BREAKING NEWS / ಹೊಸ ವರ್ಷದ ಪಾರ್ಟಿ ಸಂದರ್ಭದಲ್ಲಿ ಗನ್​ಫೈರ್​/ ಓರ್ವ ಗಂಭೀರ/ ಗುಂಡು ಹಾರಿಸಿವನು ಸಹ ಸಾವು/ NEW YEAR ನ ಮೊದಲ ಕ್ರೈಂ

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ ನಗರದಲ್ಲಿ ನಿನ್ನೆ ಹೊಸವರ್ಷ ಆಚರಣೆಯ ವೇಳೆಯಲ್ಲಿ ಅತಾಚುರ್ಯವೊಂದು ಸಂಭವಿಸಿದೆ. ಹೊಸವರ್ಷದ ಪಾರ್ಟಿ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿಲು ಮುಂದಾದಾಗ, ಆ ಗುಂಡು ವ್ಯಕ್ತಿಯೊಬ್ಬನಿಗೆ ತಗುಲಿದೆ. ಬಳಿಕ ಗುಂಡು ಹಾರಿಸಿದ ವ್ಯಕ್ತಿಯು ಸಹ ಸಾವನ್ನಪ್ಪಿದ್ದಾನೆ. ಶಿವಮೊಗ್ಗದ ವಿದ್ಯಾನಗರದಲ್ಲಿ ಈ ಘಟನೆಯು ಸಂಭವಿಸಿದೆ. 

ಆಶಾಭಟ್ ಮಾತು ಪ್ರಪಂಚದಲ್ಲಿಎಲ್ಲಿಗೆ ಹೋದರೂ ಸಹ ಹೆಮ್ಮೆಯಿಂದ ಹೇಳೋದು ಶಿವಮೊಗ್ಗ-ಭದ್ರಾವತಿ : ಆಶಾಭಟ್​

ಶಿವಮೊಗ್ಗ ನಗರದಲ್ಲಿ ಎಲ್ಲರು 2023 ರನ್ನು ವೆಲ್ ಕಮ್ ಮಾಡಲು ವಿವಿಧ ರೀತಿಯಲ್ಲಿ ಪಾರ್ಟಿಗೆ ಸಿದ್ದತೆ ಮಾಡಿಕೊಂಡಿದ್ರು.ಕೆಲವರು ಪಾರ್ಟಿ ಕ್ಲಬ್ ಗಳಿಗೆ ಹೋಗಿದ್ರೆ, ಮತ್ತೆ ಕೆಲವರು ತೋಟ ಫಾರಂ ಹೌಸ್ ಹೋಮ್ ಸ್ಟೇ ಗಳಲ್ಲಿ ಹಬ್ಬಕ್ಕೆ ಸಿದ್ದತೆ ಮಾಡಿಕೊಂಡಿದ್ರು, ಇನ್ನು ಕೆಲವರು ತಮ್ಮ ಮನೆ ಸುತ್ತಮುತ್ತದ ಕುಟುಂಬಗಳನ್ನೇ ಒಗ್ಗೂಡಿಸಿಕೊಂಡು ಹೊಸವರ್ಷಕ್ಕೆ ಸ್ವಾಗತ ಕೋರಲು ಅಣಿಯಾಗಿದ್ರು. ಎಲ್ಲರೂ ಸಂತೋಷವಾಗಿರುವಾಗಲೇ ಶಿವಮೊಗ್ಗದ ವಿದ್ಯಾನಗರದಲ್ಲಿ ಘಟನೆಯೊಂದು ನಡೆದು ಹೋಯ್ತು.

Malenadu Today Shivamogga

ಪಾರ್ಟಿ ನಡುವೆ ನಡೆಯಿತು ದುರಂತ

ಇದನ್ನು ಸಹ ನೋಡಿ  : ನಮ್ಮೂರ ಹುಡುಗಿಯ ಯಶಸ್ಸಿನ ಕಥೆ ಗೊತ್ತಾ/ ಆಶಾಭಟ್​ ಹೇಳಿದ ಸಕ್ಸಸ್​ ಸೀಕ್ರೆಟ್​

ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಬಳಿ ಇರುವ ಗೋಪಾಲ್ ಗ್ಲಾಸ್ ಹೌಸ್ ಮನೆ ಮಾಲೀಕ ಮಂಜುನಾಥ್ ಓಲೇಕರ್ ಎಂಬುವರ ಮನೆಯಲ್ಲಿ ಹೊಸವರ್ಷದ ಪಾರ್ಟಿಯಲ್ಲಿ ಎಡವಟ್ಟೊಂದು ನಡೆದು, ದುರಂತ ಸಂಭವಿಸಿದೆ. ಮನೆ ಸುತ್ತಮುತ್ತಲ ಕುಟುಂಬದವರೊಡನೆ ಹೊಸವರ್ಷದ ಸಂಭ್ರಮಚಾರಣೆಯಲ್ಲಿದ್ದ ಮಂಜುನಾಥ್ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಹನ್ನೆರಡು ಗಂಟೆ ರಾತ್ರಿಯಲ್ಲಿ ಏರ್ ಫೈರ್ ಮಾಡಿದ್ದಾರೆ. ಈ ಮೂಲಕ 2023 ಕ್ಕೆ ಶುಭಕೋರಲು ಮುಂದಾಗಿದ್ದಾರೆ.

ಏರ್​ಫೈರ್ ಮಿಸ್​ ಫೈರ್​ 

ಆದ್ರೆ, ಏರ್​ ಫೈರ್​ ಮಿಸ್ ಪೈರ್ ಆಗಿದೆ. ಅಲ್ಲದೆ ಪಾರ್ಟಿ ಮಾಡುತ್ತಿದ್ದ ಎದುರಿದ್ದ ಹುಡುಗನಿಗೆ ತಗುಲಿದೆ.ಗಂಭೀರ ಗಾಯಗೊಂಡ ಯುವಕನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಸಹ ನೋಡಿ: ಅಮ್ಮ ಓದಿದ್ದ ಸ್ಕೂಲ್​ಗೆ ಸೆಲೆಬ್ರಿಟಿಯಾಗಿ ಬಂದ ಮಗಳು ಆಶಾಭಟ್ ಹೇಳಿದ್ದೇನು/ ವಿಡಿಯೋ ನೋಡಿ

ಇನ್ನೂ ಈ ಘಟನೆಯಿಂದ ಶಾಕ್ ಗೆ ಒಳಗಾದ ಮಂಜುನಾಥ್ ಗೆ ಹೃದಯಾಘಾತವಾಗಿ. ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಕೋಟೆ ಪೊಲೀಸರು (kote police station) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಜುನಾಥ್ ಒಲೇಕರ್ ರವರು ಪ್ರತಿವರ್ಷ ಹೊಸವರ್ಷದ ಸಂಭ್ರಮವನ್ನು ಆಚರಿಸುತ್ತಾರೆ. ಈ ವರ್ಷವೂ ಅದೇ ರೀತಿಯಲ್ಲಿ ಪಾರ್ಟಿ ಅರೆಂಜ್ ಆಗಿತ್ತು. ಒಲೇಕರ್  ರವರ ಪುತ್ರ ಈ ಪಾರ್ಟಿಗೆ ವಿನಯ್ ಎಂಬವರನ್ನು ಕರೆದಿದ್ದರು..ಪಾರ್ಟಿ ನಡೆಯುತ್ತಿದ್ದಾಗಾ ಒಲೇಕರ್ ರವರು ಬಂದೂಕಿಗೆ ಬುಲೆಟ್ ಲೊಡ್ ಮಾಡಿ ಫೈರ್ ಮಾಡಲು ಅಣಿಯಾಗಿದ್ದಾರೆ..ಈ ವೇಳೆ ಮಿಸ್ ಫೈರ್ ಆಗಿದ್ದು, ವಿನಯ್ ರ ಹೊಟ್ಟೆಗೆ ತಾಗಿದೆ..ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor