BREAKING NEWS / ಇನ್ನೂ 15-20 ದಿನಗಳಲ್ಲಿ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ವಿಮಾನ ಸಂಚಾರ ಆರಂಭ

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿ 20 ದಿನಗಳು ಕಳೆದಿದೆ, ಇನ್ನೂ ಕೂಡ ವಿಮಾನ ಸಂಚಾರ ಆರಂಭವಾಗಿಲ್ಲ ಎಂಬ ಮಾತು ಆರೋಪದ ರೂಪದಲ್ಲಿಯೇ ಕೇಳಿಬರುತ್ತಿತ್ತು. ಅಲ್ಲದೆ, ಪ್ರತಿಪಕ್ಷಗಳು ಟೀಕೆ ಮಾಡಲು ಸಹ ಆರಂಭಿಸಿದ್ದರು. 

READ / Agumbe Tiger/ಇದು ಶಿವಮೊಗ್ಗದ ರಾಜಾಹುಲಿಯಲ್ಲವೇ? ಆಗುಂಬೆಯಲ್ಲಿ ವ್ಯಾಘ್ರ ಸಂಚಾರ ನಿಜವೆ? ವೈರಲ್​ ಸತ್ಯ ಇಲ್ಲಿದೆ

ಇದರ ನಡುವೆ, ಸಂಸದರ ರಾಘವೇಂದ್ರ ಮತ್ತೊಮ್ಮೆ ಶಿವಮೊಗ್ಗ ಏರ್​ಪೋರ್ಟ್​ ವಿಚಾರವಾಗಿ ಮಾತನಾಡಿದ್ದಾರೆ. ಅಲ್ಲದೆ ಅನುಮಾನಗಳಿಗೆ ಉತ್ತರ ಕೊಟ್ಟಿದ್ದಾರೆ. ನಿನ್ನೆ ಸಮಾರಂಭವೊಂದರಲ್ಲಿ ಮಾತನಾಡಿದ ಸಂಸದ ಬಿವೈ ರಾಘವೇಂದ್ರರವರು, ಉಡಾನ್​ ಯೋಜನೆ ಮೂಲಕ ಬಡವರು ವಿಮಾನದಲ್ಲಿ ಓಡಾಡಬೇಕು ಎಂಬ ಉದ್ದೇಶವನ್ನ ಕೇಂದ್ರ ಸರ್ಕಾರ ಹೊಂದಿದೆ. ಅದಕ್ಕಾಗಿ ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಸಬ್ಸಿಡಿ ವಿತರಣೆಯ ವಿಚಾರ, ಕೇಂದ್ರ ಆರ್ಥಿಕ ಇಲಾಖೆಯಲ್ಲಿ ಕ್ಲೀಯರ್ ಆಗಿದೆ. ಚುನಾವಣೆ ಕೋಡ್ ಆಫ್ ಕಂಡಕ್ಟ್​ ಬರುವುದಕ್ಕೂ ಮೊದಲೇ ಅದಕ್ಕೆ ಕೇಂದ್ರ ಸಂಪುಟದ ಒಪ್ಪಿಗೆ ಸಿಗಬೇಕಿತ್ತು ಹಾಗೂ ಶಿವಮೊಗ್ಗದಲ್ಲಿ ವಿಮಾನ ಹಾರಾಟ ಆರಂಭವಾಗಬೇಕಿತ್ತು. ಆದರೆ ಕೆಲವೊಂದು ಟೆಕ್ನಿಕಲ್ ಪ್ರಾಬ್ಲಮ್​ನಿಂದಾಗಿ  ವಿಮಾನ ಸಂಚಾರ ತಡವಾಗಿದೆ. ಹಾಗಂತ ಆಂತಕ ಪಡಬೇಕಿಲ್ಲ, ಇನ್ನೂ 15-20 ದಿನಗಳಲ್ಲಿ ವಿಮಾನ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು. 

ಸ್ವಾತಂತ್ರ್ಯ ಬಂದ ಮೇಲೆ ಶಿವಮೊಗ್ಗದಲ್ಲಿ ನೂತನ ರೈಲ್ವೆ ಹಳಿ ನಿರ್ಮಾಣ ಕಾರ್ಯ ಆಗಿರಲಿಲ್ಲ. ಆದರೆ ನಿಮ್ಮ ಸಂಸದನಾಗಿ ರಾಘವೇಂದ್ರ ಆಯ್ಕೆಯಾದ ಮೇಲೆ ಕೇಂದ್ರ ಸರ್ಕಾರದಿಂದ 250 ಕೋಟಿ ವೆಚ್ಚಮಾಡಿ, ಸಾಗರದವರೆಗೂ ಮೀಟರ್​ ಗೇಜ್​ ಹಳಿಯನ್ನ ಬ್ರಾಡ್​ಗೇಜ್​ ಮಾಡಲಾಗಿದೆ ಹಾಗಾಗಿ ಎಲ್ಲಾ ಟ್ರೈನ್​ಗಳು ತಾಳಗುಪ್ಪದವರೆಗೂ ಹೋಗುತ್ತಿದೆ ಎಂದು ತಮ್ಮ ಕೆಲಸದ ಬಗ್ಗೆ ವಿವರಿಸಿದರು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga Agumbe Tiger, ಶಿವಮೊಗ್ಗ ವಿಮಾನ ನಿಲ್ದಾಣ,ಶಿವಮೊಗ್ಗ,ಶಿವಮೊಗ್ಗ ಏರ್ಪೋರ್ಟ್,ರಾಷ್ಟ್ರಕವಿ ಕುವೆಂಪು,tv9 kannada,shivamoggaairport,airport,bjp,karnatakagovernment,shivamogga,shivamogga airport,shivamogga airport inauguration,shivamogga new airport,pm modi inaugurate shivamogga airport,shivamogga mp,shivamogga airport​,reacts on shivamogga airport,shivamogga airport live,new airport,shivamogga airport project,shivamogga airport latest updates

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು