ಸೋಶಿಯಲ್ ಮೀಡಿಯಾದಲ್ಲಿ ರಿಕ್ವೆಸ್ಟ್ ಕಳಿಸವವರೆಲ್ಲಾ ಫ್ರೆಂಡ್ ಅಲ್ಲ, ಒಳ್ಳೆಯವರಾಗಿರಲಿಲ್ಲ! ಹುಷಾರ್! ಹೀಗೂ ಹೆದರಿಸ್ತಾರೆ!

 MALENADUTODAY.COM | SHIVAMOGGA  | #KANNADANEWSWEB

ಸೋಶಿಯಲ್ ಮೀಡಿಯಾಗಳು ಹೇಗೆ ಜೀವ ಹಿಂಡುತ್ತವೆ ಎನ್ನುವುದಕ್ಕ ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ದಾಖಲಾಗಿರುವ ಕೇಸ್​ವೊಂದು ಸಾಕ್ಷಿಯಾಗಿದೆ. ಸ್ಥಳೀಯ ನಿವಾಸಿಯೊಬ್ಬರು(ಹೆಸರು ಗೌಪ್ಯ) ಇನ್​ಸ್ಟಾಗ್ರಾಮ್​ನಲ್ಲಿ ಅಕೌಂಟ್ ಹೊಂದಿದ್ದರು, ಅವರಿಗೆ ಒಂದು ಫ್ರೆಂಡ್​ ರಿಕ್ವೆಸ್ಟ್ ಬಂದಿತ್ತು. ಗೊತ್ತಿರೋರು ಇರಬೇಕು ಎಂದು ರಿಕ್ವೆಸ್ಟ್​ನ್ನು ಅಕ್ಸೆಪ್ಟ್ ಮಾಡಿದ್ದಾರೆ. 

ಆದರೆ, ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದ ವ್ಯಕ್ತಿ, ಇವರ ಅಕೌಂಟ್​ನಲ್ಲಿದ್ದ ಫೋಟೋಗಳ್ನ ಎಡಿಟ್ ಮಾಡಿ ಅಶ್ಲೀಲವಾಗಿ ಚಿತ್ರಿಸಿ ಬೆದರಿಕೆ ಹಾಕಲು ಆರಂಭಿಸಿದ್ದಾನೆ.  ಅಲ್ಲದೆ ಅದನ್ನು ಆ ನಿವಾಸಿ ಹಾಗೂ ಅವರ ಸಂಬಂಧಿಕರಿಗೆ ಕಳಿಸಿದ್ದಾನೆ. ಜೊತೆಯಲ್ಲಿ  ನಿನ್ನ ಕುಟುಂಬದವರು ಸಾಯುವರೆಗೂ ಬಿಡುವುದಿಲ್ಲ. ಈ ರೀತಿ ಮಾಡುತ್ತಲೇ ಇರುತ್ತೇನೆ ಬೆದರಿಕೆ ಹಾಕಿದ್ಧಾನೆ. 

ಸದ್ಯ ಈ ಸಂಬಂಧ ಧೈರ್ಯ ಮಾಡಿದ ಸಂತ್ರಸ್ತೆ, ಪೊಲೀಸರಿಗೆ ಮಾಹಿತಿ ನೀಡಿ, ಕಂಪ್ಲೇಂಟ್ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರುಗಳು ಸೋಶಿಯಲ್ ಮೀಡಿಯಾ ಆರೋಪಿಯನ್ನು ಹುಡುಕಾಡುತ್ತಿದ್ದಾರೆ. 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga

Leave a Comment