ಮಲೆನಾಡು ಟುಡೆ ಸುದ್ದಿ / ಸಾಗರ /ಇಲ್ಲಿನ ಗಣಪತಿ ದೇವಸ್ಥಾನ ಸಮೀಪದ ಇವತ್ತೊಂದು ಘಟನೆ ಆಘಾತ ಮೂಡಿಸಿದೆ. ಇಲ್ಲಿಯೇ ಸಮೀಪದಲ್ಲಿರುವ ಸರ್ಕಾರಿ ಬಾವಿಯಲ್ಲಿ ಸುಮಾರು 40ರಿಂದ 45 ವರ್ಷ ವಯಸ್ಸಿನ ಪುರುಷನ ಶವ ಪತ್ತೆಯಾಗಿದೆ.
ಈ ಪರಿಸರದಲ್ಲಿ ನಿನ್ನೆಯಿಂಧ ಹೆಣದ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಅನುಮಾನಗೊಂಡು ಹುಡುಕಾಡಿದ್ದಾರೆ. ಆಗ ಬಾವಿಯಿಂದ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಬಾವಿಯಲ್ಲಿ ಶವ ತೇಲುತ್ತಿರುವುದು ಕಂಡುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶವನ ಬಾವಿಯಿಂದ ಮೇಲಕ್ಕೆ ತೆಗೆದ್ರು. ಅಷ್ಟೊತ್ತಿಗೆ ಬಂದ ಪೊಲೀಸರು, ಮರಣೋತ್ತರ ಪರೀಕ್ಷೆಗೆ ಬಾಡಿ ಕಳುಹಿಸಿ ಮಹಜರ್ ಮಾಡಿದ್ರು.

ಇನ್ನೂ ಮೃತದೇಹ ಅರೆನಗ್ನ ಸ್ಥಿತಿಯಲ್ಲಿದ್ದು, ಹಿಂಭಾಗದಲ್ಲಿ ಎರಡೂ ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿದೆ. ಈ ಕಾರಣಕ್ಕೆ ಯಾರೋ ವ್ಯಕ್ತಿಯನ್ನು ಕೈ ಕಾಲು ಕಟ್ಟಿ ಬಾವಿಗೆ ಎಸೆದಿರಬಹುದು ಎಂಬ ಅನುಮಾನ ಇದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.
