ತಾರಾತಿಗಡಿ ವಹಿವಾಟು ನಡೆಯುತ್ತಿದ್ಯಾ? ಆ್ಯಪ್​ನಲ್ಲಿ ಕಂಪ್ಲೆಂಟ್ ಮಾಡಿ ಸೈಲೆಂಟ್ ಆಗ್ಬಿಡಿ! ಚುನಾವಣಾ ಅಕ್ರಮ ತಡೆಯುವ ಸಿವಿಜಿಲ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ಚುನಾವಣಾ ಅಕ್ರಮಗಳನ್ನು ತಡೆದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗವು ಸಿ-ವಿಜಿಲ್(cVIGIL) ಆ್ಯಪ್ ಬಿಡುಗಡೆ ಮಾಡಿದ್ದು ಸಾರ್ವಜನಿಕರು ಇದನ್ನು ಬಳಕೆ ಮಾಡಿಕೊಂಡು ಪಾರದರ್ಶಕ ಚುನಾವಣೆ ನಡೆಸುವಲ್ಲಿ ಕೈಜೋಡಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ.

ಉಪಯೋಗವೇನು? 

ಚುನಾವಣಾ ಸಂದರ್ಭದಲ್ಲಿ ವಿವಿಧ ಪಕ್ಷಗಳು ಮತಗಳನ್ನು ಸೆಳೆಯಲು ಮತದಾರರಿಗೆ ಹಣ, ಹೆಂಡ ಹಾಗೂ ಇತರೆ ಆಸೆ, ಆಮಿಷ ತೋರಿಸುವುದು ಸಹಜ. ಇಂತಹ ಚುನಾವಣಾ ಅಕ್ರಮಗಳ ತಡೆಗೆ ಸಿವಿಜಿಲ್ ಆ್ಯಪ್ ಬಿಡುಗಡೆಗೊಳಿಸಲಾಗಿದ್ದು, ಸಿವಿಜಿಲ್ ಮೊಬೈಲ್ ಅಪ್ಲಿಕೇಷನ್ ಮೂಲಕ ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಅಕ್ರಮವನ್ನು ತಮ್ಮ ಮೊಬೈಲ್‍ಗಳ ಮೂಲಕ ನೇರವಾಗಿ ಆಯೋಗಕ್ಕೆ ಮಾಹಿತಿ ನೀಡಬಹುದು. ದೂರುದಾರರ ಹೆಸರು, ವಿಳಾಸವನ್ನು ಆಯೋಗ ಗೌಪ್ಯವಾಗಿ ಇಡುವ ಭರವಸೆಯನ್ನು ಕೂಡ ಆಯೋಗ ನೀಡಿದೆ.

Malenadu Today Shivamogga

ಯಾವುದಕ್ಕೆಲ್ಲಾ ದೂರು ನೀಡಬಹುದು?

ಚುನಾವಣಾ ಸಮಯದಲ್ಲಿ ಮತದಾರರು ನಿರ್ಧಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಮತ ಹಾಕುವಂತೆ ವಿವಿಧ ರೀತಿಯಲ್ಲಿ ಆಮಿಷ ನೀಡಬಹುದಾದ ಹಣ ವಿತರಣೆ, ಉಡುಗೊರೆಗಳು, ಕೂಪನ್ ವಿತರಣೆ, ಮದ್ಯ ವಿತರಣೆ, ಅನುಮತಿ ಇಲ್ಲದ ಪೋಸ್ಟರ್ ಮತ್ತು ಬ್ಯಾನರ್‍ಗಳು, ಬಂದೂಕುಗಳ ಪ್ರದರ್ಶನ ಹಾಗೂ ಬೆದರಿಕೆ, ಆಸ್ತಿ ವಿರೂಪ, ಧಾರ್ಮಿಕ ಅಥವಾ ಕೋಮು ಭಾಷಣಗಳು/ಸಂದೇಶಗಳು, ಮತಗಟ್ಟೆಯ 200 ಮೀ.ಪ್ರದೇಶದಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ, ಮತದಾನದ ದಿನದಂದು ವಾಹನಗಳಲ್ಲಿ ಮತದಾರರ ಸಾಗಣೆ ಮುಂತಾದ ಯಾವುದೇ ರೀತಿಯ ಪ್ರಲೋಭನೆ, ಬೆದರಿಕೆ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರೇ ನೇರವಾಗಿ ಸಿವಿಜಿಲ್ ಆ್ಯಪ್‍ನಲ್ಲಿ ದೂರು ದಾಖಲಿಸಬಹುದು.

Malenadu Today Shivamogga

ಹೇಗೆ ದೂರು ಕೊಡೋದು, ಹೆಸರು ಡಿಟೇಲ್ಸ್ ಎಲ್ಲಾ ಕೊಡಬೇಕಾ? 

ಸ್ಮಾರ್ಟ್  ಫೋನ್​ ಗೂಗಲ್ ಪ್ಲೇ ನಲ್ಲಿ ಸಿ- ವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡ್ಕೊಂಡು  ಅತ್ಯಂತ ಸುಲಭವಾಗಿ ಇದನ್ನು ಬಳಸಬಹುದಾಗಿದೆ.  ಅಕ್ರಮದ ಕುರಿತಾದ  ಫೋಟೋ ಅಥವಾ ವಿಡಿಯೋ ಗಳನ್ನು ಅಪ್‍ಲೋಡ್ ಮಾಡಿ ದೂರು ನೀಡಬಹುದು. ಆ್ಯಪ್ ತಮ್ಮ ಸ್ವವಿವರ ನೀಡಿಯಾದರೂ, ಅಥವಾ ನೀಡದೆಯೂ ದೂರು ನೀಡಬಹುದು. ಆ್ಯಪ್ ನಲ್ಲಿ ತಿಳಿಸಿದ 16 ರೀತಿಯ ದೂರುಗಳ ಪೈಕಿ ಒಂದನ್ನು ಸೆಲೆಕ್ಟ್ ಮಾಡಿ ಸೆಂಡ್ ಮಾಡಬಹುದು. ದೂರು ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು.

Malenadu Today Shivamogga

ಕಂಪ್ಲೆಂಟ್ ಮಾಡಿದ್ಮೇಲೆ ಸೀರಿಯಸ್ ಆಗಿ ತಗೊತ್ತಾರಾ? 

ಸಿವಿಜಿಲ್‍ನಲ್ಲಿ ದಾಖಲಾಗುವ ದೂರುಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರು ಮತದಾನ ಮುಕ್ತಾಯವಾಗುವವರೆಗೂ 3 ಪಾಳಿಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವರು. ದೂರು ಬಂದ ಕೂಡಲೇ ಅವುಗಳನ್ನು ಪರಿಶೀಲಿಸಿ, ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಾಪ್ತಿಯ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಪ್ರಕರಣದ ಸಂಪೂರ್ಣ ವಿವರ ಹಾಗೂ ಮಾಹಿತಿಯನ್ನು ರವಾನಿಸಲಾಗುತ್ತದೆ. ಈ ಮಾಹಿತಿ ಆಧಾರದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡುವ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ದೂರು ಕುರಿತಂತೆ ಅಗತ್ಯ ಕ್ರಮ ಕೈಗೊಂಡು ಗರಿಷ್ಟ 100 ನಿಮಿಷದ ಒಳಗೆ ದೂರನ್ನು ಇತ್ಯರ್ಥಪಡಿಸುವರು.  

Malenadu Today Shivamogga

ಇದನ್ನು ಸಹ ಓದಿ

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

 

MALENADUTODAY.COM/ SHIVAMOGGA / KARNATAKA WEB NEWS

 

HASHTAGS

 

Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite MalenaduToday.com Malenadu today Malenadu Postbox kannnada, Violation of model code of conduct, Election Karnataka, Karnataka Assembly Elections, Karnataka Election Report, Shimoga Election, Shimoga Report, Shivamogga Report, CVIGIL App, CVIGIL App What is? How does the CVIGIL app work? CVIGIL App Control Room, CVIGIL App,   How to download?, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಎಲೆಕ್ಷನ್​ ಕರ್ನಾಟಕ, ಕರ್ನಾಟಕ ವಿಧಾನಸಭಾ ಚುನಾವಣೆ, ಕರ್ನಾಟಕ ಚುನಾವಣೆ ವರದಿ, ಶಿವಮೊಗ್ಗ ಚುನಾವಣೆ, ಶಿವಮೊಗ್ಗ ರಿಪೋರ್ಟ್​, ಸಿವಿಜಿಲ್ ಆ್ಯಪ್​, ಸಿವಿಜಿಲ್​ ಆ್ಯಪ್​ ಎಂದರೇನು? ಸಿವಿಜಿಲ್​ ಆ್ಯಪ್ ಹೇಗೆ ಕೆಲಸ ಮಾಡುತ್ತೆ. ಸಿವಿಜಿಲ್​ ಆ್ಯಪ್ ಕಂಟ್ರೋಲ್ ರೂಂ , ಸಿವಿಜಿಲ್​ ಆ್ಯಪ್,   ಡೌನ್​ಲೋಡ್​ ಮಾಡುವುದು ಹೇಗೆ? ,  India being the largest democracy requires strict enforcement of Model Code Conduct (MCC) to ensure free and fair elections.

Leave a Comment