ಪೊಲೀಸರ ಬದಲು ಇಸ್ಪಿಟ್​ ಅಡ್ಡೆ ಮೇಲೆ ನಡೀತಿದೆ ರೌಡಿಗಳ ದಾಳಿ/ ಕಾಡಾ ಕಾರ್ತಿ ಲಕ್ಷ ಲಕ್ಷ ಸುಲಿಗೆ/ JP BIG Exclusive

ರೌಡಿಶೀಟರ್​ ಹಂದಿ ಅಣ್ಣಿಯ ಕೊಲೆಯ ನಂತರ, ಶಿವಮೊಗ್ಗದಲ್ಲಿ ಹೊಸದೊಂದು ವಾತಾವರಣ ನಿರ್ಮಾಣವಾಗಿದೆ. ಆ ವಾತವರಣ ಅಂಡರ್​ವರ್ಲ್ಡ್​ ನಲ್ಲಿ ಪೊಲೀಸರಿಗೆ ಸವಾಲು ಆಗುವಂತಹ ಸನ್ನಿವೇಶಗಳನ್ನು ನಿರ್ಮಾಣ ಮಾಡುತ್ತಿದೆ. ಎಸ್​ಪಿ ಮಿಥುನ್​ ಕುಮಾರ್ ಕಾನೂನು ಸುವ್ಯವಸ್ಥೆಗೆ ದಕ್ಕೆಯಾದರೇ ಕಠಿಣ ಕ್ರಮ ಎಂದು ಆರಂಭದಲ್ಲಿಯೇ ಗುಡುಗಿದ್ದರು. ಅಲ್ಲದೆ ತಮ್ಮ ಮಾತಿಗೆ ಪೂರಕವಾಗಿ ಕಠಿಣ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದ್ದಾರೆ. 

ಇದನ್ನು ಸಹ ಓದಿ : bhadravati BREAKING NEWS / ಭದ್ರಾವತಿ ರೌಡಿಗಳ ಮನೆಗಳ ಮೇಲೆ ಪೊಲಿಸರ ರೇಡ್​

ಆದಾಗ್ಯು , ಶಿವಮೊಗ್ಗದಲ್ಲಿ  ಬಡ್ಡಿಂಗ್​ ರೌಡಿಗಳು ದುಡ್ಡು ಮಾಡಲು ಹೊಸದೊಂದು ದಾರಿ ಹುಡುಕಿಕೊಂಡಿವೆ. ಅದಕ್ಕೆ ಆ ರೌಡಿಗಳು ಬಳಸಿಕೊಳ್ಳುತ್ತಿರುವ ಹೆಸರು ಕಾಡಾ ಕಾರ್ತಿ & ಆ್ಯಂಡ್​  ಟೀಂ. ಹೌದು, ಶಿವಮೊಗ್ಗದಲ್ಲಿ ಕಾಡಾ ಕಾರ್ತಿ ಹೆಸರಿನಲ್ಲಿ ದುಡ್ಡು ವಸೂಲಿ ಮಾಡುವ ಪ್ರವೃತ್ತಿಗಳು ನಡೆಯುತ್ತಿವೆ. ಅದರಲ್ಲಿಯು ವಿಶೇಷವಾಗಿ ಇಸ್ಪೀಟ್ ಅಡ್ಡೆಗಳೇ ಇಂತಹವರ ಟಾರ್ಗೆಟ್ ಆಗಿದೆ ಎಂಬುದು ಖಚಿತವಾಗಿ ಮಲೆನಾಡು ಟುಡೆಗೆ ಸಿಕ್ಕಿರುವ ಮಾಹಿತಿ. 

ಹಂದಿ ಅಣ್ಣಿಯ ಕೊಲೆಯ ಆರೋಪಿಗಳು

ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

ಸಾಮಾನ್ಯವಾಗಿ ಇಸ್ಪಿಟ್ ಅಡ್ಡೆಗಳ ಪೊಲೀಸರ ರೇಡ್​ ನಡೆಯುತ್ತದೆ. ಆದರೆ ಇತ್ತೀಚಿನ ಕೆಲದಿನಗಳಲ್ಲಿ ಇಸ್ಪಿಟ್ ಅಡ್ಡೆಗಳ ಮೇಲೆ ಕಾಡಾ ಕಾರ್ತಿ ಹೆಸರನ್ನ ಹೇಳಿಕೊಂಡು ಬರುವ ಗ್ಯಾಂಗ್​ನ ದಾಳಿ ನಡೆಯುತ್ತಿದೆ. ಅಷ್ಟೆಅಲ್ಲದೆ ಅಂದರ್​ ಆಗಿರುವ ಕಾಡಾ ಕಾರ್ತಿ ಮತ್ತವನ ಟೀಂನ ಹೆಸರು ಹೇಳಿ ಲಕ್ಷ ಲಕ್ಷ ಸುಲಿಗೆ ಮಾಡಲಾಗುತ್ತಿದೆ. 

ಇದನ್ನು ಸಹ ಓದಿ : ರಾಷ್ಟ್ರ ಮಟ್ಟದಲ್ಲಿ ಮರ್ಯಾದೆ ಕಳೆದ ಶಿವಮೊಗ್ಗ ಜಿಲ್ಲೆಯ ಏಳಿಗೆ ಸರ್ಕಾರಿ ಶಾಲೆಯ ಸೀರೆ ಶೌಚಾಲಯ

ಇತ್ತೀಚೆಗೆ ಶಿವಮೊಗ್ಗ ಪೊಲೀಸರು ವಿದ್ಯಾನಗರ-ಮತ್ತೂರು ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದರು ಎಂಬ ಆರೋಪದ ಮೇರೆಗೆ ತೊಟ್ಟಿ ಸೀನಾ & ಗ್ಯಾಂಗ್​ನ್ನ ಅರೆಸ್ಟ್​ ಮಾಡಿದ್ದರು. ಆದರೆ ಇವರ ಅರೆಸ್ಟ್​ಗೂ ಕೆಲದಿನ ಮೊದಲು ತೊಟ್ಟಿ ಸೀನಾ ಕಲ್ಲಳ್ಳಿಯಲ್ಲಿ ನಡೆಸ್ತಿದ್ದ ಇಸ್ಪೀಟ್​ ಅಡ್ಡೆಯ ಮೇಲೆ ಕಾಡಾ ಕಾರ್ತಿಯ ಹೆಸರು ಹೇಳಿಕೊಂಡು ದಾಳಿ ಮಾಡಿದ್ದ ಹುಡುಗರು ಐದು ಲಕ್ಷ ರೂಪಾಯಿಯವರೆಗೂ ವಸೂಲಿ ಮಾಡಿದ್ದಾರಂತೆ. ಆನಂತರ ಪೊಲೀಸರು ದರೋಡೆ ಕೇಸ್​ನಲ್ಲಿ ತೊಟ್ಟಿ ಸೀನನ ಗ್ಯಾಂಗ್​ನ್ನ ಅರೆಸ್ಟ್ ಮಾಡಿದ್ದಾರೆ. ಇನ್ನೊಂದು ಘಟನೆಯಲ್ಲಿ ಚೆನ್ನಗಿರಿ ಸಮೀಪದ ಮಾವಿನಕಟ್ಟೆಯ ಬಳಿ ಇಸ್ಪೀಟ್ ಅಡ್ಡೆಯೊಂದರ ಮೇಲೆ ದಾಳಿ ಮಾಡಿದ್ದ ಟೀಂವೊಂದು 10 ಲಕ್ಷ ರೂಪಾಯಿ ವಸೂಲಿ ಮಾಡಿತ್ತು. ಅಲ್ಲಿಯು ಆ ಟೀಂ ಕಾಡಾ ಕಾರ್ತಿ ಹೆಸರನ್ನೆ ಬಳಸಿತ್ತು. ಇದರ ನಂತರ ಹೊಸದುರ್ಗದಲ್ಲಿಯು ಈ ಸಂಬಂಧ ಕೇಸ್​ವೊಂದು ನಡೆದಿರುವ ಬಗ್ಗೆ ಆರೋಪ ಕೇಳಿಬಂದಿದೆ.  

ಇದನ್ನು ಸಹ ಓದಿ : ಅವಳೊಬ್ಬಳು, ಅವಳಿಗಿಬ್ಬರು…! ತ್ರಿಶಂಕು ಸಂಸಾರದಲ್ಲಿ ಸಿಕ್ಕಿಬಿದ್ದ ಪ್ರಿಯಕರ/ ಭದ್ರಾವತಿ ಕಿಡ್ನ್ಯಾಪ್​ ಕೇಸ್​ ಟ್ವಿಸ್ಟ್

ಹಾಗಂತ ಈ ವಿಚಾರ ಪೊಲೀಸ್ ಇಲಾಖೆ ಗೊತ್ತಿಲ್ಲ ಅಂತೇನಿಲ್ಲ, ಇಲಾಖೆ ಅಂತರಾಳದಲ್ಲಿ ವಿಚಾರ ಹರಿದಾಡುತ್ತಿದೆ. ಮೇಲಾಗಿ ಈ ನಿಟ್ಟಿನಲ್ಲಿ ಶಫಿ ಹಾಗೂ ಕೆಲವರನ್ನು ಬಂಧಿಸಿ ಅಂದರ್​ ಮಾಡಿದ್ಧಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಕಾಡಾ ಕಾರ್ತಿಯ ಹೆಸರು ಹೇಳುತ್ತಿರುವ ಬಡ್ಡಿಂಗ್​ ರೌಡಿಗಳು ಕಂಟ್ರೋಲ್​ಗೆ ಸಿಗುತ್ತಿಲ್ಲ. ಕಾಡಾ ಕಾರ್ತಿ ಆ್ಯಂಡ್​ ಗ್ಯಾಂಗ್​ ಈ ಸುಲಿಗೆ ಪ್ರಕರಣಗಳಲ್ಲಿ ನೇರ ಪಾತ್ರ ವಹಿಸಿದೆಯೇ?  ಅಥವಾ ಕಾಡಾ ಕಾರ್ತಿಯ ಹೆಸರನ್ನು ಹೇಳಿಕೊಂಡು ಬೇರೆ ಬೇರೆ ಟೀಂಗಳು ಕಾಸು ಮಾಡಿಕೊಳ್ತಿವೆಯೇ? ಎರಡು ಪ್ರಶ್ನೆಗಳಿಗು ಸದ್ಯ ಮಟ್ಟಿಗೆ ಇರಹಬಹದು ಎಂಬ ಉತ್ತರ ಸಿಗುತ್ತಿದೆ. 

ಇದನ್ನುಸಹ ಓದಿ : ರಾಜ್ಯ ಸಚಿವ ಸಂಪುಟದಲ್ಲಿ ತೀರ್ಥಹಳ್ಳಿಗೆ 75 ಕೋಟಿಯ ಕಾಮಗಾರಿ ಸ್ಯಾಂಕ್ಷನ್​/ ಎರಡು ಸೇತುವೆ ನಿರ್ಮಾಣಕ್ಕೆ ಅಸ್ತು

ಮುಖ್ಯವಾಗಿ ಅಣ್ಣಿ ಕೊಲೆಯ ಬಳಿಕ ಶಿವಮೊಗ್ಗ ರೌಡಿ ಮಾರ್ಕೆಟ್​ನಲ್ಲಿ ಕಾಡಾ ಕಾರ್ತಿಯ ಹೆಸರು ಜೋರಾಗಿ ಓಡುತ್ತಿದೆ. ಅದರಲ್ಲಿಯು ಹೆಬ್ಬೆಟ್ಟು ಹಾಗೂ ನವುಲೆ ನಡುವಿನ ವೈಷಮ್ಯಗಳ ನಡುವೆ ಕಾಡಾ ಕಾರ್ತಿ ಫೀಲ್ಡ್​ನಲ್ಲಿ ಮುಂಚೂಣಿಗೆ ಬಂದಿರುವುದನ್ನೆ ಕೆಲವರು ಎನ್​ಕ್ಯಾಶ್ ಮಾಡಿಕೊಳ್ತಿದ್ಧಾರೆ ಎಂಬ ಮಾಹಿತಿಯಿದೆ. ಈ ನಿಟ್ಟಿನಲ್ಲಿ  ಶಿವಮೊಗ್ಗ ಪೊಲೀಸರು ರೌಡಿ ಗಿರಾಕಿಗಳನ್ನು ಕಂಟ್ರೋಲ್​ಗೆ ತೆಗೆದುಕೊಳ್ಳಲು ಮುಂದಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp 

 

Leave a Comment