ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ಶಾಂತಲಾ ಸ್ಪೇರೋ ಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನ ಉದ್ಯೋಗಿ ತೇಜು ಟಿ. ಅವರ ಕುಟುಂಬಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ವತಿಯಿಂದ ₹30 ಲಕ್ಷ ಅಪಘಾತ ವಿಮಾ ಪರಿಹಾರ ವಿತರಿಸಲಾಗಿದೆ. ಈ ಸಂಬಂಧ ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಅರಿಂದಮ್ ಪಾತ್ರ ಅವರು ಮೃತರ ಕುಟುಂಬ ಸದಸ್ಯರಿಗೆ ವಿಮಾ ಪರಿಹಾರದ ಚೆಕ್ ಹಸ್ತಾಂತರಿಸಿದ್ದಾರೆ.
ಘಟನೆ ಹಿನ್ನೆಲೆ
ಶಿವಮೊಗ್ಗದ ಶಾಂತಲಾ ಸ್ಪೇರೋ ಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತೇಜು ಟಿ. ಸ್ನೇಹಿತರ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅವರ ಬೈಕ್ ಆಕ್ಸಿಡೆಂಟ್ ಆಗಿತ್ತು. ಹಂದಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಅಪಘಾತವಾಗಿತ್ತು. ಈ ವೇಳೆ ತಲೆಗೆ ಗಂಭೀರ ಗಾಯವಾಗಿ ತೇಜು ಅವರು ಮೃತಪಟ್ಟಿದ್ದರು. ಮೃತ ತೇಜು ಟಿ. ಅವರು ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ವೇತನ ಪ್ಯಾಕೇಜ್ ಖಾತೆಯನ್ನು ಹೊಂದಿದ್ದರು. ಬ್ಯಾಂಕಿನ ವೇತನ ಪ್ಯಾಕೇಜ್ ಅಡಿಯಲ್ಲಿ ಲಭ್ಯವಿರುವ ವಿಶೇಷ ಅಪಘಾತ ವಿಮಾ ಸೌಲಭ್ಯದ ಮೂಲಕ ಅವರ ಕುಟುಂಬಕ್ಕೆ ₹30 ಲಕ್ಷ ಪರಿಹಾರ ದೊರೆತಿದೆ.
ಎಸ್‌ಬಿಐನ ವೇತನ ಪ್ಯಾಕೇಜ್ ಖಾತೆಯೊಂದಿಗೆ ಸಂಬಂಧಿಸಿದ ಅಪಘಾತ ವಿಮಾ ಸೌಲಭ್ಯವು ಮೃತ ಉದ್ಯೋಗಿಯ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಿದೆ. ಬ್ಯಾಂಕಿನ ವಿಮಾ ಯೋಜನೆಯಡಿ ಪರಿಹಾರ ಮಂಜೂರಾಗಿದ್ದು, ಅದಕ್ಕೆ ಸಂಬಂಧಿಸಿದ ಚೆಕ್ ಅನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶಾಂತಲಾ ಸ್ಪೇರೋ ಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ (ಕಾರ್ಯಾಚರಣೆ) ವೀರಶೇಖರಪ್ಪ, ಮಾನವ ಸಂಪನ್ಮೂಲ ಹಾಗೂ ಲೆಕ್ಕಪತ್ರ ವಿಭಾಗದ ವ್ಯವಸ್ಥಾಪಕ ಸತೀಶ್, ಎಸ್‌ಬಿಐ ಅಧಿಕಾರಿಗಳಾದ ಗಿರೀಶ್ ಸಿ. ಸಾಣೆನಹಳ್ಳಿ, ಕಾರ್ಪೊರೇಟ್ ವೇತನ ಪ್ಯಾಕೇಜ್ ವಿಭಾಗದ ಶಶಿಕುಮಾರ್ ಎಚ್.ಆರ್. ಹಾಗೂ ಶಾಂತಲಾ ಸ್ಪೇರೋ ಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನ ಸಿಬ್ಬಂದಿ ಉಪಸ್ಥಿತರಿದ್ದರು.
