ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮನೆಯಲ್ಲಿ ಜಿಂಕೆ ಮಟನ್ ತಂದಿಟ್ಟಿದ್ದ ಆರೋಪ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ತಂದೆ ಹಾಗೂ ಮಗನನ್ನು ಬಂಧಿಸಿರುವ ಬಗ್ಗೆ ನಿನ್ನೆದಿನ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನ ಪತ್ತೆ ಮಾಡುತ್ತಿದ್ದಾರೆ.
ಸೆಪ್ಟೆಂಬರ್ 18ರಂದು ನಡೆದ ಘಟನೆ ಇದಾಗಿದೆ. ಉಂಬಳೇಬೈಲು ವಲಯದ ರಾತ್ರಿ ಗಸ್ತು ಸಿಬ್ಬಂದಿ ಹಾಗೂ ಲಕ್ಕಿನಕೊಪ್ಪ ಶಾಖೆಯ ಸಿಬ್ಬಂದಿಗೆ ಮನೆಯೊಂದರಲ್ಲಿ ಜಿಂಕೆ ಮಾಂಸ ಇರುವುದಾಗಿ ಇನ್ಫಾರ್ಮೆಶನ್ ಬಂದಿದೆ. ಅಪರಿಚಿತ ವ್ಯಕ್ತಿಗಳು ನೀಡಿದ ಮಾಹಿತಿ ಪಕ್ಕಾ ಮಾಡಿಕೊಂಡು ಅಧಿಕಾರಿಗಳು ರೇಡ್ ನಡೆಸಿದ್ದಾರೆ. ಯರಗನಾಳು ಗ್ರಾಮದ ಸೇತು ಎಂಬವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ಗಳಲ್ಲಿ ಜಿಂಕೆ ಮಾಂಸ ಸಿಕ್ಕಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯರಗನಾಳು ಗ್ರಾಮದ ಸೇತು (46) ಹಾಗೂ ಅವರ ಪುತ್ರ ಧನುಷ್ (18) ರನ್ನ ಬಂಧಿಸಿದ್ದಾರೆ. ಅಲ್ಲದೆ ಲೋಕೇಶ್ ನಾಯ್ಕ್ ಎಂಬಾತ ಎಸ್ಕೇಪ್ ಆಗಿದ್ದಾನೆ.ಈ ಸಂಬಂಧ ಅರಣ್ಯ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
