ಶಿವಮೊಗ್ಗ : ಎ.ಟಿ.ಎಂ ಕಾರ್ಡ, ಪಾಸ್ ಬುಕ್ ಕಳ್ಕೋಂಡಿದ್ದೀರ ಎಂದು  ಫೋನ್​ ಮಾಡಿ ವೃದ್ದೆಗೆ 21 ಲಕ್ಷ ವಂಚಿಸಿದ ವಂಚಕರು ?

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ  : ರಾಜ್ಯದಲ್ಲಷ್ಟೇ ಅಲ್ಲದೆ ದೇಶಾದ್ಯಂತ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ. ಪೊಲೀಸರಂತೆ ನಟಿಸುವ ವಂಚಕರು ಅಮಾಯಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ದೋಚುತ್ತಿದ್ದಾರೆ. ಅದಕ್ಕೆ ಪೂರಕವಾದಂತಹ ಪ್ರಕರಣವೊಂದು ಶಿವಮೊಗ್ಗದಲ್ಲಿ ನಡೆದಿದ್ದು, ಪೊಲೀಸ್ ಅಧಿಕಾರಿಗಳಂತೆ ನಟಿಸಿದ ವಂಚಕರು ಶಿವಮೊಗ್ಗ ಮೂಲದ ವೃದ್ಧೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. 

ಘಟನೆಯ ವಿವರ ನೋಡುವುದಾದರೆ, ಶಿವಮೊಗ್ಗ ಮೂಲದ ವೃದ್ಧೆಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ಫೋನ್ ಬಂದಿದೆ. ಫೋನ್ ಸ್ವೀಕರಿಸಿದಾಗ ನಾವು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಮಾತನಾಡುತ್ತಿರುವುದು, ನಿಮ್ಮ ವಿಳಾಸ ಏನು ಎಂದು ಕೇಳಿದ್ದಾರೆ. ಆಗ ವೃದ್ಧೆ ತಮ್ಮ ವಿಳಾಸದ ಮಾಹಿತಿ ನೀಡಿದ್ದಾರೆ. 

ನಂತರ ವಂಚಕರು ನೀವು ಎಲ್ಲಾದರೂ ನಿಮ್ಮ ಎಟಿಎಂ ಕಾರ್ಡ್ ಅಥವಾ ಪಾಸ್‌ಬುಕ್ ಕಳೆದುಕೊಂಡಿದ್ದೀರಾ ಎಂದು ವಿಚಾರಿಸಿದ್ದಾರೆ. ದೂರುದಾರ ವೃದ್ಧೆಯು ಯಾವುದನ್ನೂ ಕಳೆದುಕೊಂಡಿಲ್ಲ ಎಂದು ತಿಳಿಸಿದಾಗ, ನಿಮ್ಮ ಹೆಸರಿನಲ್ಲಿ ಮುಂಬೈನ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸುಳ್ಳು ಆರೋಪ ಹೊರಿಸಿದ್ದಾರೆ. 

ನಂತರ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳೆಂದು ವೀಡಿಯೊ ಕರೆ ಮಾಡಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದ್ದರಿಂದ ನಿಮ್ಮ ಮೇಲೆ ಕೇಸು ದಾಖಲಾಗಿದೆ. ನೀವು ಹಣ ಪಾವತಿಸದಿದ್ದರೆ ಅರೆಸ್ಟ್ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.  ಇದಕ್ಕೆ ಹೆದರಿದ ದೂರುದಾರರು ತಮ್ಮ ಬ್ಯಾಂಕ್ ಖಾತೆಯಿಂದ ಒಟ್ಟು 21,00,000 ರೂ. ಹಣವನ್ನು ಆ‌ರ್.ಟಿ.ಜಿ.ಎಸ್ ಮುಖಾಂತರ ವರ್ಗಾಯಿಸಿದ್ದಾರೆ.ನಂತರ ತಾನು ಮೋಸ ಹೋಗಿರುವುದು ಅರಿವಿಗೆ ಬಂದ ನಂತರ ಶಿವಮೊಗ್ಗದ ಸಿ ಇ ಎನ್​ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ದೂರನ್ನು ನೀಡಿದ್ದಾರೆ

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor