SHIVAMOGGA | MALENADUTODAY NEWS | ಮಲೆನಾಡು ಟುಡೆ Oct 20, 2024
ಶಿವಮೊಗ್ಗ | ಮಳೆಯ ನಡುವೆ ಶಿವಮೊಗ್ಗ ಗ್ರಾಮಾಂತರ ಭಾಗದ ಹೊಳಲೂರಿನಲ್ಲಿ ಮೊಸಳೆಯೊಂದು ಮೋರಿಯಲ್ಲಿ ಪತ್ತೆಯಾಗಿದೆ. ಚರಂಡಿಯಲ್ಲಿ ಮೊಸಳೆಯ ಓಡಾಟ ಕಂಡು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮೊಸಳೆಯ ಮರಿಯೊಂದು ಇಲ್ಲಿನ ಮೋರಿಯೊಂದರಲ್ಲಿ ಓಡಾಡುವುದನ್ನ ಗಮನಿಸಿದ ಸ್ಥಳೀಯರು ಅದರ ಫೋಟೋ ವಿಡಿಯೋ ಮಾಡಿಕೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇನ್ನೂ ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಮರಿಯನ್ನ ಸಂರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಕಾಣಿಸಿಕೊಂಡಿದ್ದ ಮೊಸಳೆ ಮರಿ ನಿನ್ನೆದಿನ ಕಾಣಸಿಲ್ಲ. ಹೀಗಾಗಿ ಮೊಸಳೆ ಮರಿ ನದಿ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
SUMMARY | A crocodile has been found in a drain at Holalur in Shivamogga rural area. Locals have expressed concern over the crocodile’s movement in the drain.

KEYWORDS | crocodile found in a drainage , Holalurru , Shivamogga rural area. crocodile movement in the drain,