ಶಿವಮೊಗ್ಗ : ಮಕ್ಕಳಿಗೆ ಯೂಟ್ಯೂಬ್​​ ನೋಡಲು ಮೊಬೈಲ್​ ಕೊಟ್ಟು 1.5 ಲಕ್ಷ ಕಳೆದುಕೊಂಡ ಶಿಕ್ಷಕಿ ?

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಾಲಾ ಮಕ್ಕಳಿಗೆ ಯೂಟ್ಯೂಬ್ ವಿಡಿಯೋ ನೋಡಲು ತನ್ನ ಮೊಬೈಲ್ ಫೋನ್ ನೀಡಿದ್ದ ಶಿಕ್ಷಕಿಯೊಬ್ಬರು ಸೈಬರ್ ಕ್ರೈಂ ವಂಚನೆಗೆ ಒಳಗಾಗಿ 1,59,857 ರೂಪಾಯಿ ಕಳೆದುಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ

ಎಫ್​​ ಐ ಆರ್​​​​​​ನಲ್ಲಿ ಇರುವಂತೆ ಶಿವಮೊಗ್ಗದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ದೂರುದಾರರು , ಶಾಲೆಗೆ ತೆರಳಿದ್ದಾಗ ಮಕ್ಕಳು ಅವರ ಮೊಬೈಲ್‌ನಲ್ಲಿ ಯೂಟ್ಯೂಬ್ ನೋಡುತ್ತಿದ್ದರು. ಇದೇ ಸಮಯದಲ್ಲಿ ಅವರ ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ  ಮೆಸೇಜ್​​ ಬಂದಿದ್ದು, ಅದರಲ್ಲಿ ಆರ್‌ಟಿಒ ಚಲನ್ ಸಂಬಂಧಿಸಿದ ಎಪಿಕೆ ಫೈಲ್ ಡೌನ್‌ಲೋಡ್ ಮಾಡುವಂತೆ ಸೂಚಿಸಲಾಗಿತ್ತು.

ಆರ್‌ಟಿಒ ಅಧಿಕಾರಿಗಳಂತೆ ನಟಿಸಿದ ಸೈಬರ್ ವಂಚಕರು, ನಕಲಿ ಆರ್‌ಟಿಒ ಚಲನ್ ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿಸುವ ಮೂಲಕ ಶಿಕ್ಷಕಿಯ ವೈಯಕ್ತಿಕ ಮಾಹಿತಿಗಳನ್ನು ಹ್ಯಾಕ್ ಮಾಡಿದ್ದಾರೆ. ಬಳಿಕ ಅವರ ಗಮನಕ್ಕೆ ಬಾರದಂತೆ ಹಂತ ಹಂತವಾಗಿ ಹಣ ಡ್ರಾ ಮಾಡಿದ್ದಾರೆ.

ವಂಚಕರು ಶಿಕ್ಷಕಿಯ ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್‌ನಿಂದ 60,000 ರೂ., 10,000 ರೂ., 29,000 ರೂ., 10,000 ರೂ., 3,500 ರೂ. ಹಾಗೂ 47,357 ರೂ. ಸೇರಿದಂತೆ ಒಟ್ಟು 1,59,857 ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಅಕೌಂಟ್‌ನಿಂದ ಹಣ ಕಟ್​ ಆದ ಮೆಸೇಜ್ ಬಂದ ನಂತರ ಅನುಮಾನಗೊಂಡು ಶಿಕ್ಷಕಿ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ವಂಚನೆಗೊಳಗಾಗಿರುವುದು ತಿಳಿದಿದೆ. ತಕ್ಷಣವೇ ಅವರು ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor