ಶಿಕಾರಿಪುರ : ಹೋರಿ ಸ್ಫರ್ದೆ ವೀಕ್ಷಿಸಲು ತೆರಳಿದ್ದ ವೇಳೆ ಅವಘಡ : ಹೋರಿ ತಿವಿದು ವ್ಯಕ್ತಿ ಸಾ*ವು

ಹಂಚಿಕೊಳ್ಳಿ
WhatsApp Facebook X Telegram
Shikaripura Hori Habba Tragedy
Shikaripura Hori Habba Tragedy

ಸುದ್ದಿಯ ಸ್ಥಳ: Shikaripura, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ: ಹೋರಿ ಹಬ್ಬವನ್ನು ವೀಕ್ಷಿಸಲು ತೆರಳಿದ್ದ ಸಂದರ್ಭದಲ್ಲಿ ಹೋರಿ ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಶಿಕಾರಿಪುರ ತಾಲೂಕಿನ ಚುರ್ಚುಗುಂಡಿಯಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚುರ್ಚುಗುಂಡಿಯ ಅರುಣ್ (48) ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ.

ಚುರ್ಚುಗುಂಡಿಯಲ್ಲಿ ನಡೆಯುತ್ತಿದ್ದ ಹೋರಿ ಹಬ್ಬವನ್ನು ವೀಕ್ಷಿಸಲು ಅರುಣ್ ತೆರಳಿದ್ದರು. ಈ ಸಂದರ್ಭದಲ್ಲಿ ಸ್ಪರ್ಧೆಗಿಳಿದಿದ್ದ ಹೋರಿ ದಿಢೀರ್ ಎಂದು ಅರುಣ್ ಅವರ ಮೇಲೆ ಎರಗಿ ತಿವಿದಿದೆ. ಈ ಹಿನ್ನೆಲೆಯಲ್ಲಿ ಅರುಣ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶೀಘ್ರವೇ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತು. ಆದರೆ ದುರದೃಷ್ಟವಶಾತ್ ಮಾರ್ಗಮಧ್ಯದಲ್ಲಿಯೇ ಅರುಣ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಅಂದರೆ ಗುರುವಾರ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ನಡೆದ ಹೋರಿ ಹಬ್ಬದ ಸ್ಪರ್ಧೆಯನ್ನು ಮನೆ ಬಾಗಿಲಲ್ಲಿ ವೀಕ್ಷಣೆ ಮಾಡುತ್ತಿದ್ದ ಈರಪ್ಪ (84) ರವರು ಸಹ ಹೋರಿ ತಿವಿದು ಸಾವನ್ನಪ್ಪಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor