ಮೇಯಲು ಹೋಗಿದ್ದ ಹಸುವಿನ ಕಾಲು ಕಡಿದ ದುಷ್ಕರ್ಮಿಗಳು!

Miscreants chop off the leg of a cow that had gone to graze!

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Miscreants chop off the leg of a cow that had gone to graze!

KARNATAKA NEWS/ ONLINE / Malenadu today/ May 19, 2023 SHIVAMOGGA NEWS

ಹೊಸನಗರ/ ಇಲ್ಲಿನ ನಿಟ್ಟೂರಿನಲ್ಲಿ ಗೌರಿಕೆರೆ  ಬಳಿಯಲ್ಲಿ ಹಸುವೊಂದರ ಕಾಲನ್ನು ಕಡಿದು ಹಾಕಿರುವ ಬಗ್ಗೆ ವರದಿಯಾಗಿದೆ. ದುಷ್ಕರ್ಮಿಗಳ ಕೃತ್ಯ ಇದಾಗಿದ್ದು, ಸಿಡ್ಲಕುಣಿ ಸುಭಾಷ್ ಎಂಬವರಿಗೆ ಹಸುವು ಕಾಲಿಗೆ ಕತ್ತಿಯಿಂದ ಏಟು ತಿಂದು ನಡೆಯಲಾಗದೇ ನರಳಾಡುತ್ತಿದೆ. ಘಟನೆಯಲ್ಲಿ ಕಾಲಿನ ನರ ಕಟ್ ಆಗಿದ್ದರಿಂದ ದನ ನೆಲದಿಂದ ಏಳುತ್ತಿಲ್ಲ. 

ಮಲೆನಾಡಲ್ಲಿ ರಾಸುಗಳನ್ನ ಬೆಳಗ್ಗೆ ಹೊರಗೆ ಅಟ್ಟಲಾಗುತ್ತದೆ. ಅವುಗಳು ಮೇವು ಮುಗಿಸಿ ಸಂಜೆ ಮನೆಗಳಿಗೆ ವಾಪಸ್ ಆಗುತ್ತವೆ. ಆದರೆ ಹಟ್ಟಿ ಹಸು ಬರದ ಹಿನ್ನೆಲೆಯಲ್ಲಿ ಸುಭಾಷ್​ರವರು ಅದನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಹಸು ನಡೆಯಲಾಗದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ನಗರ ಪೊಲೀಸ್ ಸ್ಟೇಷನ್​ ನಲ್ಲಿ ದೂರು ನೀಡಿದ್ದು ಕೇಸ್ ದಾಖಲಾಗಿದೆ ಎನ್ನಲಾಗಿದೆ. 

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟ್ರೋಲ್​ ತಪ್ಪಿದ ಒಮಿನಿ! ಚರಂಡಿಗೆ ಉರುಳಿ ಅಪಘಾತ!

ಸಾಗರ/ ತಾಲ್ಲೂಕಿನ ಐಗಿನ್ ಬೈಲ್ ಸಮೀಪ ಹಾದು ಹೋಗುವ ರಾಷ್ಟ್ರೀ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರೊಂದು ರಸ್ತೆ ಪಕ್ಕದ ಚರಂಡಿಗೆ ಉರುಳಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ .ಗಾಯಾಳುಗಳನ್ನು ಸಾರಿಗೆ ಇಲಾಖೆಯ ನಿವೃತ್ತ ನೌಕರ ನಿಂಗಪ್ಪ ಹಾಗೂ ಅವರ ಪತ್ನಿ ಗೌರಮ್ಮ ಎಂದು ಗುರುತಿಸಲಾಗಿದೆ. ಸಾಗರದಲ್ಲಿ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶಿವಮೊಗ್ಗಕ್ಕೆ ವಾಪಸ್ ಹೋಗುತ್ತಿದ್ದರು. ಈ ವೇಳೆ  ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor