ತುಂಗಾ ನದಿಯಲ್ಲಿ ಬೆಂಗಳೂರಿನ ಎಲ್ಲಾ ನಾಲ್ವರ ಮೃತದೇಹ ಪತ್ತೆ! ಸಂಕಷ್ಟದಲ್ಲಿ ನೆರೆವಾದ ತೀರ್ಥಹಳ್ಳಿಗರು! ಇಲ್ಲಿವರೆಗೂ ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
Four Bengaluru Youths Drown in Tunga River Near Mahishi
Four Bengaluru Youths Drown in Tunga River Near Mahishi

ಸುದ್ದಿಯ ಸ್ಥಳ: Bengaluru, Karnataka

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತಾಲೂಕಿನ ಮಹಿಷಿ ಸಮೀಪ ನಿನ್ನೆ ದಿನ ತುಂಗಾ ನದಿಯಲ್ಲಿ ಈಜಲು ನೀರಿಗೆ ಇಳಿದ ಬೆಂಗಳೂರಿನ 4 ಯುವಕರು ನೀರುಪಾಲಾಗಿದ್ದರು. ಈ ವಿಷಯ ಗೊತ್ತಾಗುತ್ತಲೇ ತೀರ್ಥಹಳ್ಳಿಯ ಯುವಕರೆಲ್ಲಾ ಒಟ್ಟಾಗಿ ಸ್ಥಳಕ್ಕೆ ಬಂದು ರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳನ್ನ ಕೈಗೊಂಡಿದ್ದರು. ತೀರ್ಥಹಳ್ಳಿ ಯುವಕರು ಸ್ಥಳೀಯರು ಘಟನೆ ಸಂದರ್ಭದಲ್ಲಿ ತೋರಿದ ಮುತುವರ್ಜಿಯಿಂದಲೇ ಕತ್ತಲಾಗುವ ಹೊತ್ತಿಗೆ ಎಲ್ಲಾ ನಾಲ್ವರ ಮೃತದೇಹ ಪತ್ತೆಯಾಗಿದೆ. ಇನ್ನೂ ನಾಲ್ವರನ್ನ ರಕ್ಷಿಸುವ ನಿಟ್ಟಿನಲ್ಲಿ ಪಟ್ಟ ಪ್ರಯತ್ನಗಳು ಮಾನವೀಯತೆಗೆ ಸಾಕ್ಷಿಯಾಗಿದ್ದವು.

ನಡೆದಿದ್ದೇನು?

ಬೆಂಗಳೂರಿನಿಂದ 2 ಟೆಂಪೋ ಟ್ರಾವೆಲರ್ ವಾಹನಗಳಲ್ಲಿ ಆಗಮಿಸಿದ್ದ ಯುವಕರ ಪೈಕಿ 4 ಮಂದಿ ಹೊಸ ಸೇತುವೆಯ ಕೆಳಭಾಗದಲ್ಲಿ ಈಜಲು ನದಿಗೆ ಇಳಿದಿದ್ದರು. ಈ ವೇಳೆ ನಾಲ್ವರೂ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿದ ತಕ್ಷಣ ತೀರ್ಥಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮಾಳೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಆರಂಭಿಸಿದರು. ಅದೇ ಹೊತ್ತಿಗೆ ಕುರುವಳ್ಳಿ ನಾಗರಾಜ್ ಮತ್ತು ಅವರ ಗೆಳೆಯರ ತಂಡ, ಪ್ರಮೋದ್ ಪೂಜಾರಿ, ನಾಗೇಶ್ ಗುಂಡ, ಲಿಂಗರಾಜ್, ಕವಿರಾಜ್, ಪ್ರಕಾಶ್, ಸುಬ್ರಮಣ್ಯ ಶೆಟ್ಟಿ ಹಾಗೂ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದರು. ರಕ್ಷಣೆ ಬೇಕಾದ ಸಾಮಗ್ರಿಗಳನ್ನ ಹೊತ್ತುಕೊಂಡು ಬಂದರು, ಅವಶ್ಯಕತೆ ಇರುವ ಈಜುಗಾರರನ್ನ ಕರೆಸುವ ಪ್ರಯತ್ನಮಾಡಿದರು, ಈಶ್ವರ್ ಮಲ್ಪೆಯನ್ನ ಸಂಪರ್ಕಿಸಿದರು. ಹೀಗೆ ಪ್ರತಿ ಹಂತದಲ್ಲಿ ತೀರ್ಥಹಳ್ಳಿಗರ ತಂಡ ನೆರವಿಗೆ ನಿಂತಿತ್ತು.

ನೆರವಿಗೆ ನಿಂತ ತೀರ್ಥಹಳ್ಳಿಗರು

ಇದೇ ಸಂದರ್ಭದಲ್ಲಿ ಶಿವಮೊಗ್ಗದ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಶಿವಮೊಗ್ಗದಿಂದ ಆಗಮಿಸಿದ ಯುವಕರ ತಂಡವೂ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಶೋಧದಲ್ಲಿ ಪಾಲ್ಗೊಂಡಿತು. ಉದಯಪುರ, ಮೈಸಿ ಹಾಗೂ ದಬ್ಬಣಗದ್ದೆಯ ಯುವಕರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗೆ ಸಹಕರಿಸಿದರು.

ಅಂತಿವಾಗಿ ಅಗ್ನಿಶಾಮಕ ದಳದ ಅಧಿಕಾರಿ ಪುಲ್ಸಿಂಗ್ ಚೌಹಾಣ್ ಲಂಬಾಣಿ ಸಂತೋಷ್, ಸಚಿನ್, ಶ್ರೀಧರ್, ಶಶಿಕುಮಾರ್ ಹಾಗೂ ಅಲ್ತಾಫ್ ಅವರು ನದಿಯಲ್ಲಿ ಶೋಧ ನಡೆಸಿ ಕಡು ಕತ್ತಲು ಏರುವ ಹೊತ್ತಿಗೆ ಮೃತದೇಹಗಳನ್ನ ಹೊರಕ್ಕೆ ತೆಗೆದರು.. ಆನಂತರ ಮೃತದೇಹಗಳನ್ನ ಸಾಗಿಸಲು ಸಹ ತೀರ್ಥಹಳ್ಳಿಗರು ನೆರವಾಗಿದ್ದು ಮಾನವೀಯತೆಗೆ ಸಾಕ್ಷಿ ಹೇಳಿದಂತಿತ್ತು.

ಇನ್ನೂ ಮೃತ ಯುವಕರ ಕುಟುಂಬದವರು ಶೋಧಕ್ಕೆ ನೆರವಾದ ಕುರುವಳ್ಳಿ ನಾಗರಾಜ್, ಪ್ರಮೋದ್ ಪೂಜಾರಿ ಹಾಗೂ ಅವರ ತಂಡಕ್ಕೆ ಮತ್ತು ಈಶ್ವರ್ ಮಲ್ಪೆ ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.ಮೃತದೇಹಗಳನ್ನು ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಿದ ಶ್ರೀಕಾಂತ್ ಅವರಿಗೆ ಕುಟುಂಬದವರು ಹಾಗೂ ತೀರ್ಥಹಳ್ಳಿಯ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor