ಶಿವಮೊಗ್ಗ ; ಬಿಜೆಪಿಯವರು ರೈತರ ವಿರುದ್ದ ಸ್ಟ್ರೈಕ್​ ಮಾಡ್ತಿದ್ದಾರೆ, ರೈತರಿಗೆ ಹಣ ಹೋದರೆ ಬಿಜೆಪಿಗರಿಗೆ ಹೊಟ್ಟೆ ಉರೀನಾ? ಮಧುಬಂಗಾಪ್ಪ ಹೀಗಂದಿದ್ಯಾಕೆ

ಹಂಚಿಕೊಳ್ಳಿ
WhatsApp Facebook X Telegram
Milk Price Hike Controversy
Milk Price Hike Controversy

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ರಾಜ್ಯ ಸರ್ಕಾರ ರೈತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಹಾಲಿನ ದರವನ್ನು ಹೆಚ್ಚಳ ಮಾಡಿದ್ದು, ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ರೈತರಿಗೆ ಹಣ ಹೋದರೆ ಬಿಜೆಪಿಗರಿಗೆ ಏಕೆ ಹೊಟ್ಟೆ ಉರಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.

ಹಾಲಿನ ದರ ಏರಿಕೆ ವಿಚಾರವಾಗಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಹಾಲಿನ ದರವನ್ನು ಲೀಟರ್‌ ಮೇಲೆ 8 ರೂ. ಹೆಚ್ಚಿಸಿದೆ . ಅದರಲ್ಲಿ 7 ರೂಪಾಯಿ ಹಣ ರೈತರಿಗೆ ಹೋಗುತ್ತದೆ. ಆದರೆ ಬಿಜೆಪಿಯವರು ಗ್ರಾಹಕರಿಗೆ ಇದು ಹೊರೆಯಾಗುತ್ತದೆ ಎಂದು ಸ್ಟ್ರೈಕ್ ಮಾಡುತ್ತಿದ್ದಾರೆ.

ಬಿಜೆಪಿಯವರು ರೈತರ ವಿರುದ್ಧವಾಗಿ ಸ್ಟ್ರೈಕ್ ಮಾಡುತ್ತಿದ್ದಾರೆ. ರೈತರಿಗೆ ಹಣ ಹೋದರೆ ಬಿಜೆಪಿಗರಿಗೆ ಹೊಟ್ಟೆ ಉರೀನಾ ಎಂದು ಪ್ರಶ್ನಿಸಿದ ಸಚಿವರು, ರೈತರಿಗೆ ಮೇವು ತರಲು, ಪೆಟ್ರೋಲ್ ವೆಚ್ಚ, ಹಾಲು ಉತ್ಪಾದನೆ ಹೆಚ್ಚಿಸಲು ಮೇವಿನ ಖರ್ಚು ಸೇರಿದಂತೆ ಅನೇಕ ಖರ್ಚುಗಳು ಬರುತ್ತವೆ. ಕಳೆದ 10 ವರ್ಷಗಳ ನಂತರ ಹಾಲಿನ ಬೆಲೆ ಹೆಚ್ಚಾಗುತ್ತಿದ್ದು, ಇದು ರೈತರಿಗೆ ಅನುಕೂಲವಾಗುತ್ತದೆ. ನಮ್ಮ ರಾಜ್ಯದಲ್ಲಿ ಮಾತ್ರ ಹಾಲಿನ ಬೆಲೆ ಇಷ್ಟು ಕಡಿಮೆ ಇರುವುದು ಎಂದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor