ಹಿಂದೂ ಹರ್ಷನ ಮನೆಗೆ ತೆರಳಿ ಸಾಂತ್ವನ ಹೇಳಿದ ಸಾದ್ವಿ ಪ್ರಗ್ಯಾ ಸಿಂಗ್​/ ದತ್ತ ಪೀಠಕ್ಕೂ ಭೇಟಿ!?

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗದಲ್ಲಿ ಇವತ್ತು ಹಿಂದು ಜಾಗರಣ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ಸಮ್ಮೇಳನದಲ್ಲಿ ಪಾಲ್ಗೊಂಡ ಸಾದ್ವಿ ಪಗ್ರ್ಯಾ ಸಿಂಗ್ ಠಾಕೂರ್ ಕಾರ್ಯಕ್ರಮ ಮುಗಿಸಿ ನೇರವಾಗಿ ಸೀಗೇಹಟ್ಟಿಯಲ್ಲಿರುವ ಹಿಂದೂ ಹರ್ಷನ ಮನೆಗೆ ತೆರಳಿದರು. ಅಲ್ಲಿಗೆ ತೆರಳಿ ಸುಮಾರು ಒಂದು ಗಂಟೆಯ ಕಾಲ, ಹರ್ಷನ ಕುಟುಂಬಸ್ಥರ ಜೊತೆ ಮಾತನಾಡಿದ್ರು. ಈ ವೇಳೇ ಹರ್ಷ ಹಾಗು ಹಿಂದೂ ಕಾರ್ಯಕರ್ತರ ಸಾವಿನ ಬಗ್ಗೆ ಧ್ವನಿ ಎತ್ತಬೇಕು ಎಂದು ಹರ್ಷನ ಕುಟುಂಬಸ್ಥರು ಮನವಿ ಮಾಡಿದರು, ಇದಕ್ಕೆ ಪ್ರತಿಯಾಗಿ ಹರ್ಷನ ಬಲಿದಾನ ವ್ಯರ್ಥವಾಗಲು ಬಿಡೋದಿಲ್ಲ ಎಂದು ಆಶ್ವಾಸನೆ ನೀಡಿದರು. 

ಇದನ್ನು ಸಹ ಓದಿ : 24 ಗಂಟೆಯಲ್ಲಿ ಕಿಡ್ನ್ಯಾಪ್​ ಕೇಸ್​ ಕ್ಲೋಸ್​/ ಭದ್ರಾವತಿಯಲ್ಲಿ ಅಪಹರಣ/ ಸಾಗರದಲ್ಲಿ ಆರೋಪಿಗಳು/ ಇಂಟರ್​ಸ್ಟಿಂಗ್ ಸ್ಟೋರಿ

ಬಳಿಕ ಮಾತನಾಡಿದ ಅವರು, ಹಿಂದೂ ಹರ್ಷ ಧರ್ಮದ ಕೆಲಸ ಮಾಡುತ್ತಿದ್ದ, ಸನಾತನ ಧರ್ಮದ ಕೆಲಸ ಮಾಡುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಅದರ್ಮಿಯರು ಹತ್ಯೆ ಮಾಡಿದ್ದಾರೆ. ಆತನ ಬಲಿದಾನ ಶ್ರೇಷ್ಟವಾದುದು, ಅದು ವ್ಯರ್ಥವಾಗುವುದಿಲ್ಲ, ಆತನ ಕುಟುಂಬಸ್ಥರು ಒಂಟಿಯಲ್ಲ ಅವರ ಜೊತೆಗೆ ನಾವೆಲ್ಲರು ಇದ್ದೇವೆ. ಈ ಸಂದೇಶವನ್ನು ಅವರಿಗೆ ತಿಳಿಸಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು. 

ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್​ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ

ದತ್ತಪೀಠದ ದರ್ಶನ

ಇನ್ನೂ ಇದೇ ವೇಳೇ ಬಾಬಾಬುಡನ್​ ಗಿರಿಯಲ್ಲಿನ ದತ್ತಪೀಠದ ದರ್ಶನ ಮಾಡುವುದಾಗಿ ತಿಳಿಸಿದ ಅವರು, ಹಿಂದೂಗಳ ಪವಿತ್ರ ಸ್ಥಳಗಳು ಮತ್ತೆ ಹಿಂದೂಗಳ ಪಾಲಿಗೆ ಲಭಿಸುತ್ತಿದೆ. ಅದರಂತೆ ದತ್ತಪೀಠವೂ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor