ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಸವಳಂಗ ರಸ್ತೆಯ ಮೂಲಾ ವೈನ್ಸ್ ಎದುರು ರಸ್ತೆ ಡಿವೈಡರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಗ್ಗೆ ತಡವಾಗಿ ವರದಿಯಾಗಿದೆ. ಗಣಪತಿ ವಿಸರ್ಜನೆ ಮುಗಿಸಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ.
ನವುಲೆಯಲ್ಲಿ ಗಣಪತಿ ವಿಸರ್ಜನೆಗೆಂದು ತೆರಳಿದ್ದು ಯುವರಿಬ್ಬರು ಯಮಹಾ ಆರ್.ಎಕ್ಸ್ ಬೈಕ್ನಲ್ಲಿ ಹಿಂತಿರುಗುತ್ತಿದ್ದರು. ಬೈಕ್ಗೆ ಪೆಟ್ರೋಲ್ ಹಾಕಿಸಿಕೊಂಡು ಸರ್ಜಿ ಕನ್ವೆನ್ಷನ್ ಹಾಲ್ ಕಡೆಗೆ ಹೋಗುವಾಗ ಮೂಲಾ ವೈನ್ಸ್ ಎದುರು ರಸ್ತೆ ಮಧ್ಯದ ಡಿವೈಡರ್ಗೆ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಯುವಕನ ತಲೆಗೆ, ಎಡ ಹುಬ್ಬಿಗೆ ತೀವ್ರ ಪೆಟ್ಟಾಗಿದ್ದು, ಬಲಗಾಲು ಮುರಿದಿದೆ. ಹಿಂಬದಿ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ ಅಡಿ ಪ್ರಕರಣ ದಾಖಲಾಗಿದೆ.
