ಸುದ್ದಿಯ ಸ್ಥಳ: Bengaluru, Karnataka
ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಮಹಿಷಿ ಸಮೀಪದ ತುಂಗಾನದಿಯಲ್ಲಿ ನಾಲ್ವರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನೀರಿನಲ್ಲಿ ಮುಳುಗಿದವರನ್ನ ಬೆಂಗಳೂರಿನ ನಾಲ್ವರು ಕಾರ್ತಿಕ್ (31), ನಕುಲ್ (19), ಪವನ್ (30) ಹಾಗೂ ಚೇತನ್ (19) ಎಂದು ಗುರುತಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಓರ್ವನ ಮೃತದೇಹ ಪತ್ತೆಯಾಗಿದೆ
ಬೆಂಗಳೂರಿನ ಕತ್ರಿಗುಪ್ಪೆಯಿಂದ ಮದುವೆ ಸಮಾರಂಭಕ್ಕಾಗಿ ವಕೀಲರ ತಂಡವೊಂದು ಶಿವಮೊಗ್ಗ ನಗರಕ್ಕೆ ಬಂದಿತ್ತು. ಅಲ್ಲಿಂದ ಗೂಗಲ್‌ನಲ್ಲಿ ಸ್ಥಳವೊಂದನ್ನು ನೋಡಿಕೊಂಡು ಎರಡು ಟಿಟಿಯಲ್ಲಿ ತೀರ್ಥಹಳ್ಳಿ ಕಡೆಗೆ ಬಂದಿದ್ದರು ಎನ್ನಲಾಗಿದೆ. ಮಹಿಷಿಯಲ್ಲಿ ನೀರಿಗಿಳಿದ ಒಬ್ಬಾತ ಮುಳುಗಿದ್ದು, ಆತನನ್ನು ಹಿಡಿದು ಮೇಲೆತ್ತಲು ತೆರಳಿದ ಉಳಿದ ಮೂವರು ಕೂಡ ನೀರಿನಲ್ಲಿ ಮುಳುಗಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕದಳ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈಶ್ವರ್ ಮಲ್ಪೆ ಕೂಡ ಆಗಮಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
