ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆ ನಡೆಸಿ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಆಸಾಮಿ? ಆಮೇಲೆ ಏನಾಯ್ತು

ಹಂಚಿಕೊಳ್ಳಿ
WhatsApp Facebook X Telegram
Shivamogga Cricket Betting ಶಿRacket Busted in Shivamogga
Shivamogga Cricket Betting Shivamogga Gym Trainer Attacked Vinobanagar Police JNNCE Hostel Student Arrested i Construction House Robbery Missing Passenger Auto Case Filed After One Year Delay heft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಸಾರ್ವಜನಿಕ ಪ್ರದೇಶದಲ್ಲಿ ಕೊಲೆ ಮಾಡ್ತೀನಿ ಎಂದು ರಾಡ್​ ಹಿಡಿದುಕೊಂಡು ಹಾವಳಿ ಮಾಡ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಲು ತೆರಳಿದ್ದ ವೇಳೆ ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪೊಲೀಸರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ವಿನೋಬಾನಗರದ 60 ಅಡಿ ರಸ್ತೆಯಲ್ಲಿ ಸಂಭವಿಸಿದೆ.

ಘಟನೆ ವಿವರ

ಇ.ಆರ್.ಎಸ್.ಎಸ್. ಕರ್ತವ್ಯಕ್ಕೆ ನೇಮಕಗೊಂಡಿದ್ದ ಪೊಲೀಸರಿಗೆ ಫೋನ್ ಕರೆ ಬಂದಿದೆ. ಫೋನ್​ ಕರೆಯನ್ನು ಸ್ವೀಕರಿಸಿದಾಗ ಇಲ್ಲಿ ಯಾರೋ ಒಬ್ಬ ವ್ಯಕ್ತಿ ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದಾನೆ ಕೂಡಲೇ ಬನ್ನಿ ಎಂದು ದೂರುದಾರರು ತಿಳಿಸಿದ್ದಾರೆ. ಈ ಹಿನ್ನೆಲೆ ಪೊಲೀಸ್​ ಸಿಬ್ಬಂದಿಗಳು ವಿನೋಬನಗರ 60 ಅಡಿ ರಸ್ತೆ, 10ನೇ ಕ್ರಾಸ್ ಬಳಿ ತೆರಳಿದ್ದಾರೆ. ಆಗ ಅಲ್ಲೊಬ್ಬ ವ್ಯಕ್ತಿ ಕೈಯಲ್ಲಿ ಕಬ್ಬಿಣದ ರಾಡೊಂದನ್ನು ಹಿಡಿದುಕೊಂಡು ಯಾರಿಗೂ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿರುವುದು ಪೊಲೀಸರಿಗೆ ಕಾಣಿಸಿದೆ. ಈ ಸಂದರ್ಭದಲ್ಲಿ ಆತನನ್ನು ತಡೆಯಲು ಪೊಲೀಸರು ಮುಂದಾದಾಗ ಆತ ನಿಮ್ಮನ್ನು ಬಿಡೋದಿಲ್ಲ ಕಣೋ ಅಂತ ಏಕಾಏಕಿ ತಲೆಗೆ ಕೈಯಿಂದ ಹೊಡೆದು, ಯೂನಿಫಾರ್ಮ್‌ನ್ನು ಹಿಡಿದು ಎಳೆದಾಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಅವರ ಸಹಾಯಕ್ಕಾಗಿ ಬಂದ ಎ.ಹೆಚ್.ಸಿ. ಅವರನ್ನೂ ಎಳೆದಾಡಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ನಂತರ ಇ.ಆರ್.ಎಸ್.ಎಸ್. ಪೊಲೀಸರು ಸ್ಥಳೀಯರ ಸಹಾಯದಿಂದ ಆತನನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಿನೋಬಾನಗರ ಪೊಲೀಸ್​ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor