ಹಳೆ ಶಿವಮೊಗ್ಗದ ಏರಿಯಾಗಳಲ್ಲಿ ಬರುತ್ತಿಲ್ಲ ನೀರು! ಪ್ರತಿನಿತ್ಯ ಜೀವಜಲಕ್ಕಾಗಿ ಮಹಿಳೆಯರ ಆಕ್ರೋಶ! ಸಮಸ್ಯೆಗೆ ಶಾಸಕರೇ ಪರಿಹಾರ ಒದಗಿಸಬೇಕಿದೆ

Water is not coming in the areas of Old Shimoga! Women's anger for water every day! Legislators have to provide a solution to the problem.

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Water is not coming in the areas of Old Shimoga! Women's anger for water every day! Legislators have to provide a solution to the problem.

KARNATAKA NEWS/ ONLINE / Malenadu today/ May 26, 2023 SHIVAMOGGA NEWS

ಶಿವಮೊಗ್ಗ/ ಸಮುದ್ರದ ನೆಂಟಸ್ತನ ಉಪ್ಪಿಗೆ ಬರ ಎನ್ನುವ ಹಾಗಾಗಿದೆ ಹಳೇ ಶಿವಮೊಗ್ಗದ ಸ್ಥಿತಿ, ಪಕ್ಕದಲ್ಲಿ ತುಂಗಾನದಿಯೇ ಹರಿಯುತ್ತಿದ್ದರೂ ಕುಡಿಯುವ ನೀರಿಗೆ ಬರ ಬರುತ್ತಿದೆ. ದಿನವಿಡಿ ನೀರು ಎಂದು ಘೋಷಿಸಿದ ನಗರ ಪಾಲಿಕೆ,  ದಿನಕ್ಕೆ ಕನಿಷ್ಟ ಮುಕ್ಕಾಲು ಗಂಟೆಗಳ ಕಾಲವೂ ನೀರು ಬಿಡುತ್ತಿಲ್ಲ. ಪರಿಣಾಮ ಬೆಳಗ್ಗೆ ಬೆಳಗ್ಗೆ ಈ ಭಾಗಗಳಲ್ಲಿ ನೀರಿಗಾಗಿ ತತ್ವಾರ ಆರಂಭವಾಗಿದೆ.

ಶಿವಮೊಗ್ಗದ ಬಸ್​ ಸ್ಟ್ಯಾಂಡ್​ ಟ್ಯಾಂಕ್​ನಿಂದ ಸೀಗೆಹಟ್ಟಿಯಿಂದ ಹಿಡಿದು ಸಿದ್ದಯ್ಯರೋಡ್​ನವರೆಗೂ ನೀರು ಹರಿಸಲಾಗುತ್ತಿದೆ. ಆದರೆ ಬಸ್​ಸ್ಟ್ಯಾಂಡ್​ ಟ್ಯಾಂಕ್​ನಲ್ಲಿ ನೀರು ಸರಿಯಾಗಿ ಲೋಡ್ ಆಗುತ್ತಿಲ್ಲವಂತೆ. ಹಾಗಾಗಿ ಈ ಪ್ರದೇಶಗಳಲ್ಲಿ ನೀರಿಗೆ ಬರ ಎದುರಾಗಿದೆ. ತೊಟ್ಟಿಕ್ಕುವ ರೀತಿಯಲ್ಲಿ ಬರುತ್ತಿರುವ ನಲ್ಲಿ ನೀರು ಅರ್ಧಗಂಟೆಗಾಗಲೇ ನಿಂತು ಹೋಗುತ್ತಿದೆ.

ನೀರಿನ ಟ್ಯಾಂಕ್​ಗಳು ಭರ್ತಿಯಾಗುವ ಮಾತು ಹಾಗಿರಲಿ, ಇಲ್ಲಿನ ಓಣಿ ಮನೆಗಳ ವಠಾರದಲ್ಲಿ ಬೆಳಗ್ಗೆ ಬೆಳಗ್ಗೆ ನೀರು ತುಂಬುವುದೆ ತ್ರಾಸದಾಯಕ ಕೆಲಸವಾಗುತ್ತಿದೆ. ನೀರು ಬಾರದಿದ್ದರೇ ಸಮಸ್ಯೆ ಆದರೆ ಬಂದು ಬಾರದಂತೆ ಬರುತ್ತಿರುವ ನೀರಿನದ್ದು ಇನ್ನೂ ದೊಡ್ಡ ಸಮಸ್ಯೆಯಾಗಿದೆ. ಪ್ರತಿನಿತ್ಯ ಬೆಳಗ್ಗೆ ಸಿಕ್ಕ ಸಿಕ್ಕ ನಲ್ಲಿಗಳಲ್ಲಿ ನೀರಿಗೆ ಕೊಡ ಹಿಡಿಯುತ್ತಿರುವ ಮಹಿಳೆಯರು ನಗರ ಪಾಲಿಕೆಯ ಕಾರ್ಪೊರೇಟರ್​ಗಳಿಗೆ ಫೋನಾಯಿಸಿ  ನೀರು..ನೀರು ಎನ್ನುತ್ತಿದ್ದಾರೆ. 

ಇನ್ನೂ ನಗರಪಾಲಿಕೆ ಸದಸ್ಯರು ಫೋನ್​ಗೆ ಸಿಗುತ್ತಾರಾದರೂ ಅಸಹಾಯಕತೆಯನ್ನ ವ್ಯಕ್ತಪಡಿಸುತ್ತಿದ್ದಾರೆ. ವಾಟರ್​ ಬೋರ್ಡ್​ನವರ ಮೇಲೆ ಸಮಸ್ಯೆ ಎಳೆದುಹಾಕಿ ಆದಷ್ಟು ಬೇಗ ಸರಿಪಡಿಸುವುದಾಗಿ ಹೇಳುತ್ತಿದ್ದಾರೆ. ವಾಟರ್ ಬೋರ್ಡ್​ನವರನ್ನ ಕೇಳಿದರೇ, ಪಾಲಿಕೆ ಸದಸ್ಯರ ಮೇಲೆ ಆರೋಪಿಸುತ್ತಾರೆ. ಬಿರು ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುವುದು ಸಹಜ. ಆದರೆ ಹಳೆ ಶಿವಮೊಗ್ಗದ ಪ್ರದೇಶಗಳಲ್ಲಿ ಕೃತಕ ಅಭಾವವನ್ನ ಸೃಷ್ಟಿಸಲಾಗಿದೆ. ಮುಕ್ಕಾಲು ಗಂಟೆಯು ಸಹ ನೀರನ್ನ ಹರಿಸದೇ  ಸತಾಯಿಸಲಾಗುತ್ತಿದೆ.

ಸದ್ಯ ಶಿವಮೊಗ್ಗ ನಗರ ಹೊಸ ಶಾಸಕರನ್ನ ನೋಡುತ್ತಿದೆ. ಚೆನ್ನಬಸಪ್ಪರವರು ಈ ಮೊದಲು ಪಾಲಿಕೆ ಸದಸ್ಯರಾಗಿ ಅನುಭವ ಹೊಂದಿವರು, ಅದರಲ್ಲಿಯು ಕೆ.ಆರ್​. ಪುರಂ, ರವಿವರ್ಮ ಸರ್ಕಲ್​, ಸೀಗೇಹಟ್ಟಿ, ಕುಂಬಾರ ಗುಂಡಿ, ಸಿದ್ದಯ್ಯ ರೋಡ್, ಎಂಕೆಕೆ ರೋಡ್​ಗಳಲ್ಲಿ ಸಮಸ್ಯೆಗಳನ್ನು ತೀರಾ ಹತ್ತಿರದಿಂದ ಗಮನಿಸಿದವರು. ಇದೀಗ  ಅವರು ಶಾಸಕರಾಗಿದ್ದು, ಅವರ ರೂಲಿಂಗ್ ಮಾತುಗಳು ಅಧಿಕಾರಿಗಳಿಗೆ ನೀರಿನ ವಿಚಾರವಾಗಿ  ಸ್ಪಷ್ಟ ಸಂದೇಶವಾಗಿ ಮುಟ್ಟಬೇಕಿದೆ. ಇಲ್ಲವಾದಲ್ಲಿ, ಕಳೆದ ನಾಲ್ಕೈದು ತಿಂಗಳಿನಿಂದ ಎದುರಾಗುತ್ತಿರುವ ಸಮಸ್ಯೆಗೆ ಪರಿಹಾರ ಸಿಗುವುದು ಅನುಮಾನವಾಗಿದೆ. 

ಹೊಸನಗರದ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮೃತದೇಹ! ಏನಿದು ಘಟನೆ!

ಶಿವಮೊಗ್ಗ/ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೆದ್ಧಾರಿಪುರದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ 

ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಕಳೆದ ಏಳು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವಡಾಹೊಸಹಳ್ಳಿ ಗ್ರಾಮದ ಕೃಷಿಕ ವೀರಪ್ಪ(62) ಮೃತರು. 

ವೀರಪ್ಪ ರವರನ್ನು ಕುಟುಂಬಸ್ಥರು ಎಲಾ ಕಡೆ ಹುಡುಕಾಡಿದ್ದಾರೆ ನಂತರ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ಕೂಡಾ ದಾಖಲಿಸಿದ್ದರು.ನಿನ್ನೆ ಅವರ ಶವ ಪತ್ತೆಯಾಗಿದೆ. ಮನೆ ಹಿಂಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಕಾರಣವೇನು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.  

ಓವರ್​ ಟೇಕ್ ಮಾಡುವಾಗ ಆಕ್ಸಿಡೆಂಟ್! ಬೈಕ್​ ಸವಾರ ಸ್ಥಳದಲ್ಲಿಯೇ ಸಾವು!

 

ಶಿಕಾರಿಪುರ ತಾಲ್ಲೂಕಿನ  ಅಂಬರಗೊಪ್ಪ ಗ್ರಾಮದ ಬಳಿ ನಿನ್ನೆ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಬೈಕ್​ ಗೆ ವಾಹನವೊಂದು ಡಿಕ್ಕಿಯಾಗಿದೆ. ಪರಿಣಾಮ  ಹಾವೇರಿ ಜಿಲ್ಲೆ ಸವಣೂರು ತಾಲೂಕು ಹತ್ತಿಮತ್ತೂರು ಗ್ರಾಮದ ನಿವಾಸಿ ಸಾವನ್ನಪ್ಪಿದ್ದಾನೆ.

ಹೇಗಾಯ್ತು ಘಟನೆ?

ಶಿಕಾರಿಪುರದಿಂದ ಶಿರಾಳಕೊಪ್ಪಕ್ಕೆ ತೆರಳುತ್ತಿದ್ದ 37 ವರ್ಷದ ಹನುಮಂತಪ್ಪ ಎಂಬವರು ತೆರಳುತ್ತಿದ್ದರು. ಈ ವೇಳೆ ಅಂಬಾರಗೊಪ್ಪದ ಗ್ರಾಮ ಬಳಿ ಪ್ಯಾಸೆಂಜರ್ ವಾಹನವೊಂದು ನಿಂತಿದೆ. ಜನರನ್ನ ಇಳಿಸ್ತಿದ್ದ ವಾಹನವನ್ನು ಓವರ್ ಟೇಕ್​ ಮಾಡಿಕೊಂಡು ಹನುಮಂತಪ್ಪ ಮುಂದಕ್ಕೆ ಹೋಗಿದ್ದಾರೆ. ಇದೆ ವೇಳೆ, ಎದುರಿನಿಂದ ಬಂದ ವೆಹಿಕಲ್​ವೊಂದು ಹನುಮಂತಪ್ಪರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಹನುಮಂತಪ್ಪ ಮೃತರಾಗಿದ್ದಾರೆ. ಈ ಸಂಬಂಧ  ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಹಿಳೆಯರೇ ಹುಷಾರ್! ಅಶ್ಲೀಲ ಚಿತ್ರ ತೋರಿಸಿ ಮನಸ್ಸಿನ ನೆಮ್ಮದಿಯನ್ನೇ ಹಾಳುಮಾಡ್ತಾರೆ! ಇಲ್ಲಿದೆ ಬೆಂಗಳೂರು-ಶಿವಮೊಗ್ಗ-ಚಿಕ್ಕಮಗಳೂರು ಕೇಸ್!

ಶಿವಮೊಗ್ಗ/  ಎಷ್ಟೆ ಸಲಿಗೆಯಿದ್ದರೂ, ಮೋಬೈಲ್​ನಲ್ಲಿ ಅಶ್ಲೀಲ ಫೋಟೋ ವಿಡಿಯೋಗಳನ್ನ ಸೆಂಡ್ ಮಾಡಬೇಡಿ ಅಥವಾ ಆ ರೀತಿಯಲ್ಲಿ ಚಿತ್ರಗಳನ್ನು ತೆಗೆಯಲು ಯಾರಿಗೂ ಅವಕಾಶ ಮಾಡಿಕೊಡಬೇಡಿ. ಇದು ಮಹಿಳೆಯರಿಗೆ ಕಾನೂನು ಬದ್ದ ಸಂಸ್ಥೆಗಳು ನೀಡುತ್ತಲೇ ಬಂದಿರುವ ಸಲಹೆ. ಆದಾಗ್ಯು, ನಂಬಿಕೆಯನ್ನು ಬಳಸಿಕೊಂಡು ಮಹಿಳೆಯರನ್ನ ಯಾಮಾರಿಸುತ್ತಿರುವ ಕೃತ್ಯಗಳ ಬಗ್ಗೆ ಕೇಸ್ ದಾಖಲಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಪೊಲೀಸರಿಗೆ ಅಶ್ಲೀಲ ಚಿತ್ರಗಳನ್ನ ಬಳಸಿಕೊಂಡು ಬ್ಲ್ಯಾಕ್​ಮೇಲ್ ಮಾಡಿದ ಆರೋಪ ಕೇಳಿಬಂದಿದೆ. 

ನಡೆದಿದ್ದೇನು? 

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಶಿವಮೊಗ್ಗ ಜಿಲ್ಲೆಯ ಮಹಿಳೆಯೊಬ್ಬರಿಗೆ ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕೊಂದರ ನಿವಾಸಿ ಪರಿಚಯವಾಗಿದ್ದಾನೆ. ಆ ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಆದರೆ ಆತ, ಮಹಿಳೆಯ ಅಶ್ಲೀಲ ಚಿತ್ರಗಳನ್ನ ತೆಗೆದು, ಆಕೆಯನ್ನು ಬ್ಲ್ಯಾಕ್​ಮೇಲ್​ಮಾಡಲು ಆರಂಭಿಸಿದ್ದಾನೆ. ಇದರಿಂದ ಬೇಸತ್ತ  ಮಹಿಳೆ ಬೆಂಗಳೂರು ಬಿಟ್ಟು ಶಿವಮೊಗ್ಗ ಜಿಲ್ಲೆಗೆ ವಾಪಸ್ ಆಗಿದ್ದರು.

ಜಿಲ್ಲೆಯಲ್ಲಿಯು ಟಾರ್ಚರ್​

ಹೀಗೆ ಜಿಲ್ಲೆ ವಾಪಸ್ ಆದ ಮೇಲೆಯು ಮಹಿಳೆಯ ಬೆನ್ನಬಿಡದ ಆಸಾಮಿಯು, ಮಹಿಳೆ ಕೆಲಸ ಮಾಡುತ್ತಿದ್ದ ಜಾಗದಲ್ಲಿದ್ದವರ ನಂಬರ್ ಹಾಗೂ ಮಹಿಳೆಯ ಮಗನ ನಂಬರ್​ಗೆ ಆಕೆಯ ಚಿತ್ರಗಳನ್ನ ವಾಟ್ಸ್ಯಾಪ್ ಮಾಡಿದ್ದಾನೆ. ಅಲ್ಲದೆ ತನ್ನ ಜೊತೆ ಬರದಿದ್ದರೇ ಎಲ್ಲಿಯು ಕೆಲಸ ಮಾಡೋದಕ್ಕೆ ಬಿಡುವುದಿಲ್ಲ ಎಂದು ಹೆದರಿಸಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಶಿವಮೊಗ್ಗದ ಠಾಣೆಯೊಂದರಲ್ಲಿ ಕಂಪ್ಲೆಂಟ್ ದಾಖಲಿಸಿದ್ದಾರೆ. ಸದ್ಯ ಈ ಸಂಬಂಧ Act & Section : INFORMATION TECHNOLOGY ACT 2000 (U/s-66(E),67(A)); IPC 1860 (U/s-354(A),354(D),354C) ಅಡಿಯಲ್ಲಿ ಕೇಸ್ ದಾಖಲಾಗಿದೆ.  

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor