BREAKING NEWS/ ಸಾಗರ ಹೆದ್ಧಾರಿಯಲ್ಲಿ ಮಂಗಳೂರು-ರಾಣೆಬೆನ್ನೂರಿಗೆ ಹೋಗುತ್ತಿದ್ದ ಗ್ಯಾಸ್ ಲಾರಿ ಪಲ್ಟಿ!

This Article Written by / Malenadu Today / ಏಪ್ರಿಲ್ 23, 2023

KARNATAKA NEWS/ ONLINE / Malenadu today/ SHIVAMOGGA / Apr 23, 2023 GOOGLE


ಆನಂದಪುರ/ ಸಾಗರ  / ಶಿವಮೊಗ್ಗ/  : ಇಲ್ಲಿನ ಬೀರನ ಕಣವಿಯ ಬಳಿಯಲ್ಲಿ ಗ್ಯಾಸ್ ಲಾರಿಯೊಂದು ಪಲ್ಟಿಯಾಗಿದೆ. 

ನಡೆದ ಘಟನೆ!

ಆನಂದಪುರದ ಬಳಿ ಬರುವ  ಗೌತಮಪುರ ಹತ್ರ ಬೀರನ ಕಣವಿಯ ಕ್ರಾಸ್​ನಲ್ಲಿ ಇವತ್ತು ಗ್ಯಾಸ್ ಲಾರಿಯೊಂದು ಅಪ್​ಸೆಟ್ ಆಗಿತ್ತು. 

ಘಟನೆಯಲ್ಲಿ ಲಾರಿಯಲ್ಲಿದ್ದ 350 ಕ್ಕೂ ಹೆಚ್ಚು ಸಿಲಿಂಡರ್​ಗಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. 

ಗ್ಯಾಸ್​ ಲಾರಿ ಮಂಗಳೂರು ನಿಂದ  ರಾಣೆಬೆನ್ನೂರು ಗೆ ಹೋಗುತ್ತಿತ್ತು. ತಿರುವಿನಲ್ಲಿ ಚಾಲಕನ ನಿಯತ್ರಂಣಕ್ಕೆ ಸಿಗದೆ ಲಾರಿ ಪಲ್ಟಿಯಾಗಿದೆ. 

ಘಟನೆಯಲ್ಲಿ ಶಿಗ್ಗಾವಿ ಮೂಲದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

Malenadutoday.com Social media

 

accident

ಮುಂದಿನ ಸುದ್ದಿ ಒದಿ

Leave a Comment