SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 28, 2024 | NADAHABBA DASARA | ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಸ್ಥಾನವು ಪುರಾತನ ಕಾಲದಿಂದಲೂ ಬಹಳ ಹೆಸರುವಾಸಿಯಾದ ಪರಮ ಪವಿತ್ರ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಕರ್ನಾಟಕ, ತಮಿಳುನಾಡು ಹಾಗೂ ಇತರೆ ರಾಜ್ಯಗಳ ನಾನಾ ಕಡೆಗಳಿಂದ ಭಕ್ತರು ಬರುತ್ತಾರೆ. ಈ ಪುಣ್ಯ ಕ್ಷೇತ್ರದಲ್ಲಿ 2024 ನೇ ಸಾಲಿನಲ್ಲಿ ವಾರ್ಷಿಕ ಜಾತ್ರಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ.ಅದರ ವಿವರ ಹೀಗಿದೆ
ಮಹಾಲಯ ಜಾತ್ರೆ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 3 ರವರೆಗೆ, ದಸರಾ ಜಾತ್ರೆ ಅಕ್ಟೋಬರ್ 10 ರಿಂದ 13 ರವರೆಗೆ ಹಾಗೂ ದೀಪಾವಳಿ ಜಾತ್ರೆ ಅಕ್ಟೋಬರ್ 29 ರಿಂದ ನವೆಂಬರ್ 2 ರವರೆಗೆ ನಡೆಯಲಿದೆ.
ಒಂದನೇ ಕಾರ್ತೀಕ ಸೋಮವಾರ ನವೆಂಬರ್ 3 ರಿಂದ 4ರವರೆಗೆ, ಎರಡನೇ ಕಾರ್ತೀಕ ಸೋಮವಾರ ನವೆಂಬರ್ 10 ರಿಂದ 11ರವರೆಗೆ, ಮೂರನೇ ಕಾರ್ತೀಕ ಸೋಮವಾರ ನವೆಂಬರ್ 17 ರಿಂದ 18 ರವರೆಗೆ, ನಾಲ್ಕನೇ ಕಾರ್ತೀಕ ಸೋಮವಾರ ನವೆಂಬರ್ 24 ರಿಂದ 25 ರವರೆಗೆ ನಡೆಯಲಿದೆ
ನವೆಂಬರ್ 29 ರಿಂದ ಡಿಸೆಂಬರ್ 2 ರವರೆಗೆ ಎಣ್ಣೆ ಮಜ್ಜನ ಮತ್ತು ಅಮಾವಾಸ್ಯೆ ಆಚರಿಸಲಾಗುತ್ತದೆ ಎಂದು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
