ಹುಲ್ಲು ಕಟ್ಟುವ ಮಷಿನ್​ಗೆ ಸಿಲುಕಿ ಕಾರ್ಮಿಕ ಸಾವು! ಹೇಗಾಯ್ತು ಘಟನೆ

Labourer dies after being hit by grass-making machine How did the incident happen? / shivamogga news,

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Labourer dies after being hit by grass-making machine How did the incident happen? / shivamogga news,

KARNATAKA NEWS/ ONLINE / Malenadu today/ May 31, 2023 SHIVAMOGGA NEWS

ಶಿವಮೊಗ್ಗ: ಬೈಪಾಸ್ ನಲ್ಲಿರುವ ಟೊಯೋಟಾ ಶೋ ರೂಂ ಹಿಂಭಾಗದ ಜಮೀನಿನಲ್ಲಿ  ಭತ್ತದ ಪೆಂಡಿ ಕಟ್ಟುವ ಯಂತ್ರಕ್ಕೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ಧಾನೆ. 

ಹೇಗಾಯ್ತು ಘಟನೆ

ಮೃತನನ್ನು ತಮಿಳುನಾಡಿನ ಕಲಕುರ್ಚಿಯ ಸೂರ್ಯ(23) ಎಂದು ಗುರುತಿಸಲಾಗಿದೆ. ನಿನ್ನೆ ಈ ಘಟನೆ ಸಂಭವಿಸಿದ್ದು,  ಭತ್ತದ ಪೆಂಡಿಗಳನ್ನು ಮಾಡುವಾಗ ಯಂತ್ರಕ್ಕೆ ಹುಲ್ಲು ಸಿಲುಕಿದೆ. ಅದನ್ನ ಈತ ಬಿಡಿಸಲು ಮುಂದಾಗಿದ್ಧಾನೆ. ಆ ವೇಳೆಯಲ್ಲಿ ಯಂತ್ರದೊಳಗೆ ಆತನ ಕುತ್ತಿಗೆ ಭಾಗ ಸಿಲುಕಿ ಮೃತಪಟ್ಟಿದ್ದಾನೆ . ಸದ್ಯ ಘಟನೆ ಸಂಬಂಧ. ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸ್ ದಾಖಲಿಸಿದ್ಧಾರೆ. 

ಮದುವೆಯಾದ ಮೇಲೆಯು ಗೆಳತನ ಬಿಡದ ಸ್ನೇಹಿತೆಯರು! ಗೆಳತಿಯ ಸಂಸಾರ ಸರಿಪಡಿಸಲು ಹೋಗಿ ಚಾಕುವಿನಿಂದ ಇರಿತಕ್ಕೊಳಗಾದರು!

ಶಿವಮೊಗ್ಗ/ ಗಂಡನಿಂದ ಮನನೊಂದು ಮನೆಬಿಟ್ಟು ಬಂದಿದ್ದ ಸ್ನೇಹಿತೆಯ ಪರವಾಗಿ ನಿಂತಿದ್ದಕ್ಕೆ ಗೆಳತಿಯ ಪತಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ಶಿವಮೊಗ್ಗದ ಅಶ್ವಥ್​ ನಗರದಲ್ಲಿ ನಡೆದಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ಕೂಡ ದಾಖಲಾಗಿದೆ. 

ನಡೆದಿದ್ದೇನು?

ಅಶ್ವಥ್​ ನಗರದ ನಿವಾಸಿ ಯುವತಿಯೊಬ್ಬರು ತಮ್ಮ ಗಂಡನ ಮನೆಯ ಸಮಸ್ಯೆಯಿಂದ ಬೇಸತ್ತು ಮನೆಬಿಟ್ಟು ಹೋಗುವುದಾಗಿ, ಆಕೆಯ ಇಬ್ಬರು ಸ್ನೇಹಿತೆಯರಿಗೆ ಹೇಳಿದ್ಧಾರೆ. ಈ ವೇಳೆ ಆಕೆಯನ್ನು ಸಮಾಧಾನ ಮಾಡಿದ ದೂರುದಾರ ಮಹಿಳೆಯು, ಶಿವಮೊಗ್ಗ ಖಾಸಗಿ ಬಸ್​ಸ್ಟ್ಯಾಂಡ್​ನಲ್ಲಿ ಆಕೆಯನ್ನು ಸಮಾಧಾನ ಪಡಿಸಿದ್ಧಾರೆ . ಅಲ್ಲದೆ ಮೂವರು  ಸೇರಿ, ನೊಂದ ಯುವತಿಯ ಗಂಡನ ಮನೆಯ ಕಡೆಯವರಿಗೆ ಫೋನ್ ಮಾಡಿದ್ದಾರೆ.  ಆಗ ಸ್ನೇಹಿತೆಯ ಪತಿಯು, ಮೂವರನ್ನು  ಚೌಡಮ್ಮ ದೇವಸ್ಥಾನದ ಹತ್ತಿರ ಬರಲು ಹೇಳಿದ್ಧಾನೆ. ಅಲ್ಲಿಗೆ ಮೂವರು ಸ್ನೇಹಿತೆಯರು ಒಟ್ಟಿಗೆ ಹೋಗಿದ್ದಾರೆ. ಆದರೆ ಅಲ್ಲಿ ಆರೋಪಿ ಹಾಗೂ ಇನ್ನೊಬ್ಬ ಮೂವರ ಮೇಲೆ ಹಲ್ಲೆ ಮಾಡಿದ್ಧಾರೆ. ಅಲ್ಲದೆ ಈ ವೇಳೆ ಕುಮಾರ್ ಎಂಬಾತ ಚಾಕು ತೆಗೆದು ಇಬ್ಬರು ಯುವತಿಯರಿಗೆ ಚುಚ್ಚಿದ್ದಾನೆ. ಇದರಿಂದ ಇಬ್ಬರು ಗಾಯಗೊಂಡಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರು ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor