ಶಿವಮೊಗ್ಗ : 200 ರೂಪಾಯಿ ಸಾಲದ ವಿಚಾರವಾಗಿ ವ್ಯಕ್ತಿಯ ಮೇಲೆ ಬಾಟಲಿಯಿಂದ ಹಲ್ಲೆ; ಜೀವ ಬೆದರಿಕೆ.

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸುದ್ದಿ ಸಾಂದರರ್ಭಿಕ ಚಿತ್ರ
ಮಲೆನಾಡು ಟುಡೆ ಸುದ್ದಿ ಸಾಂದರರ್ಭಿಕ ಚಿತ್ರ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಸಾಲ ಪಡೆದುಕೊಂಡಿದ್ದ 200 ರೂಪಾಯಿ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಆರೋಪಿ ಬಾಟಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಸಂಭವಿಸಿದೆ.

ಶಿವಮೊಗ್ಗದ ಪ್ರದೇಶವೊಂದರಲ್ಲಿ ನಡೆದ ಘಟನೆಯ ವಿವರ ನೋಡುವುದಾದರೆ, ದೂರುದಾರ ವ್ಯಕ್ತಿ ನಡೆದುಕೊಂಡು ಹೋಗುತ್ತಿರುವಾಗ ಆತನಿಗೆ 200 ರೂಪಾಯಿ ಹಣ ಸಾಲ ನೀಡಿದ್ದ ವ್ಯಕ್ತಿ ಎದುರು ಬರುತ್ತಾನೆ. ಹಾಗೆಯೇ, ಹೇ ನನ್ನ ಬಳಿ ಪಡೆದುಕೊಂಡಿದ್ದ 200 ರೂಪಾಯಿ ವಾಪಸ್ ಕೊಡು ಎಂದು ಕೇಳಿದ್ದಾನೆ. ಆಗ ದೂರುದಾರ ವ್ಯಕ್ತಿ, ನನ್ನ ಬಳಿ ಈಗ ಹಣವಿಲ್ಲ, ಇನ್ನೊಂದು ದಿನ ಕೊಡುತ್ತೇನೆ ಎಂದಾಗ, ಆರೋಪಿ ದೂರುದಾರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.

ಆದರೂ ಸಹ ದೂರುದಾರ ಅದನ್ನೆಲ್ಲಾ ಕೇಳಿಸಿಕೊಂಡು ತೆರಳುತ್ತಿದ್ದ ವೇಳೆ, ಹಿಂಬದಿಯಿಂದ ಬಾಟಲಿ ಹಿಡಿದುಕೊಂಡು ಬಂದ ಆರೋಪಿ ದೂರುದಾರನ ತಲೆಗೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೂರುದಾರನ ತಲೆಗೆ ಗಾಯಗಳಾಗಿದ್ದು, ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor