​ಗಳನ್ನ ಯಾವುದೇ ಕಾರಣಕ್ಕೂ ಕ್ಲಿಕ್​ ಮಾಡಬೇಡಿ, ಇದು ಪಿಂಕ್ ವಾಟ್ಸ್ಯಾಪ್​ ಹೆಸರಿನ ವೈರಸ್ ಆಗಿದ್ದು, ನಿಮ್​ ಮೊಬೈಲ್​ಗಳಲ್ಲಿನ ಮಾಹಿತಿಯನ್ನು ಇದು ದೋಚುವ ಸಾಧ್ಯತೆ ಇದೆ. 

ಶಿವಮೊಗ್ಗದ ಇಲಿಯಾಜ್​ ನಗರದಲ್ಲಿ ಯುವಕ ಕಗ್ಗೊಲೆ! ಆರೋಪಿ ಬಂಧನ! ನಡೆದಿದ್ದೇನು?

ಹೌದು, ವಾಟ್ಸಾಪ್ ಪಿಂಕ್ ಎಂಬುದು ವಾಟ್ಸಾಪ್ ಗ್ರೂಪ್​ಗಳ  ಮೂಲಕ ಹರಡುತ್ತಿರುವ ಹೊಸ ವೈರಸ್.  ಪಿಂಕ್-ಬಣ್ಣದ WhatsApp ಅನ್ನು ಡೌನ್​ ಲೋಡ್ ಮಾಡಿಕೊಳ್ಳಿ ಎಂಬ  APK ಫೈಲ್‌ ಮೊಬೈಲ್​ಗಳಲ್ಲಿ ಮೊದಲು ರವಾನೆಯಾಗುತ್ತದೆ. ಆನಂತರ ಅದನ್ನ ಡೌನ್​ಲೋಡ್ ಮಾಡಿಕೊಂಡರೆ, ಅದು ಮೊಬೈಲ್​ನೊಳಗೆ ಸೇರಿಕೊಂಡು ವೈರಸ್​ಗಳನ್ನ ಮೊಬೈಲ್​ಗೆ ರವಾನೆ ಮಾಡುತ್ತದೆ. ಇದರಿಂದಾಗಿ ಮೊಬೈಲ್ ಸಂಪೂರ್ಣ ಬಂದ್ ಆದರೂ ಆಗಬಹುದು, ಅಥವಾ ಖಾಸಗಿ ಡೇಟಾಗಳು ಕಂಡವರ ಪಾಲಾಗಿ,  ಬ್ಲ್ಯಾಕ್​ಮೇಲ್​ಗೆ ಗುರಿಯಾಗುವಂತಹ ಸಾಧ್ಯತೆಗಳು ಇರುತ್ತದೆ. 

Malenadu Today Shivamogga

ಶಿವಮೊಗ್ಗದಲ್ಲಿ ಒಂದೇ ದಿನ 99 ವಾಹನಗಳು ಸೀಜ್! 99 ಕೇಸ್​ ದಾಖಲು! ಕಾರಣವೇನು ಗೊತ್ತಾ?

ಅಂದಹಾಗೆ ಪಿಂಕ್​  ವಾಟ್ಸಾಪ್ ಬಳಸಿ ಎಂಬ ಮೇಸೇಜ್​ ಬರುತ್ತಿರುವುದು ಇದೇ ಮೊದಲಲ್ಲ.  ಈ ಹಿಂದೇ ಪಿಂಕ್ ವಾಟ್ಸ್ಯಾಪ್​ನ ಮೆಸೆಜ್​ಗಳು ವೈರಲ್ ಆಗಿದ್ದವು, ಗೊತ್ತಿರುವವರ ನಂಬರ್​ನಿಂದಲೇ ಕೆಲವೊಮ್ಮೆ ಆಟೋಮೆಟಿಕ್ ಆಗಿ, ಗ್ರೂಪ್​ಗಳಲ್ಲಿ ಪಿಂಕ್ ವಾಟ್ಸ್ಯಾಪ್​ನ ಮೆಸೇಜ್​ ರವಾನೆಯಾಗುತ್ತಿತ್ತು. ಅದನ್ನ ನಂಬಿ ಕ್ಲಿಕ್ ಮಾಡಿದರೇ ವೈರಸ್​ಗೆ ಆಹ್ವಾನ ಕೊಟ್ಟಂತೆ ಸರಿ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಹೇಳುತ್ತಾರೆ. 

Malenadu Today Shivamogga

WhatsApp ಪಿಂಕ್ ಎಂದರೇನು?

WhatsApp ಪಿಂಕ್ ಎಂದರೆ, ಅದೊಂದು ವೈರಸ್​ ಹೊಂದಿರುವ ಪ್ರೋಗ್ರಾಮ್​ ಆಗಿದ್ದು, ನಿರ್ದಿಷ್ಟ ಮೊಬೈಲ್​ನ ಡೇಟಾ ಕದಿಯುವ ಅಥವಾ ಮೊಬೈಲ್​ನ ಕಂಟ್ರೋಲ್​ಗಳನ್ನ ಹೈಜಾಕ್ ಮಾಡುವ ಉದ್ದೇಶಕ್ಕಾಗಿ ರೂಪಿಸಲಾಗಿದೆ.  ಸದ್ಯ ಈ ಸಂಬಂಧ ಶಿವಮೊಗ್ಗ ಪೊಲೀಸ್ ವರಿಷ್ಟಾಧಿಕಾರಿ ಎಸ್​ಪಿ ಮಿಥುನ್ ಕುಮಾರ್ ಕೂಡ ಟ್ವೀಟ್ ಮಾಡಿದ್ದು,  ಪಿಂಕ್ ವಾಟ್ಸ್‌ಪ್ಸ್ ಹೆಸರಿನ ವೈರಸ್ ಬಗ್ಗೆ ಎಚ್ಚರದಿಂದಿರಿ ವಾಟ್ಸ್ಪ್ಸ್ ಪಿಂಕ್ ಹೆಸರಿನ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಎಂದು ಸಂದೇಶ ರವಾನೆ ಮಾಡಿದ್ಧಾರೆ

ಶಿವಮೊಗ್ಗಕ್ಕೆ ಮತ್ತೊಂದು ಮೆಗಾ ಪ್ರಾಜೆಕ್ಟ್!ಸಂಸದರ ಮನವಿಗೆ ಅಸ್ತು ಎಂದ ನಿತಿನ್ ಗಡ್ಕರಿ! ಏನದು?|

WhatsApp ಪಿಂಕ್ ಅನ್‌ಇನ್‌ಸ್ಟಾಲ್ ಮಾಡುವುದು ಹೇಗೆ? 

1. ಪಿಂಕ್ ವಾಟ್ಸಪ್ ಕ್ಲಿಕ್​ ಮಾಡಿದ್ದರೇ,  ತಕ್ಷಣವೇ ಅದನ್ನು ಅನ್‌ಇನ್‌ಸ್ಟಾಲ್ ಮಾಡಬಹುದು!

2  ವಾಟ್ಸ್ಯಾಪ್​  ವೆಬ್ ಗೆ  ಆಗಿರುವ ಲಾಗಿನ್​ಗಳನ್ನು ವಾಟ್ಸ್ಯಾಪ್​ ಸೆಟ್ಟಿಂಗ್​ನಲ್ಲಿ ಹೋಗಿ ಅನ್​ಲಿಂಕ್ ಮಾಡಿ

3.ಸೆಟ್ಟಿಂಗ್‌ಗಳಿಂದ ಬ್ರೌಸರ್ ಕ್ಯಾಚೆಗಳನ್ನು ತೆರವುಗೊಳಿಸಿ. 

4.ಎಲ್ಲಾ ಅಪ್ಲಿಕೇಶನ್‌ಗಳಿಗೆ ಅಗತ್ಯ ಅನುಮತಿಯನ್ನು ನೀಡಲು ಸೆಟ್ಟಿಂಗ್​ನಲ್ಲಿ ಅವಕಾಶವಿದೆ! ಅಲ್ಲಿ ಪರಿಶೀಲಿಸಿ ಸೆಟ್ಟಿಂಗ್ಸ್ ಬದಲಾಯಿಸಿ

WhatsApp ಪಿಂಕ್ ಡೌನ್​ ಲೋಡ್ ಮಾಡಿದರೇ ಏನಾಗುತ್ತದೆ?

WhatsApp ಪಿಂಕ್  ನಿಮ್ಮ ಮೊಬೈಲ್​ನಲ್ಲಿ ಇನ್​ಸ್ಟಾಲ್​ ಮಾಡಿದರೆ, ನಿಮ್ಮ ಬ್ಯಾಂಕ್ ಅಕೌಂಟ್ ಮಾಹಿತಿ, ಪಾಸ್​ವರ್ಡ್ ಹಾಗೂ ಮೊಬೈಲ್​ಗೆ ಬರುವ ಒಟಿಪಿ ಕೂಡ ಸುರಕ್ಷಿತವಾಗಿರುವುದಿಲ್ಲ. 

ನಿಮ್ಮ ಖಾಸಗಿ ಫೋಟೋಗಳು, ಡೇಟಾಗಳು , ಖಾಸಗಿ ಮೆಸೇಜ್​ಗಳು ಹ್ಯಾಕರ್​ಗಳ ಪಾಲಾಗುವ ಅಪಾಯವಿರುತ್ತದೆ. ನಿಮ್ಮ ಮೊಬೈಲ್​ನಲ್ಲಿರುವ ಕಾಂಟಾಕ್ಟ್​ಗಳು ದುರುಪಯೋಗವಾಗಬಹುದು


   

 

pink whatsapp viras, pink whatsapp virus download, pink whatsapp virus link download, what is whatsapp virus, can you get a virus from whatsapp, can you get a virus from opening a whatsapp message, pink whatsapp virus link, is pink whatsapp safe, how to viral a link on whatsapp, pink whatsapp virus,

ಮುಂದಿನ ಸುದ್ದಿ ಒದಿ

Leave a Comment