ಅಮೆಜಾನ್​ನಲ್ಲಿ ಬುಕ್ ಮಾಡಿದ ಐಟಂಗೋಸ್ಕರ ಗೂಗಲ್​ನಲ್ಲಿ CC ಸರ್ಚ್​​ ಮಾಡಿದ್ದಷ್ಟೆ ! ₹1.44 ಲಕ್ಷ ಪ್ರಾಢ್ ಆಗೋಯ್ತು!

ಹಂಚಿಕೊಳ್ಳಿ
WhatsApp Facebook X Telegram
Without Taking Loan
Without Taking Loan

ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು/ ಅಮೆಜಾನ್ ಗ್ರಾಹಕ ಸೇವೆ ಹೆಸರಿನಲ್ಲಿ ಸಂಪರ್ಕಿಸಿ ಎಪಿಕೆ ಫೈಲ್ ಕಳುಹಿಸಿ ಬ್ಯಾಂಕ್ ಖಾತೆಯಿಂದ ₹1.44 ಲಕ್ಷ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಬಗ್ಗೆ ಸೈಬರ್‌ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಸಂತೋಷ್ ಕುಮಾರ್‌ಎಂಬುವರು ಅಮೆಜಾನ್‌ನಲ್ಲಿ ಖರೀದಿಸಿದ್ದ ವಸ್ತು ತಲುಪದ ಹಿನ್ನೆಲೆಯಲ್ಲಿ ಗೂಗಲ್‌ನಲ್ಲಿ ಗ್ರಾಹಕ ಸೇವೆ ಸಂಖ್ಯೆ ಹುಡುಕಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್ ಕರೆ ಮಾಡಿ, ತಾನು ಅಮೆಜಾನ್ ಕಂಪನಿಯವನೆಂದು ಪರಿಚಯಿಸಿಕೊಂಡು, ಆರ್ಡರ್​ ರದ್ದಾಗಿದ್ದು ಹಣ ವಾಪಸ್ ನೀಡುವುದಾಗಿ ತಿಳಿಸಿದ್ದಾನೆ.

ಬಳಿಕ ಎಪಿಕೆ ಆ್ಯಪ್ ಕಳುಹಿಸಿ ಒಟಿಪಿ ನಮೂದಿಸುವಂತೆ ಸೂಚಿಸಿದ್ದಾನೆ. ಇದನ್ನು ನಂಬಿದ ಅವರು ಸೂಚನೆಯಂತೆ ಕ್ರಮ ಕೈಗೊಂಡಿದ್ದಾರೆ. ಆನಂತರ ಅ.21 ಮತ್ತು 24ರಂದು ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಸಂತ್ರಸ್ತರ ಅಕೌಂಟ್​ನಿಂದ ಒಟ್ಟು ₹1.44 ಲಕ್ಷ ವರ್ಗಾವಣೆಯಾಗಿದೆ. ವಂಚನೆ ಅರಿತ ಬಳಿಕ 1930 ಸಹಾಯವಾಣಿಗೆ ದೂರು ನೀಡಿದ್ದು, ಇದೀಗ ಸೈಬರ್‌ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor